ಮೂಡುಬಿದಿರೆ: ಅವಕಾಶ ಸಿಕ್ಕಾಗ ಉಪಯೋಗಿಸಿಕೊಳ್ಳಿ, ನಾಳೆಯ ದಿನಕ್ಕಾಗಿ ಕಾದು, ಇಂದಿನ ಸಮಯ ವ್ಯರ್ಥ ಮಾಡಬೇಡಿ ಎಂದು ನೆದಲ್ರ್ಯಾಂಡ್ನ ಅಟ್ಲಾಸಿಯನ್ ಸಂಸ್ಥೆಯ ಎಂಟರ್ಪ್ರೈಸ್ ಡೀಲ್ ಮ್ಯಾನೇಜರ್ ಹಾಗೂ ವಿಭಾಗದ ಹಿರಿಯ ವಿದ್ಯಾರ್ಥಿ ಐಶ್ವರ್ಯ ಶೆಟ್ಟಿ ನುಡಿದರು. ಆಳ್ವಾಸ್ ಕಾಲೇಜಿನ ಮೋಹಿನಿ ಅಪ್ಪಾಜಿ ಸ್ಮಾರಕ ಸಭಾಂಗಣದಲ್ಲಿ ವ್ಯವಹಾರ ನಿರ್ವಹಣಾ ವಿಭಾಗವು ಹಮ್ಮಿಕೊಂಡ ವ್ಯವಹಾರ ನಿರ್ವಹಣೆ ಹಾಗೂ ಸಾಂಸ್ಕøತಿಕ ಸಮಾವೇಶ ಎಂತೂಸಿಯಾ 2024ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಯೋಗಿಕ ಚಟುವಟಿಕೆಗಳು ನಮಗೆ ಹೊಸ ಜಗತ್ತನ್ನು ಪರಿಚಯಿಸುತ್ತದೆ. ಆಳ್ವಾಸ್ನಲ್ಲಿ ವಿದ್ಯಾರ್ಥಿಯ ನೆಲೆಯಲ್ಲಿ ಅವಕಾಶ ಸಿಕ್ಕಾಗ ಹಲವಾರು ಕೌಶಲಗಳನ್ನು ಕಲಿತಿದ್ದೇನೆ. ಇಲ್ಲಿ ಪ್ರಾಯೋಗಿಕ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶವಿದೆ. ಇಂತಹ ಅವಕಾಶವನ್ನು ನೀವು ಉಪಯೋಗಿಸಿಕೊಳ್ಳಿ. ಕಲಿಕೆ ಮತ್ತುಅನುಭವಗಳೊಂದಿಗೆ ಈ ಮೂರು ವರ್ಷದ ಸಮಯವನ್ನು ಸದಪಯೋಗಪಡಿಸಿಕೊಳ್ಳಿ. ಪ್ರತಿ ಕ್ಷಣವನ್ನು ಉಪಯೋಗಿಸಿಕೊಳ್ಳಿ ಎಂದರು ಎಸ್ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ವಿಭಾಗದ ಹಿರಿಯ ವಿದ್ಯಾರ್ಥಿ ಪ್ರಜ್ವಲ್ ಆಚಾರ್ ಮಾತನಾಡಿ, ಕೌಶಲಗಳ ಅಭಿವೃದ್ಧಿಗಾಗಿ ಇದು ಒಂದು ಒಳ್ಳೆ ವೇದಿಕೆಯಾಗಿದೆ. ಇಂತಹ ಚಟುವಟಿಕೆಗಳೊಂದಿಗೆ, ಶಿಸ್ತು ಕೂಡ ಅವಶ್ಯ. ಶಿಸ್ತು ಇಲ್ಲದೆ ಹೋದರೆ ನಾವು ಯಾವುದೇ ಕಾರ್ಯದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ನನ್ನ ವ್ಯವಹಾರದ ಹಾದಿಯು ನನ್ನ ತಂದೆಯಮಾರ್ಗದರ್ಶನದಿಂದ ಮುಂದುವರೆಯಿತು.
ಕೌಶಲ ಹಾಗೂ ಶಿಸ್ತನ್ನು ಹೊಂದಿದ್ದರೆ ವ್ಯವಹಾರ ನಿರ್ವಹಣೆಯಲ್ಲಿ ಗೆಲ್ಲಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಕಾಲೇಜಿನ ಆಡಳಿತಧಿಕಾರಿ ಬಾಲಕೃಷ್ಣ ಶೆಟ್ಟಿ,ಅನುಷಾ ಆಚಾರ್, ವಿಭಾಗದ ಡೀನ್ ಸುರೇಖಾ ರಾವ್, ಸಹಾಯಕ ಪ್ರಾಧ್ಯಾಪಕರಾದ ಸೋನಿ ಎಸ್ ರಾಜ್, ಸುಬ್ಬಲಕ್ಷ್ಮಿ, ಚೈತ್ರ ಎಸ್, ವಿದ್ಯಾರ್ಥಿ ಸಂಯೋಜಕ ಸಾಯಿ ವಿಕಾಸ್, ಅಕ್ಷತಾ ಶೆಟ್ಟಿ, ಕೌಶಿಕ್ ಇದ್ದರು. ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದರೆ ಮಂಗಳೂರಿನ ಎಸ್ಡಿಎಮ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು. ಸ್ಪಂದನ ನಿರೂಪಿಸಿದರು. ವೈಭವ್ ಸ್ವಾಗತಿಸಿ, ಅಕ್ಷತಾ ವಂದಿಸಿದರು.