ಕರ್ಮ ಕಾರ್ಯ ಮಾಡುವಾಗ ನಾನಲ್ಲ, ಸಮಾಜಕ್ಕಾಗಿ ಮಾಡುವವನು ಎಂಬ ಆತ್ಮ ಸ್ಮರಣೆ ನಮ್ಮಲ್ಲಿರಬೇಕು. ಕರ್ಮಫಲವನ್ನು ಅನುಭವಿಸುವವನು ಕೂಡಾ ನಾನಲ್ಲ. ಸಮಾಜಕ್ಕಾಗಿ ಮಾಡಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ. ಯಾವುದೇ ಕಾರ್ಯ ಇರಲಿ ಧನಾತ್ಮಕವಾಗಿ ನಡೆದಾಗ ಅದಕ್ಕೆ ಫಲ ಸಿಗುವುದು ಅದು ಸೃಷ್ಠಿಯ ನಿಯಮ. ಒಳ್ಳೆಯ ಕಾರ್ಯಕ್ಕೆ ಉತ್ತಮ ಫಲ ಸಿಕ್ಕಿಯೇ ಸಿಗುತ್ತದೆ. ನಮ್ಮ ಶ್ರೀಮಂತ ಸಂಸ್ಕ್ರತಿಗೆ ತಕ್ಕಂತೆ ಕೈಗೊಂಡ ಕಾರ್ಯ ಪರಿಪೂರ್ಣಗೊಳ್ಳುವ ತನಕ ವಿರಮಿಸದೆ ಸಮಾಜಕ್ಕಾಗಿ ಅರ್ಪಣೆ ಮಾಡುವ ಛಲವೊಂದಿದ್ದರೆ ಅದು ಬಂಟರಲ್ಲಿ ಕಾಣಬಹುದು. ನಿರ್ಮಲ ಮನಸ್ಸಿನ ಸೇವೆಯಿಂದ ಚಿತ್ತ ಶುದ್ದಿಯನ್ನು ಪಡೆಯಲು ಸಾದ್ಯ. ನಮ್ಮಲ್ಲಿರುವ ವಿವೇಕ ಚಿಂತನೆಯಿಂದ ಯಾವುದೇ ಪ್ರತ್ಯಾಪೇಕ್ಷೆ ಇಲ್ಲದೇ ಮಾಡುವ ಕಾರ್ಯವೇ ಶ್ರೇಷ್ಠವಾದುದು ಎಂದು ಮಣಿಪಾಲ್ ಹಾಸ್ಪಿಟಲ್ ನ ಕಾರ್ಯಾಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ನುಡಿದರು.
ಬಂಟರ ಸಂಘ ಪುಣೆ ಇದರ ವಾರ್ಷಿಕೊತ್ಸವ ಸ್ನೇಹ ಸಮ್ಮಿಲನ ಸಮಾರಂಭವು ಜ 26ರಂದು ಬಾಣೇರ್ ನಲ್ಲಿರುವ ಪುಣೆ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಸುದರ್ಶನ ಬಲ್ಲಾಳ್ ರವರು ಸಣ್ಣ ಮಟ್ಟದಿಂದ ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಟರು ಮಾಡಿದ ಸಾಧನೆಗಳು ಲೆಕ್ಕವಿಲ್ಲದಷ್ಟಿದೆ. ನಮ್ಮ ಸಂಸ್ಕ್ರತಿಯ ತಿರುಳನ್ನು ಬೇರೆ ಬೇರೆ ವಿಧದಲ್ಲಿ ಪ್ರತಿಬಿಂಬಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದಿದ್ದಾರೆ. ಕಲೆ, ಕ್ರೀಡೆ, ಸಾಮಾಜಿಕ ಕ್ಷೇತ್ರದಲ್ಲಿ ಬಂಟರ ಸಾಧನೆ ಸಮಾಜಕ್ಕೆ ಹೆಮ್ಮೆಯ ಗರಿ ಮೂಡಿಸಿದೆ. ಪುಣೆ ಬಂಟರ ಸಂಘ ಸುವರ್ಣ ಮಹೋತ್ಸವಕ್ಕೆ ಪಾದಾರ್ಪಣೆಗೈಯುತಿದ್ದು, ಗಮನಾರ್ಹ ಸಾಧನೆಯೊಂದಿಗೆ ಸಮಾಜಕ್ಕೆ ಹೆಮ್ಮೆ ತರುವಂತಹ ಕಾರ್ಯಕ್ರಮಗಳೊಂದಿಗೆ ನಡೆಯಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಪುಣೆ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅದ್ಯಕ್ಷತೆಯಲ್ಲಿ ನಡೆದ ವಾರ್ಷಿಕೋತ್ಸವ ಸಂಭ್ರಮ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ್ ಹಾಸ್ಪಿಟಲ್ ನ ಕಾರ್ಯಾಧ್ಯಕ್ಷ ಡಾ. ಎಚ್ ಸುದರ್ಶನ್ ಬಲ್ಲಾಳ್, ಗೌರವ ಅತಿಥಿಗಳಾದ ಮುಂಬಯಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಅರ್ ಕೆ ಶೆಟ್ಟಿ, ವಿಶೇಷ ಆಕರ್ಷಣೆ ಗೌರವ ಅತಿಥಿಯಾಗಿ ಅಗಮಿಸಿದ 2022 ಫೇಮಿನಾ ಮಿಸ್ ಇಂಡಿಯಾ ವರ್ಲ್ಡ್ ಸಿನಿ ಎಸ್ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಕುಶಾಲ್ ಹೆಗ್ಡೆ, ಸನ್ಮಾನಿತ ಸದಾನಂದ ಕೆ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷರುಗಳಾದ ವೈ ಚಂದ್ರಹಾಸ್ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ, ಮಹಿಳಾ ವಿಬಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ, ಸಾಂಸ್ಕ್ರತಿಕ ವಿಬಾಗದ ಕಾರ್ಯಾಧ್ಯಕ್ಷ ತಾರಾನಾಥ್ ರೈ ಮೇಗಿನ ಗುತ್ತು, ದಕ್ಷಿಣ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಯಶೋದಾ ಜಿ.ಶೆಟ್ಟಿ, ಉತ್ತರ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ, ಮಹಿಳಾ ಕಾರ್ಯಾಧ್ಯಕ್ಷೆ ಪ್ರೇಮ ಅರ್ ಶೆಟ್ಟಿ, ಯುವ ವಿಬಾಗದ ಕಾರ್ಯಾಧ್ಯಕ್ಷ ಉದಯ ಜೆ .ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷರು, ಅತಿಥಿ ಗಣ್ಯರು ದೀಪ ಜ್ಯೋತಿ ಬೆಳಗಿಸಿ, ಕಲ್ಪ ವೃಕ್ಷ ಹೂ ಅರಳಿಸಿ ಸುವರ್ಣ ಮಹೋತ್ಸವ ವರ್ಷದ ಪ್ರಥಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಶೋದಾ ಶೆಟ್ಟಿ ಪ್ರಾರ್ಥನೆಗೈದರು. ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕಾರ್ಯ ಚಟುವಟಿಕೆಗಳ ವಾರ್ಷಿಕ ವರದಿಯನ್ನು ಮಂಡಿಸಿದರು. ಮಹಿಳಾ ವಿಬಾಗದ ವರದಿಯನ್ನು ಶಮ್ಮಿ ಎ ಹೆಗ್ಡೆ ಸಲ್ಲಿಸಿದರು. ಕುಶಾಲ್ ಹೆಗ್ಡೆ ಮತ್ತು ದೇವಿಕಾ ಯು ಶೆಟ್ಟಿಯವರು ಸುವರ್ಣ ಸಂಭ್ರಮಕ್ಕೆ ಪಾದಾರ್ಪಣೆಗೈಯುತ್ತಿರುವ ಬಂಟರ ಸಂಘದ ಹಿನ್ನೋಟ ಮತ್ತು ಸಾಧನೆಯ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಜಿ ಎಂ ಶೆಟ್ಟಿ ಅತ್ಯುತ್ತಮ ಸಮಾಜ ಸೇವಾ ಸಾಧಕರಾಗಿ ಹಾಗೂ ಸುವರ್ಣ ಮಹೋತ್ಸವ ಜೀವಮಾನ ಸಾಧಕ ಪ್ರಶಸ್ತಿ ಬಂಗಾರದ ಪದಕವನ್ನು ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ, ಹಿರಿಯ ಮಹಾ ಸಾಧಕ, ಖ್ಯಾತ ಉದ್ಯಮಿ, ಸಮಾಜ ಸೇವಕ, ಸದಾನಂದ ಗ್ರೂಪ್ ಆಫ್ ಹೋಟೆಲ್ಸ್ ನ ಸಿಎಂಡಿ ಶ್ರೀ ಸದಾನಂದ ಕೆ ಶೆಟ್ಟಿಯವರಿಗೆ ಅದ್ದೂರಿಯಾಗಿ ಪಲಪುಷ್ಪಗಳೊಂದಿಗೆ ಕಟೀಲು ಅಮ್ಮನವರ ದಿವ್ಯ ಸ್ಮರಣಿಕೆಯೊಂದಿಗೆ ಅಧ್ಯಕ್ಷರು ಅತಿಥಿ ಗಣ್ಯರು ಪ್ರಧಾನ ಮಾಡಿದರು. ಸಮಾರಂಭದ ಅತಿಥಿ ಗಣ್ಯರಾದ ಸುದರ್ಶನ್ ಬಲ್ಲಾಳ್, ಡಾ. ಅರ್ ಕೆ ಶೆಟ್ಟಿ, ಸಿನಿ ಶೆಟ್ಟಿಯವರನ್ನು ಶಾಲು ಪಲಪುಷ್ಪ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ಸನ್ಮಾನಿತರ ಮತ್ತು ಅತಿಥಿಗಳ ಪರಿಚಯವನ್ನು ಸುಧೀರ್ ಶೆಟ್ಟಿ ಕೊಳಕೆಬೈಲು, ಸಂದ್ಯಾ ಅರ್ ಶೆಟ್ಟಿ, ಶ್ವೇತಾ ಪಿ ಶೆಟ್ಟಿ, ಅಧ್ಯಾ ಎಸ್.ಶೆಟ್ಟಿ, ಸೌಮ್ಯ ಶೆಟ್ಟಿ, ಅಪೇಕ್ಷಾ ಶೆಟ್ಟಿ ಓದಿದರು. ವೈದ್ಯಕೀಯ ಕ್ಷೇತ್ರದಲ್ಲಿ ಸಾದನೆ ಮಾಡಿದ ಡಾ. ಪ್ರಖ್ಯಾತ್ ಪಿ ಶೆಟ್ಟಿ ಮತ್ತು ಡಾ. ನಿಧಿ ವಿ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
2023ರ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರವೀಣ್ ಶೆಟ್ಟಿ ಪುತ್ತೂರು ಅವರನ್ನು ಸತ್ಕರಿಸಲಾಯಿತು ಹಾಗೂ ಶೈಕ್ಷಣಿಕ ಕ್ಷೇತ್ರ ಕ್ರೀಡಾ ಕ್ಷೇತ್ರದಲ್ಲಿ ಸಾದನೆ ಮಾಡಿದ ಬಂಟ ಸಮಾಜದ ಪ್ರತಿಭಾವಂತ ಸಾಧಕರಿಗೆ ಸತ್ಕಾರ ನಡೆಯಿತು. ಸಾಧಕರ ಪಟ್ಟಿಯನ್ನು ಜೊತೆ ಕಾರ್ಯದರ್ಶಿ ನಿಟ್ಟೆ ಚಂದ್ರಶೇಖರ್ ಶೆಟ್ಟಿ ಓದಿದರು. ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ವರ್ಷಕ್ಕೆ ಪಾದಾರ್ಪಣೆಗೈಯ್ಯುತ್ತಿರುವ ಪುಣೆ ಬಂಟರ ಸಂಘದ ಸುವರ್ಣ ಸಂಭ್ರಮದ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿರುವ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ ಇವರಿಗೆ ತಲೆಗೆ ಮುಂಡಾಸು ಕಟ್ಟಿ ಗಣ್ಯರು ಶುಭ ಕೋರಿದರು. ಇದೇ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ನೂತನ ಪ್ರಾದೇಶಿಕ ಸಮಿತಿ ಪೂರ್ವ ವಲಯವನ್ನು ರಚಿಸಿ ನೂತನ ಸಮಿತಿಯನ್ನು ಘೋಸಿಸಲಾಯಿತು. ಪೂರ್ವ ವಲಯದ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಶೆಟ್ಟಿ ಮತ್ತು ಮಹಿಳಾ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾದ ಕೃತಿ ಶೆಟ್ಟಿಯವರಿಗೆ ಸಂತೋಷ್ ಶೆಟ್ಟಿಯವರು ಪುಷ್ಪ ಗುಚ್ಛ ನೀಡಿ ಗೌರವಿಸಿದರು. ವಿವಿದ ಸಂಘ ಸಂಸ್ಥೆಗಳ ಗಣ್ಯರನ್ನು ಪುಷ್ಪ ಗುಚ್ಛ ನೀಡಿ ಗೌರವಿಸಲಾಯಿತು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಮತ್ತು ಸಮಾಜ ಬಾಂಧವರಿಂದ ವಿವಿಧ ವೈವಿಧ್ಯಮಯ ನೃತ್ಯ ಕಾರ್ಯಕ್ರಮ, ಸಂಗಿತಾ ರಸ ಮಂಜರಿ ಕಾರ್ಯಕ್ರಮ ಹಾಗೂ ಬಂಟರ ಸಂಘದ ಸದಸ್ಯರಿಂದ ರಾಮರಾಜ್ಯ ಸ್ವರಾಜ್ಯ ಎಂಬ ದೇಶ ಭಕ್ತಿ ಸಾರುವ ಸಾಮಾಜಿಕ ಮರಾಠಿ ನಾಟಕ ಪ್ರದರ್ಶನ ಸಭಿಕರ ಮನ ಸೂರೆಗೊಂಡಿತು. ಕರ್ನೂರು ಮೋಹನ್ ರೈ ಮತ್ತು ಅಕ್ಷತಾ ಸುಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸಾಮಾಜಿಕ ಜಾಲತಾಣದ ಕಾರ್ಯಾಧ್ಯಕ್ಷ ಕಿಶೋರ್ ಹೆಗ್ಡೆ ವಂದಿಸಿದರು.
ಬಂಟರ ಸಂಘ ಪುಣೆ ಇದರ ಸುವರ್ಣ ಮಹೋತ್ಸವ ವರ್ಷದ ಈ ಕಾರ್ಯಕ್ರಮಕ್ಕೆ ಸಭಾಭವನ ತುಂಬಿದ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಲೆ ತಂದರು. ಕಾರ್ಯಕ್ರಮದ ಯಶಸ್ವಿಗೆ ಸಂಘದ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ಎಚ್ ಶೆಟ್ಟಿ, ಕಾನೂನು ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಶೆಟ್ಟಿ, ಕ್ಯಾಟರಿಂಗ್ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಜನ ಸಂಪರ್ಕಾಧಿಕಾರಿ ಗಣೇಶ್ ಹೆಗ್ಡೆ, ಕಟ್ಟಡ ಸಮಿತಿಯ ಸಮನ್ವಯಕರಾದ ರಾಮಕೃಷ್ಣ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಮನ್ವಯಕರಾದ ಮಾಧವ ಶೆಟ್ಟಿ, ವಸಂತ್ ಶೆಟ್ಟಿ, ಎರ್ಮಾಳ್ ಬಾಲಚಂದ್ರ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ರವಿ ಶೆಟ್ಟಿ, ಸಾಂಸ್ಕ್ರತಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಮ್ಯಾರೇಜ್ ಬ್ಯೂರೊ ಸಮಿತಿಯ ಕಾರ್ಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಕಲ್ಪವೃಕ್ಷ ತ್ರೈಮಾಸಿಕದ ಸಂಪಾದಕ ವಿಶ್ವನಾಥ್ ಶೆಟ್ಟಿ ಪಾಂಗಾಳ, ಸಾಮಾಜಿಕ ಜಾಲತಾಣದ ಕಾರ್ಯಾಧ್ಯಕ್ಷ ಕಿಶೋರ್ ಹೆಗ್ಡೆ, ಮಹಿಳಾ ವಿಭಾಗದ ಕಾರ್ಯದರ್ಶಿ ಸುಚಿತ್ರಾ ಎಸ್ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಎಲ್ಲಾ ಸಮಿತಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.
ಚಿತ್ರ, ವರದಿ: ಹರೀಶ್ ಮೂಡಬಿದ್ರಿ