ಅರಮನೆ ಮೈದಾನ ಗೇಟ್ ಸಂಖ್ಯೆ 9 ರಲ್ಲಿರುವ ಗ್ರೀನ್ಸ್ ಹಾಲ್ ನಲ್ಲಿ ಕಂಬಳ ಸಮಿತಿ (ರಿ), ಬೆಂಗಳೂರು ಇದರ ಗೌರವ ಅಧ್ಯಕ್ಷರಾಗಿರುವ ಶ್ರೀ ಕೆ ಪ್ರಕಾಶ್ ಶೆಟ್ಟಿಯವರ ನೇತೃತ್ವದಲ್ಲಿ “ಬೆಂಗಳೂರು ಕಂಬಳ – ನಮ್ಮ ಕಂಬಳ” ದ ಸಭೆ ನಡೆಯಿತು. ಕಂಬಳ ಸಮಿತಿ (ರಿ), ಬೆಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀ ಅಶೋಕ್ ಕುಮಾರ್ ರೈ, ಕಾರ್ಯಾಧ್ಯಕ್ಷರಾಗಿರುವ ಶ್ರೀ ಗುರುಕಿರಣ್ ಶೆಟ್ಟಿ, ಉಪಾಧ್ಯಕ್ಷರಾಗಿರುವ ಶ್ರೀ ಗುಣರಂಜನ್ ಶೆಟ್ಟಿ, ಸಂಘಟನಾ ಅಧ್ಯಕ್ಷರುಗಳಾದ ಶ್ರೀ ಉಮೇಶ್ ಶೆಟ್ಟಿ ಹಾಗೂ ಶ್ರೀ ಉಪೇಂದ್ರ ಶೆಟ್ಟಿಯವರು ಮತ್ತು ಇತರರು ಉಪಸ್ಥಿತರಿದ್ದರು.
