ಪುಣೆ : ದಕ್ಷಿಣ ಪ್ರಾದೇಶಿಕ ಸಮಿತಿಯವರು ಉತ್ತಮ ವ್ಯಕ್ತಿತ್ವದ ಸರಳ ಸಜ್ಜನ ವ್ಯಕ್ತಿಯನ್ನು ಆರಿಸಿ ಸನ್ಮಾನಿಸಿದ್ದಾರೆ. ನನ್ನ ಜೊತೆ ಸುಮಾರು ವರ್ಷಗಳಿಂದ ಅಜಿತ್ ಹೆಗ್ಡೆ ಯವರು ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡುತಿದ್ದಾರೆ. ಅವರ ಕಾರ್ಯ ವೈಖರಿಯಲ್ಲಿ ನನಗೆ ಬೆಂಬಲ ಮತ್ತು ಸಂಪೂರ್ಣ ಸಹಕಾರ ಸಿಕ್ಕಿದೆ. ಅಚ್ಚುಕಟ್ಟಾಗಿ ಕಾರ್ಯ ಯೋಜನೆಗಳನ್ನು ಮಾಡುವ ಮೂಲಕ ಸಮಾಜದ ಪ್ರೀತಿಗೆ ಪಾತ್ರರಾಗಿದ್ದಾರೆ. ಸಹೋದರನಂತಿರುವ ಅಜಿತ್ ಹೆಗ್ಡೆಯವರು ಈ ಸನ್ಮಾನಕ್ಕೆ ಅರ್ಹರು. ನಮ್ಮಲ್ಲಿ ಎರಡು ಪ್ರಾದೇಶಿಕ ಸಮಿತಿಗಳಿದ್ದು ಉತ್ತಮ ನಿಸ್ವಾರ್ಥ ಸೇವೆಗಳ ಮೂಲಕ ಪ್ರೀತಿಗೆ ಪಾತ್ರವಾಗಿವೆ, ಈ ಸಮಿತಿಗಳು ನನ್ನ ಎರಡು ಕೈಗಲಿದ್ದಂತೆ ಮತ್ತು ಅನೆ ಬಲವನ್ನು ತಂದು ಕೊಟ್ಟಿವೆ. ಅವರ ಕೆಲಸ ಕಾರ್ಯಗಳನ್ನು ನಾನು ಅಭಿನಂದಿಸುತ್ತೇನೆ, ಇನ್ನಷ್ಟು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಅನುಗ್ರಹ ಸಿಗಲಿ ಎಂದು ದೇವರಲ್ಲಿ ಬೇಡಿಕೊಳುತ್ತೇನೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ನುಡಿದರು.
ಪುಣೆ ಬಂಟರ ಸಂಘದ ದಕ್ಷಿಣ ಪೂರ್ವ ವಲಯ ಪ್ರಾದೇಶಿಕ ಸಮಿತಿ ವತಿಯಿಂದ ಅ 27ರಂದು ಪುಣೆ ಬಂಟರ ಭವನದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮತ್ತು ಶ್ರೀ ಅಜಿತ್ ಹೆಗ್ಡೆ ದಂಪತಿಗಳನ್ನು ಅವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಬಂಟರ ಭವನದ ನಿರ್ಮಾಣ ಕಾರ್ಯದಲ್ಲಿ ಅವಿರತವಾಗಿ ದುಡಿದ ಅವರ ಕಾರ್ಯ ವೈಖರಿಯನ್ನು ಅರಿತು ಸನ್ಮಾನಿಸಲಾಯಿತು .
ಹಾಗೂ ಇದೆ ಸಂದರ್ಭದಲ್ಲಿ ಸಮಾಜ ರತ್ನ ಬಿರುದು ಪಡೆದಿರುವ ಕಾಪು ಲೀಲಾಧರ ಶೆಟ್ಟಿ ಯವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲಾ ಮತ್ತು ರಜ್ಯ ಮಟ್ಟದಲ್ಲಿ ವೈಟ್ ಲಿಪ್ಟಿಂಗ್ ನಲ್ಲಿ ಚಿನ್ನದ ಪದಕ ಪಡೆದ ಕುಮಾರಿ ವೈಷ್ಣವಿ ವಸಂತ್ ಶೆಟ್ಟಿ ಯವರನ್ನು ಬಂಟರ ಸಂಘದ ದಕ್ಷಿಣ ಪೂರ್ವ ಪ್ರಾದೆಶಿಕ್ ಸಮಿತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಅಜಿತ್ ಹೆಗ್ಡೆ ಮತ್ತು ಲೀಲಾಧರ ಶೆಟ್ಟಿ ಕಾಪು ಸಾಂದರ್ಭಿಕವಾಗಿ ಮಾತನಾಡಿದರು. ಸನ್ಮಾನ ಪತ್ರವನ್ನು ಕ್ರಮವಾಗಿ ಸುಧಾಕರ್ ಸಿ ಶೆಟ್ಟಿ, ಸಂಪತ್ ವಿ.ಶೆಟ್ಟಿ, ಅಧ್ಯಾ ಎಸ್.ಶೆಟ್ಟಿ ವಾಚಿಸಿದರು.
ವೇದಿಕೆಯಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಸನ್ಮಾನಿತ ಪ್ರದಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ, ಮಹಿಳಾ ವಿಬಾಗದ ಅಧ್ಯಕ್ಷೆ ಸುಲತಾ ಎಸ್.ಶೆಟ್ಟಿ, ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಯಶೋದಾ ಶೆಟ್ಟಿ, ಯವರು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರನ್ನು ದಕ್ಷಿಣ ಪ್ರಾದೇಶಿಕ ಸಮಿತಿಯ ವತಿಯಿಂದ ಗೌರವಿಸಲಾಯಿತು. ಈ
ಸಂದರ್ಭದಲ್ಲಿ ಪುಣೆಯ ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು. ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ರಘುರಾಮ್ ರೈ, ಭಾಸ್ಕರ್ ವಿ.ಶೆಟ್ಟಿ, ವಸಂತ್ ಎ.ಶೆಟ್ಟಿ, ರವಿ ಶೆಟ್ಟಿ ಕಾಪು, ಸಮಿತಿಯ ಪದಾಧಿಕಾರಿಗಳಾದ ಸುಭಾಸ್ ಎ.ಶೆಟ್ಟಿ, ಸುಧಾಕರ್ ಶೆಟ್ಟಿ, ದಾಮೋಧರ ಜಿ.ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ವಸಂತ್ ಎಸ್.ಶೆಟ್ಟಿ, ಜಗದೀಶ್ ಬಿ.ಶೆಟ್ಟಿ ಸುಧಾಕರ್ ಬಿ.ಶೆಟ್ಟಿ ರತ್ನಾಕರ್ ಅರ್.ಶೆಟ್ಟಿ, ಅರುಣ್ ಎಂ .ಶೆಟ್ಟಿ, ಸಂಜೀವ ಕೆ .ಶೆಟ್ಟಿ, ದಿವಾಕರ್ ಶೆಟ್ಟಿ ಸಂಪತ್ ಶೆಟ್ಟಿ, ಜಯ ಎಸ್.ಶೆಟ್ಟಿ, ರಮೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ರಾಜೇಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಮಹಿಳಾ ವಿಭಾಗದ ವಿನೋದಾ ಎಸ್.ಶೆಟ್ಟಿ, ಲಲಿತಾ ಟಿ .ಶೆಟ್ಟಿ, ರೋಹಿಣಿ ಟಿ.ಶೆಟ್ಟಿ, ವಾರಿಜಾ ಎಸ.ಶೆಟ್ಟಿ, ಶೋಭಾ ಎಸ.ಶೆಟ್ಟಿ, ಸುಮಂಗಲಾ ಎಸ್.ಶೆಟ್ಟಿ, ಲತಾ ಶೆಟ್ಟಿ, ರೂಪಾ ಎಂ .ಶೆಟ್ಟಿ, ಭಾರತಿ ಡಿ.ಶೆಟ್ಟಿ, ಪ್ರೇಮ ಎಸ್.ಶೆಟ್ಟಿ, ಸುನಿತಾ ಅರ್.ಶೆಟ್ಟಿ, ಅಂಬಿಕಾ ಬಿ .ಶೆಟ್ಟಿ, ಲೀಲಾ ವಿ .ಶೆಟ್ಟಿ, ವಿನೋದಾ ವಿ .ಶೆಟ್ಟಿ, ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು. ಮೋಹನ್ ರೈ ಕರ್ನೂರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .
ಪುಣೆ ಬಂಟರ ಸಂಘದ ಶಕ್ತಿಗಳಾಗಿ ಕೆಲಸ ಮಾಡುವ ಪ್ರಾದೇಶಿಕ ಸಮಿತಿಗಳಲ್ಲಿ ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿ ನನ್ನನು ಗುರುತಿಸಿ ಸನ್ಮಾನ ಮಾಡಿದ್ದಾರೆ
ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ .ಪ್ರಾದೇಶಿಕ ಸಮಿತಿಯು ಉತ್ತಮ ಕಾರ್ಯ ಯೋಜನೆಗಳ ಮೂಲಕ ದೇವರು ಮೆಚ್ಚುವಂಥಹ ಕಾರ್ಯ ಮಾಡುತಿದೆ. ಬಂಟರ ಸಂಘಕ್ಕೆ ಕೀರ್ತಿ ತರುವಂತಹ ಕಾರ್ಯಗಳನ್ನು ಮಾಡುತಿವೆ. ಪ್ರಾದೇಶಿಕ ಸಮಿತಿಗಳು ಪುಣೆ ಬಂಟರ ಸಂಘಕ್ಕೆ ಬಲ ತುಂಬುವ ಜೊತೆ ಶಕ್ತಿಗಳಾಗಿ ನಮ್ಮ ಜೊತೆ ನಿಂತಿದ್ದಾರೆ, ಉತ್ತಮ ಕಾರ್ಯಯೋಜನೆಗಳ ಮೂಲಕ ಇನ್ನಷ್ಟು ಪಲದಾಯಕ ಕಾರ್ಯಗಳು ತಮ್ಮಿಂದ ಸಲ್ಲಲಿ ಎಂದು ಶುಭ ಕೋರುತ್ತಾ ತಮನ್ನು ಅಭಿನಂದಿಸುತ್ತೇನೆ-ಶ್ರೀ ಅಜಿತ್ ಹೆಗ್ಡೆ-ಪ್ರಧಾನ ಕಾರ್ಯದರ್ಶಿ ಪುಣೆ ಬಂಟರ ಸಂಘ
ಅಜಿತ್ ಹೆಗ್ಡೆ ದಂಪತಿಗಳಿಗೆ ಸನ್ಮಾನ ಮಾಡಬೇಕೆಂಬ ನಮ್ಮ ಕನಸು ಇಂದು ನನಸಾಯಿತು. ಶಿಸ್ತಿನ ಸಿಪಾಯಿಯಂತಿರುವ ಅಜಿತ್ ಹೆಗ್ಡೆಯವರು ಪ್ರಾದೇಶಿಕ ಸಮಿತಿಗಳ ಬಗ್ಗೆ ತುಂಬಾ ಪ್ರೀತಿ ಕಾಳಜಿ ವಹಿಸಿ ಅದರ ಕಾರ್ಯ ಯೋಜನೆಗಳಿಗೆ ನಿರಂತರ ಪ್ರೋತ್ಸಾಹ ನೀಡುತಿದ್ದರು, ಅವರನ್ನು ಸೇರಿದಾ ಅಪಾರ ಸಮಾಜ ಭಾಂದವರ ಮುಂದೆ ಸನ್ಮಾನಿಸುವುದು ನಮ್ಮ ಕರ್ತವ್ಯವಾಗಿತ್ತು. ಯೋಗ್ಯ ವ್ಯಕ್ತಿಗಳಿಗೆ ಸನ್ಮಾನಿಸುವುದರಲ್ಲಿ ಅದಕ್ಕೊಂದು ಅರ್ಥ ಬರುತ್ತದೆ, ಸಮಾಜಕ್ಕೆ ಉತ್ತಮ ಸಂದೇಶವು ದೊರಕ್ಕುತ್ತದೆ. ಪುಣೆ ಬಂಟರ ಸಂಘದ ಮುಖಾಂತರ ಸಮಾಜದ ಭಾಂದವರಿಗೆ ಅದಂಥಹ ಕೆಲವು ಕಾರ್ಯಗಳು ಅಂದರೆ ನಮ್ಮ ನಡೆ ಬಂಟರ ಮನೆದೆಡೆಗೆ, ವಿಧ್ಯಾರ್ಥಿ, ವಿಧ್ಯಾರ್ಥಿನಿಯರಿಗೆ ಶೈಕ್ಷಣಿಕ ನೆರವು, ಕೊರೊನಾ ಸಮಯದಲ್ಲಿ ಮೂರು ಬಾರಿ ಆಹಾರ ಸಾಮಾಗ್ರಿ ಕಿಟ್ ವಿತರಣೆ, ಅನಾರೋಗ್ಯ ಸಂಭಂದಿತ ಸಮಾಜ ಭಾಂದವರಿಗೆ ಧನ ಸಹಾಯ, ಅರೋಗ್ಯ ತಪಾಸಣೆ ಮೊದಲಾದ ಹಲವಾರು ಕಾರ್ಯ ಯೋಜನೆಗಳನ್ನುಸಂಘದ ಜೊತೆಗೂಡಿ ಮಾಡುತ್ತಾ
ಬರುತಿವೆ ಪ್ರಾದೇಶಿಕ ಸಮಿತಿಗಳು ಇದಕ್ಕೆ ಸಂಪೂರ್ಣ ಬೆಂಬಲ ಮತ್ತು ಸಹಕಾರ, ನಮ್ಮ ಬಂಟರ ಸಂಘದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಪ್ರೋತ್ಸಾಹ ಸಿಕ್ಕಿದೆ. ಇದೆ ರೀತಿಯ ಪ್ರೋತ್ಸಾಹ ಸದಾ ನಮಗೆ ಸಿಗಲಿ ಎಂದು ಆಶಿಸುತ್ತೇನೆ –ಶ್ರೀ ಶೇಖರ್ ಶೆಟ್ಟಿ, ಕಾರ್ಯಾಧ್ಯಕ್ಷರು ದಕ್ಷಿಣ ಪೂರ್ವ ಪ್ರಾದೇಶಿಕ ಸಮಿತಿ, ಬಂಟರ ಸಂಘ ಪುಣೆ