ಪುಣೆ : ಮನುಷ್ಯ ತನ್ನ ದಿನ ನಿತ್ಯದ ಪರಿಸ್ಥಿತಿಗೆ ಹೊಂದಿಕೊಳ್ಳುವ ಅರೋಗ್ಯವನ್ನು ಬಯಸುತ್ತಾನೆ ,ಆದರೆ ಈಗಿನ ದೈಹಿಕ ,ಮಾನಸಿಕ ,ಸಾಮಾಜಿಕ ಒತ್ತಡದ ನಡುವೆ ಆರೋಗ್ಯವಂತನಾಗಿರಲು ಬಯಸಿದರು ಪರಿಸರ ಮತ್ತು ಪರಿಸ್ಥಿತಿ ನಮ್ಮ ಆರೋಗ್ಯವನ್ನು ಬದಲಾಯಿಸುತ್ತದೆ .ಇದರಿಂದ ಯಾವುದೇ ನಿಯಂತ್ರಣ ಹೊಂದಿರದ ಚಲನೆ ಮತ್ತು ಪ್ರಕ್ರಿಯೆಯಿಂದ ಮಾನಸಿಕ ಆರೋಗ್ಯಕ್ಕೆ ತೊಂದರೆ ಯಾಗುತ್ತದೆ .ಇಂತಹ ಸಂದರ್ಭದಲ್ಲಿ ಮೊದಲಾಗಿ ನಾವು ಡಾಕ್ಟರ್ಸ್ ನವರ ಸಲಹೆಯಂತೆ ಅರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಯೋಚಿಸಿದರೆ ಜೀವನ ಸುಖಮಯವಾಗಬಹುದು,ಮತ್ತು ದೈಹಿಕ,ಮಾನಸಿಕ ,ಸಾಮಾಜಿಕ ಸುಸ್ಥಿತಿಯಿಂದ ಅರೋಗ್ಯ ಪೂರ್ಣ ಜೀವನವನ್ನು ಪಡೆಯಲು ಸಾದ್ಯ . ಆರೋಗ್ಯದ ಬಗ್ಗೆ ಕಾಳಜಿ ಮತ್ತು ತಪಾಸಣೆ ಮಾಡಿಸುವ ಉದ್ದೇಶದೊಂದಿಗೆ ನಮ್ಮ ಅಸೋಸಿಯೇಷನ್ ವತಿಯಿಂದ ಸಮಾಜ ಭಾಂದವರಿಗೆ ಈ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದೇವೆ .ಇದಕ್ಕೆ ಕ್ಯಾಂಪ್ ಗುರುದ್ವಾರ ಗುರುನಾನಕ್ ದರ್ಬಾರ್ ಮತ್ತು , ಗುರುನಾನಕ ಮೆಡಿಕಲ್ ಫೌಂಡೇಶನ್ ಸಹಯೋಗದಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ .ಡಾ ಸುಧಾಕರ್ ಶೆಟ್ಟಿ ಯವರ ಮುಂದಾಳತ್ವದಲ್ಲಿ ಮತ್ತು ಇಲ್ಲಿ ಸೇವೆ ನೀಡಲು ಬಂದಿರುವ ಡಾಕ್ಟರ್ಸ್ ನವರ ಸಹಕಾರದಿಂದ ಈ ಅರೋಗ್ಯ ತಪಾಸಣೆ ಸಮಾಜದ ಜನ ಸಾಮಾನ್ಯರಿಗೆ ಸಹಕಾರಿಯಾಗಲಿ .ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ರೀತಿಯ ಅರೋಗ್ಯ ಶಿಬಿರ ನಡೆಸುವ ಉದ್ದೇಶ ನಮ್ಮಲ್ಲಿದೆ .ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ನ ಅಧ್ಯಕ್ಷ ಗಣೇಶ್ ಹೆಗ್ಡೆ ನುಡಿದರು .
ಬಂಟ್ಸ್ ಅಸೋಸಿಯೇಷನ್ ನ ದಶಮ ಸಂಭ್ರಮದ ಸಮಾಜ ಸೇವಾ ಕಾರ್ಯದಂಗವಾಗಿ ಸಮಾಜ ಭಾಂದವರಿಗಾಗಿ ಮಲ್ಟಿಸ್ಪೆಷಾಲಿಟಿ ಉಚಿತ ಅರೋಗ್ಯ ತಪಾಸಣಾ ಶಿಬಿರವು,ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಸಹಯೋಗದೊಂದಿಗೆ ಅ 27 ರವಿವಾರದಂದು ,ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಗುರುನಾನಕ್ ದರ್ಬಾರ್ ಹಾಲ್ (ಹಾಲಿವುಡ್ ಗುರುದ್ವಾರ) ಕ್ಯಾಂಪ್ , ಪುಣೆ ಇಲ್ಲಿ ಜರಗಿತು .
ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು,ಮಹಿಳಾ ಅಧ್ಯಕ್ಷೆ ಉಷಾ ಯು. ಶೆಟ್ಟಿ ,ವೈಧ್ಯಕಿಯ ಸಮಿತಿಯ ಕಾರ್ಯಾಧ್ಯಕ್ಷ ಡಾ .ಸುಧಾಕರ್ ಶೆಟ್ಟಿ ,ಗುರುದ್ವಾರ ಗುರುನಾನಕ್ ದರ್ಬಾರ್ ನ ಅಧ್ಯಕ್ಷ ಸರ್ದಾರ್ ಚರಣ್ ಜೀತ್
ಸಿಂಗ್ ಶೈನಿ , ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಕಾರ್ಯಾಧ್ಯಕ್ಷ ಸರ್ದಾರ್ ಸಂತ್ ಸಿಂಗ್ ಮೋಕ್ಹ್ಸ್ರಾ ರವರು ದೀಪ ಪ್ರಜ್ವಲಿಸಿ ಅರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಬಂಟ್ಸ್ ಅಸೋಸಿಯೇಷನ್ ನ ,ಉಪಾಧ್ಯಕ್ಷರುಗಳಾದ ಸತೀಶ್ ರೈ ಕಲ್ಲಂಗಳ ಗುತ್ತು,ರೋಹಿತ್
ಶೆಟ್ಟಿ ನಗ್ರಿಗುತ್ತು,ಕಾರ್ಯದರ್ಶಿ ಅರವಿಂದ್ ರೈ,ಕೋಶಾಧಿಕಾರಿ ದಿನೇಶ್ ಶೆಟ್ಟಿ ,ಮಾಜಿ ಅಧ್ಯಕ್ಷರುಗಳಾದ ಸುಭಾಶ್ಚಂದ್ರ
ಹೆಗ್ಡೆ ಕಟ್ಟಿಂಗೇರಿ ,ನಾರಾಯಣ್ ಶೆಟ್ಟಿ ,ಆನಂದ್ ಶೆಟ್ಟಿ ಮಿಯ್ಯಾರ್ ,ಸಲಹೆಗಾರ ಸುಧೀರ್ ಶೆಟ್ಟಿ ಕೊಳ್ಕೆ ಬೈಲು,ಮಹಿಳಾ
ವಿಭಾಗದ ಕಾರ್ಯದರ್ಶಿ ಲತಾ ಎಸ್.ಶೆಟ್ಟಿ ,ಕೋಶಾಧಿಕಾರಿ ಪ್ರಸಾಧಿನಿ ಎಸ್.ಶೆಟ್ಟಿ ,ಮಾಜಿ ಅಧ್ಯಕ್ಷೆಯರುಗಳಾದ
ಸುಜಾತಾ ಎಸ್.ಹೆಗ್ಡೆ ,ಸರೋಜಿನಿ ಜೆ .ಶೆಟ್ಟಿ ,ಸುಧಾ ಎನ್.ಶೆಟ್ಟಿ ,ಮಲ್ಲಿಕಾ ಎ.ಶೆಟ್ಟಿ ,ದೀಪಾ ಎ.ರೈ,ಸಾಂಸ್ಕ್ರತಿಕ
ವಿಭಾಗದ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ,ತಾರಾನಾಥ್ ರೈ ಸೂರಂಬೈಲು,ಜೊತೆ ಕಾರ್ಯದರ್ಶಿ ಸುಧಾಕರ್ ಶೆಟ್ಟಿ
ಕೆಮ್ತೂರು ,ಜೊತೆ ಕೋಶಾಧಿಕಾರಿ ರವೀಂದ್ರ ಶೆಟ್ಟಿ ,ಮಹಿಳಾ ವಿಭಾಗದ ಸಾಂಸ್ಕ್ರತಿಕ ಕಾರ್ಯಾಧ್ಯಕ್ಷೆ ಶರ್ಮಿಳಾ
ಟಿ.ರೈ, ಕ್ರೀಡಾ ಕಾರ್ಯದರ್ಶಿ ರೂಪಾ ಜಿ. ಶೆಟ್ಟಿ ಯುವ ವಿಭಾಗದ ಉಪಾಧ್ಯಕ್ಷ ನೀಕಿಲ್ ಎನ್.ಶೆಟ್ಟಿ ಮತ್ತು ಸದಸ್ಯರು
,ಗುರುನಾನಕ್ ಮೆಡಿಕಲ್ ಫೌಂಡೇಶನ್ ಪ್ರಮುಖರಾದ ಸರ್ದಾರ್ ಮೊಹಿಂದರ್ ಸಿಂಗ್ ಖಾಂದರಿ ಮತ್ತು ಫೌಂಡೇಶನ್ ಪ್ರಪ್ರತಿನಿಧಿಗಳು ಉಪಸ್ಥಿತರಿದ್ದರು .
ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ ಕೆಮ್ತೂರ ರವರು ಪ್ರಾಸ್ತಾವಿಕವಾಗಿ ಅರೋಗ್ಯ ಶಿಬಿರದ ಬಗ್ಗೆ ವಿವರಣೆ ನೀಡಿ
ಪ್ರಾರ್ಥನೆ ಗೈದರು ,ಅಧ್ಯಕ್ಷ ಗಣೇಶ್ ಹೆಗ್ಡೆಯವರು ಸ್ವಾಗತಿಸಿದರು .ಶರ್ಮಿಳಾ ಟಿ.ರೈ ಉಪಸ್ಥಿತರಿದ್ದ ವಿವಿದ ವಿಭಾಗದ
ಡಾಕ್ಟರ್ಸ್ ಗಳ ಪರಿಚಯ ತಿಳಿಸಿದರು .ಅಸೋಸಿಯೇಷನ್ ವತಿಯಿಂದ ಗುರುದ್ವಾರ ಗುರುನಾನಕ್ ದರ್ಬಾರ್ ನ
ಅಧ್ಯಕ್ಷ ಸರ್ದಾರ್ ಚರಣ್ ಜೀತ್ ಸಿಂಗ್ ಶೈನಿ , ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಕಾರ್ಯಾಧ್ಯಕ್ಷ ಸರ್ದಾರ್
ಸಂತ್ ಸಿಂಗ್ ಮೋಕ್ಸ್ ಮತ್ತು ಇತರ ಪ್ರಮುಖರನ್ನು ಶಾಲು ಪುಷ್ಪಗುಚ್ಛ ನೀಡಿ ಸತ್ಕರಿಸಿದರು ,ಹಾಗೂ ಗುರುದ್ವಾರ
ಗುರುನಾನಕ್ ದರ್ಬಾರ್ ನ ವತಿಯಿಂದ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರು ಮತ್ತು ಪ್ರಮುಖರನ್ನು
ಸತ್ಕರೀಸಿದರು. ಈ ಅರೋಗ್ಯ ತಪಸಣಾ ಶಿಬಿರದಲ್ಲಿ ಪುಣೆಯ ಖ್ಯಾತ ವೈದ್ಯರುಗಳಾದ ಡಾ.ಚಿತ್ತರಂಜನ್ ಶೆಟ್ಟಿ ,
ಡಾ.ಸಂಜಯ್ ಬಿ.ಕುಲಕರ್ಣಿ , ಡಾ.ಸುಧಾಕರ್ ಶೆಟ್ಟಿ , ಡಾ.ಗೋಪಾಲ ಕೃಷ್ಣ ಗಾವಡೆ ,ಡಾ.ಜಾನ್ಹವಿ ದಾಂಗರೆ ,
ಡಾ.ಮಿಲಿಂದ್ ಚಾಕನೆ , ಡಾ.ಸಂದೀಪ್ ಚೋರ್ಡಿಯಾ, ಡಾ.ಸಂಜಯ್ ತೆಕವಡೆ, ಡಾ .ರಾಬರ್ಟ್ ಲೋಬೊ , ಡಾ ಪಿ
.ಅರ್.ಶೆಟ್ಟಿ , ಡಾ.ಮಂದಾರ್ ತೊಡ್ಕರ್. ಡಾ .ಸತ್ಯ ಜೀತ್ ನಾಯಕ್ ,ಡಾ ಗುರುಚರಣ್ ಕೌರ್ ಬಗ್ಗ ಮೊದಲಾದವರು
ಉಪಸ್ಥಿತರಿದ್ದು ಅರೋಗ್ಯ ತಪಾಸಣೆ ಗೈದರು .ಬಂಟ್ಸ್ ಅಸೋಸಿಯೇಷನ್ ವತಿಯಿಂದ ಉಪಸ್ಥಿತರಿದ್ದ ಡಾಕ್ಟರ್ಸ್ ರವರನ್ನು ಶಾಲು ಪುಷ್ಪ ಗುಚ್ಛ ನೀಡಿ ಸತ್ಕರಿಸಲಾಯಿತು.
ಪುಣೆಯ ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಈ ಅರೋಗ್ಯ ಶಿಬಿರದಲ್ಲಿ ಪಾಲ್ಗೊಂಡರು .
ಈ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ಮಲ್ಟಿಸ್ಪೆಷಾಲಿಟಿ ಆರೋಗ್ಯ ತಪಾಸಣೆ , ಸ್ತ್ರೀರೋಗ ಶಾಸ್ತ್ರ ಮತ್ತು
ಬಂಜೆತನ, ಮಕ್ಕಳ ರೋಗ ತಪಾಸಣೆ , ಕಣ್ಣು ,ಹಲ್ಲು ತಪಾಸಣೆ ,ಔಷದಿ ಮತ್ತು ರೋಗಶಾಸ್ತ್ರದ ಬಗ್ಗೆ ಮಾಹಿತಿ ,
ತುರ್ತು ರೋಗಿಗಳಿಗೆ ಉಚಿತ ECG ಮತ್ತು ಉಚಿತ ಸಕ್ಕರೆ ತಪಾಸಣೆ .ರೋಗ ಲಕ್ಷಣ ಹೊಂದಿರುವ ರೋಗಿಗಳಿಗೆ ಉಚಿತ PAP SMEAR (ಗರ್ಭಕಂಠದ ಕ್ಯಾನ್ಸರ್ ಸ್ಕ್ರೀನಿಂಗ್)ಮೊದಲಾದ ವೈದ್ಯಕೀಯ ತಪಾಸಣೆಯನ್ನು ಮಾಡಲಾಯಿತು .
ಹೆಚ್ಚಿನ ಸಂಖ್ಯೆಯ ಸಮಾಜ ಭಾಂದವರು ಈ ಅರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಗೈದು
ಆರೋಗ್ಯದ ಬಗ್ಗೆ ಮಾಹಿತಿ ಪಡೆದರು .ಸಂಬಂದ ಪಟ್ಟ ಡಾಕ್ಟರ್ಸ್ ರವರು ಅಗತ್ಯವಾಗಿ ಬೇಕಾದ ಮುಂದಿನ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು .
ಸುಧಾಕರ್ ಶೆಟ್ಟಿ ಕೆಮ್ತೂರು ಕಾರ್ಯಕ್ರಮ ನಿರೂಪಿಸಿ ,ಪ್ರ ಕಾರ್ಯದರ್ಶಿ ಅರವಿಂದ್ ರೈ ಧನ್ಯವಾದ ಗೈದರು . ಸುಮಾರು 25 ವರ್ಷಗಳಿಂದ ನಮ್ಮ ಗುರುನಾನಕ್ ಮೆಡಿಕಲ್ ಫೌಂಡೇಶನ್ ಅರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದೆ,ನಮ್ಮಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಂಸ್ಥೆಗಳ ಜೊತೆ ಸೇವೆ ಮಾಡುವ ಸಂದರ್ಭ ಬಂದಾಗ ನಮ್ಮ ಸಹಕಾರ ಸದಾ ಸಿಗಲಿದೆ . ಉತ್ತಮ ಗುಣ ಮಟ್ಟದ ಮತ್ತು ಮುಂದುವರಿದ ಟೆಕ್ನೋಲಜಿಗೆ ಅನುಗುಣವಾಗಿ ತಪಾಸಣಾ ಯಂತ್ರಗಳು ನಮ್ಮಲ್ಲಿವೆ . ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಉತ್ತಮ ಗುಣ ಮಟ್ಟದ ಚಿಕಿತ್ಸೆ ನೀಡುವುದೇ ನಮ್ಮ ಫೌಂಡೇಶನ್ ನ ಉದ್ದೇಶ ,ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ಮತ್ತು ನಮ್ಮ ಸಂಸ್ಥೆಯ ಸೇವಕ ಡಾ .ಸುಧಾಕರ್ ಶೆಟ್ಟಿ ಯವರ ಯೋಜಿತ ಈ ಅರೋಗ್ಯ ತಪಾಸಣೆ ಬಹಳ ಉತ್ತಮ ಸೇವೆಯಲ್ಲಿ ಒಂದು ಎಂದು ಭಾವಿಸುತ್ತೇನೆ- ಸರ್ದಾರ್ ಚರಣ್ ಜೀತ್ ಸಿಂಗ್ ಶೈನಿ -ಅಧ್ಯಕ್ಷ ಗುರುದ್ವಾರ ಗುರುನಾನಕ್ ದರ್ಬಾರ್ ಕ್ಯಾಂಪ್ ಪುಣೆ
ವರದಿ ಹರೀಶ್ ಮೂಡಬಿದ್ರಿ