ಪುತ್ತಿಗೆ ಮಠದಲ್ಲಿ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್. ಎಸ್. ಬಲ್ಲಾಳ್ ಅವರು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವವನ್ನು ವೈಭವೋಪೇತವಾಗಿ ನಡೆಸಲು ಅನುಕೂಲಕರವಾದ ಆರ್ಥಿಕ ಸಹಕಾರದ ಬಗ್ಗೆ ವಿಶೇಷವಾಗಿ ಸ್ವಾಗತ ಸಮಿತಿಯ ಮನವಿಯನ್ನು ಬಿಡುಗಡೆಗೊಳಿಸಿದರು. ಮನವಿಯಲ್ಲಿ ವಿವಿಧ ಆರ್ಥಿಕ ಸಹಕಾರವನ್ನು ಸಮಾಜದಿಂದ, ಗಣ್ಯರಿಂದ ನಿರೀಕ್ಷಿಸಲಾಗಿದೆ.
ಎಲ್ಲಾ ಕೃಷ್ಣ ಭಕ್ತರು ಪರ್ಯಾಯೋತ್ಸವದಲ್ಲಿ ಕೈ ಜೋಡಿಸಬೇಕೆಂದು ವಿನಂತಿಸಿದರು. ಅತಿಥಿಗಳಾಗಿ ಪುಣೆಯ ಪ್ರಜ್ ಇಂಡಸ್ಟ್ರೀಸ್ ಲಿ. ಚೇರ್ ಮನ್ ಡಾ. ಪ್ರಮೋದ್ ಚೌಧರಿ, ಅವರ ಪತ್ನಿ ಪ್ರಮೀಳಾ ಚೌಧರಿ ಉಪಸ್ಥಿತರಿದ್ದು ಪುತ್ತಿಗೆ ಶ್ರೀಗಳ ಪರ್ಯಾಯೋತ್ಸವ ವಿಜೃಂಭಣೆಯಿಂದ ನಡೆಸಲು ಸಹಕರಿಸುವುದಾಗಿ ತಿಳಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಜ್ ಜೆನೆಕ್ಸ್ ಲಿ. ಎಂಡಿ ಅಭಿಜಿತ್ ಧಾನಿ, ವ್ಯವಸ್ಥಾಪಕ ಪ್ರಜ್ವಲ್ ಶೆಟ್ಟಿ, ಆಸ್ಟೆನ್ ಸೆಜ್ ನ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ, ಸಮಿತಿ ಪ್ರ. ಕಾರ್ಯದರ್ಶಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಗೌರವ ಕೋಶಾಧಿಕಾರಿ ಶ್ರೀ ನಾಗೇಶ್ ಹೆಗ್ಡೆ, ಕೋಶಾಧಿಕಾರಿ ರಂಜನ್ ಕಲ್ಕೂರ, ಉಪಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ವಿ. ಬಿ. ಗೋಪಾಲ್ ಆಚಾರ್ಯ, ವಿಷ್ಣುಮೂರ್ತಿ ಉಪಾಧ್ಯಾಯ, ಶ್ರೀನಿವಾಸ್ ಆಚಾರ್ಯ ಉಪಸ್ಥಿತರಿದ್ದರು. ನಾಗರಾಜ ಆಚಾರ್ಯ ಸ್ವಾಗತಿಸಿ ರಮೇಶ್ ಭಟ್ ವಂದಿಸಿದರು.