ಬಹರೈನ್ ಹಾಗೂ ಕತಾರ್ ನಲ್ಲಿ ತುಳು, ಕನ್ನಡ ಭಾಷೆಯ ಕಾರ್ಯಕ್ರಮ ನಿರೂಪಕರಾಗಿ, ಯಕ್ಷಗಾನ ಹಾಗೂ ನಾಟಕ ಕಲಾವಿದರಾಗಿ ಅನುಭವ ಹೊಂದಿರುವ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ನವೀನ್ ಶೆಟ್ಟಿ ಇರುವೈಲ್ ಅವರು ಪ್ರತಿಷ್ಠಿತ ಕತಾರ್ ಬಂಟರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನವೀನ್ ಶೆಟ್ಟಿಯವರು ಬಹರೈನ್ ಕನ್ನಡ ಸಂಘದಲ್ಲಿ ಕಾರ್ಯದರ್ಶಿಯಾಗಿ, ಬಹರೈನ್ ಬಂಟರ ಸಂಘ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದು, ತುಳುಕೂಟ ಕತಾರ್ ನ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಸಮಾಜಸೇವಕ ನವೀನ್ ಶೆಟ್ಟಿಯವರ ಕಾರ್ಯವಧಿಯಲ್ಲಿ ಕತಾರ್ ಬಂಟರ ಸಂಘವು ಅಭಿವೃದ್ಧಿ ಹೊಂದಲಿ ಎಂದು ನಮ್ಮೆಲ್ಲರ ಹಾರೈಕೆ.













































































































