ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 29ನೇ ವಾರ್ಷಿಕ ಮಹಾಸಭೆ, ಸ0ಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮ0ಗಳೂರಿನ ಉರ್ವ ಸೆ0ಟನರಿ ಚರ್ಚ್ ಹಾಲ್ನಲ್ಲಿ ದಿನಾ0ಕ 27.08.2023ರ0ದು ಜರಗಿತು.
ಸ0ಘವು 31.03.2023ಕ್ಕೆ ಅ0ತ್ಯವಾದ, 2022-23ನೇ ಸಾಲಿನಲ್ಲಿ ರೂ.9.84ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 25 ಡಿವಿಡೆ0ಡ್ನ್ನು ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ.

ಸಂಘದ ಅಧ್ಯಕ್ಷರಾದ ಶೀ ಕೆ. ಜೈರಾಜ್ ಬಿ. ರೈಯವರು2022-23ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮಂಡಿಸಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ,ಠೇವಣಾತಿ ಮತ್ತು ಸಾಲ ಸೇರಿದಂತೆ ಒಟ್ಟು ಸಾರ್ವಕಾಲಿಕ ದಾಖಲೆಯರೂ. 145ಕೋಟಿ ವೃದ್ಧಿಯನ್ನು ದಾಖಲಿಸಿ,31/03/2023ಕ್ಕೆ ರೂ.453 ಕೋಟಿ ಠೇವಣಾತಿ,ರೂ.382 ಕೋಟಿಸಾಲ, ರೂ.835 ಕೋಟಿಮೀರಿದ ಒಟ್ಟು ವ್ಯವಹಾರ, ರೂ.9.84ಕೋಟಿ ನಿವ್ವಳ ಲಾಭ ಹಾಗೂರೂ. 3089 ಕೋಟಿ ಒಟ್ಟು ವಹಿವಾಟನ್ನು ಸಾಧಿಸಿದೆ.ಸಂಘದ ಸಾಧನೆಯ ಪ್ರಮುಖ ಮತ್ತೊಂದು ಅಂಶವೆಂದರೆ ಒಟ್ಟು ಅನುತ್ಪಾದಕ ಆಸ್ತಿಯು ಹೊರಬಾಕಿ ಸಾಲದ ಶೇ. 0.08ಗೆಸೀಮಿತವಾಗಿದ್ದು, ಕಳೆದ 16ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ.
ಸಂಘದ ಕೇಂದ್ರ ಕಛೇರಿ ಕಟ್ಟಡದ ನಿರ್ಮಾಣ ಕಾರ್ಯವನ್ನು 2024ನೇ ಸಾಲಿನಾಂತ್ಯಕ್ಕೆ ಪೂರ್ತೀಕರಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ5 ಹೊಸ ಶಾಖೆಗಳನ್ನು ಆರಂಭಿಸಲು ಮತ್ತು ಸದಸ್ಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಕೋರ್ ಬ್ಯಾಂಕಿಂಗ್ ಸೌಲಭ್ಯವನ್ನು ಅಳವಡಿಸಿಕೊಳ್ಳಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.
ಪ್ರಸ್ತುತ ರೂ.874 ಕೋಟಿ ಮೀರಿದ ಒಟ್ಟು ವ್ಯವಹಾರದ (ಠೇವಣಿ + ಸಾಲ) ವನ್ನು ಹೊಂದಿ, ಸಂಘದ “ಗಿisioಟಿ 2025”ರಂತೆ ರೂ.1,000 ಕೋಟಿ ಒಟ್ಟು ವ್ಯವಹಾರವನ್ನು 31.03.2025ಕ್ಕೆ ಸಾಧಿಸುವ ಗುರಿ ಇಟ್ಟುಕೊಂಡಿದ್ದರೂ, ಸಂಘವು ಈ ಹಿಂದಿನ ವರ್ಷಗಳಲ್ಲಿ ಗುರಿ ಮೀರಿದ ಸಾಧನೆಯೊಂದಿಗೆ ಒಟ್ಟು ವ್ಯವಹಾರವನ್ನು ಹೆಚ್ಚಿಸಿಕೊಂಡಿರುವ ಕಾರಣ,ರೂ.1,000 ಕೋಟಿ ವ್ಯವಹಾರವನ್ನು ಸಂಘದ ಸರ್ವ ಸದಸ್ಯರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಒಂದು ವರ್ಷ ಮುಂಚಿತವಾಗಿ ಅಂದರೆ31.03.2024ಕ್ಕೇ ಸಾಧಿಸಲು ಸರ್ವ ಪ್ರಯತ್ನವನ್ನು ಮಾಡಲಾಗುವುದೆಂಬ ಭರವಸೆಯನ್ನು ಅಧ್ಯಕ್ಷರು ಸಭೆಯಲ್ಲಿ ವ್ಯಕ್ತಪಡಿಸಿದರು.
ಸ0ಘದ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಜಯಪಾಲ ಶೆಟ್ಟಿಯವರ ಉಪಸ್ಥಿತಿಯಲ್ಲಿ ಅವರ ಸಂದೇಶವನ್ನು ವಾಚಿಸಲಾಯಿತು. ನಿರ್ದೇಶಕರುಗಳಾದ ಶ್ರೀಮತಿ ಎ. ರತ್ನಕಾ0ತಿ ಶೆಟ್ಟಿ, ಶ್ರೀ ಕೆ. ಸೀತಾರಾಮ ರೈ ಸವಣೂರು,ಡಾ ಕೆ. ಸುಭಾಶ್ಚ0ದ್ರ ಶೆಟ್ಟಿ, ಶ್ರೀ ಪಿ.ಎಸ್. ಅಡ್ಯ0ತಾಯ, ಸಿಎ ಎಚ್. ಆರ್. ಶೆಟ್ಟಿ, ಶ್ರೀ ವಿಠಲ ಪಿ. ಶೆಟ್ಟಿ,ಶ್ರೀ ಯಂ. ರಾಮಯ ಶೆಟ್ಟಿ, ಶ್ರೀ ಅರುಣ್ ಕುಮಾರ್ ಶೆಟ್ಟಿ, ಶ್ರೀ ಪಿ.ಬಿ. ದಿವಾಕರ ರೈ, ಶ್ರೀ ರವೀ0ದ್ರನಾಥ ಜಿ. ಹೆಗ್ಡೆ, ಶ್ರೀ ಕುಂಬ್ರ ದಯಾಕರ್ ಆಳ್ವ,ಶ್ರೀ ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ| ಎ0. ಸುಧಾಕರ ಶೆಟ್ಟಿ ಮತ್ತು ಶ್ರೀ ಅರಿಯಡ್ಕ ಚಿಕ್ಕಪ್ಪ ನಾೈಕ್ ಉಪಸ್ಥಿತರಿದ್ದರು.
ಮಹಾಪ್ರಬ0ಧಕರಾದ ಶ್ರೀ ಗಣೇಶ್ ಜಿ.ಕೆ. ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿ0ಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮ0ಡಿಸಿದರು.2022-23ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು.
ನಿರ್ದೇಶಕರುಗಳಾದ, ಶ್ರೀ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿದರು, ಶ್ರೀ ಯ0. ರಾಮಯ ಶೆಟ್ಟಿ ವ0ದಿಸಿದರು. ಸಿಬ್ಬ0ದಿಗಳಾದ,ಶ್ರೀಮತಿ ಅಶ್ವಿನಿ ಸಹನ್ ಶೆಟ್ಟಿ ಪ್ರಾರ್ಥಿಸಿದರು, ಶ್ರೀ ಧನಂಜಯ್ ಕುಮಾರ್ ಮತ್ತು ಶ್ರೀಮತಿ ಅಕ್ಷತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.ಬಹುಸಂಖ್ಯೆಯಲ್ಲಿ ಸಂಘದ ಸದಸ್ಯರುಮಹಾಸಭೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.








































































































