ಪುಣೆ ಬಂಟ್ಸ್ ಅಸೋಸಿಯೇಶನ್ ವತಿಯಿಂದ ಸಮಾಜ ಬಾಂಧವರಿಗಾಗಿ ಮಲ್ಟಿ ಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣ ಶಿಬಿರವು ಆ. 27 ರಂದು ಬೆಳಗ್ಗೆ 9 ರಿಂದ ಅಪರಾಹ್ನ 1 ರವರೆಗೆ ಪುಣೆ ಕ್ಯಾಂಪ್ ನ ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಗುರುನಾನಕ್ ದರ್ಬಾರ್ ಹಾಲ್ (ಹಾಲಿವುಡ್ ಗುರುದ್ವಾರ) ನಲ್ಲಿ ನಡೆಯಲಿದೆ.
ಪುಣೆ ಬಂಟ್ಸ್ ಅಸೋಸಿಯೇಶನ್ ಆಯೋಜನೆಯಲ್ಲಿ ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದೊಂದಿಗೆ ನಡೆಯಲಿರುವ ಈ ಉಚಿತ ಆರೋಗ್ಯ ತಪಾಸಣ ಶಿಬಿರದಲ್ಲಿ ಸ್ತ್ರೀರೋಗ ಶಾಸ್ತ್ರ ಮತ್ತು ಬಂಜೆತನ, ಮಕ್ಕಳ ರೋಗ ತಪಾಸಣೆ, ನೇತ್ರ, ದಂತ ತಪಾಸಣೆ, ಔಷಧ ಮತ್ತು ರೋಗ ಶಾಸ್ತ್ರದ ಬಗ್ಗೆ ಮಾಹಿತಿ, ತುರ್ತು ರೋಗಿಗಳಿಗೆ ಉಚಿತ ಇಸಿಜಿ, ರೋಗ ಲಕ್ಷಣ ಹೊಂದಿರುವ ರೋಗಿಗಳಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಸ್ಕ್ರೀನಿಂಗ್ ಇನ್ನಿತರ ವೈದ್ಯಕೀಯ ತಪಾಸಣೆಯನ್ನು ಮಾಡಲಾಗುವುದು.
ಆರೋಗ್ಯ ತಪಾಸಣ ಶಿಬಿರದಲ್ಲಿ ಪುಣೆಯ ಖ್ಯಾತ ವೈದ್ಯರಾದ ಡಾ.ಚಿತ್ತರಂಜನ್ ಶೆಟ್ಟಿ, ಡಾ. ಸಂಜಯ್ ಬಿ. ಕುಲಕರ್ಣಿ, ಡಾ. ಸುಧಾಕರ್ ಶೆಟ್ಟಿ, ಡಾ. ಗೋಪಾಲಕೃಷ್ಣ ಗಾವಡೆ, ಡಾ. ಜಾಹ್ನವಿ ದಾಂಗರೆ, ಡಾ. ಮಿಲಿಂದ್ ಚಾಕನೆ, ಡಾ. ಸಂದೀಪ್ ಚೋರ್ಡಿಯಾ, ಡಾ. ಸಂಜಯ್ ತೆಕವಡೆ, ಡಾ. ರಾಬರ್ಟ್ ಲೋಬೋ, ಡಾ. ಪಿ. ಆರ್. ಶೆಟ್ಟಿ, ಡಾ. ಮಂದಾರ್ ತೊಡ್ಕರ್ ಪಾಲ್ಗೊಳ್ಳಲ್ಲಿದ್ದಾರೆ. ಪುಣೆ ಬಂಟ್ಸ್ ಅಸೋಸಿಯೇಶನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದವರ ಆಯೋಜನೆಯಲ್ಲಿ ನಡೆಯಲಿರುವ ಈ ಆರೋಗ್ಯ ತಪಾಸಣ ಶಿಬಿರವು ಬಂಟ್ಸ್ ಅಸೋಸಿಯೇಶನ್ ವೈದ್ಯಕೀಯ ವಿಭಾಗದ ಕಾರ್ಯಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಗಣೇಶ್ ಹೆಗ್ಡೆ (9890075432), ಡಾ. ಸುಧಾಕರ್ ಶೆಟ್ಟಿ (9657616322), ಅರವಿಂದ್ ರೈ (8380063152), ಉಷಾ ಯು. ಶೆಟ್ಟಿ (8805532324), ಲತಾ ಎಸ್. ಶೆಟ್ಟಿ (8928586565)ಅವರನ್ನು ಸಂಪರ್ಕಿಸಬಹುದು. ಶಿಬಿರದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸುವಂತೆ ಪುಣೆ ಅಸೋಸಿಯೇಶನ್ ನ ಪ್ರಕಟಣೆ ತಿಳಿಸಿದೆ.