ಕಾರ್ಕಳ ಬಂಟರ ಸಂಘದ ವತಿಯಿಂದ ಆಟಿಡೊಂಜಿ ಬಂಟ ಕೂಟ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್ ಬಳಿ ಭಾನುವಾರ ನಡೆಯಿತು. ಮಂಗಳೂರು ತಾಲೂಕು ಬಂಟರ ಸಂಘದ ಸಂಚಾಲಕ ವಸಂತ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾಜವನ್ನು ಮುನ್ನೆಡೆಸುವ ಜವಾಬ್ದಾರಿ ವಿದ್ಯಾರ್ಥಿಗಳು ಮತ್ತು ಯುವಜನತೆ ಮೇಲಿದೆ. ಬಂಟ ಸಮಾಜದ ಪ್ರತಿಯೊಬ್ಬರೂ ಆರ್ಥಿಕ ಸಾಮಾಜಿಕ ಕಾಣುವಲ್ಲಿ ಸಂಘವು ಪ್ರಯತ್ನಸ ಬೇಕಾಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಸಂಘದ ತಿಳುವಳಿಕೆಯ ಜತೆಗೆ ಸಾಮಾಜಿಕ ಜ್ಞಾನವನ್ನು ನೀಡಿದಾಗ ಸಾಮಾಜಿಕ ಪರಿವರ್ತನೆ ಸಾಧ್ಯ. ಈ ನಿಟ್ಟಿನಲ್ಲಿ ಹೆತ್ತವರು ಕೂಡ ಪ್ರಯತ್ನಿಸಬೇಕು. ನಾವು ನಡೆದು ಬಂದ ದಾರಿಯ ಬಗ್ಗೆ ಅವರಿಗೆ ತಿಳಿ ಹೇಳುವ ಕೆಲಸವಾಗಬೇಕು ಎಂದರು.
ಬಂಟರ ಸಂಘದ ನಿಕಟಪೂರ್ವ ಸಂಚಾಲಕ ಮಣಿರಾಜ್ ಶೆಟ್ಟಿ ಕಾರ್ಕಳ, ಬಾರ್ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ರಾಜ್ಯ ಸ್ಟೋನ್ ಆಂಡ್ ಕ್ರಷರ್ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಬಂಟರ ಮಾತೃ ಸಂಘದ ಸದಸ್ಯ ಚೇತನ್ ಶೆಟ್ಟಿ ಕೊರಳ, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸವಿತಾ ಶೆಟ್ಟಿ, ಕಾರ್ಯದರ್ಶಿ ಸುನೀತಾ ಸಿರಿಯಣ್ಣ ಶೆಟ್ಟಿ, ಶೈಲಜಾ ವಿಜಯ್ ಶೆಟ್ಟಿ ನಿಟ್ಟೆ, ವಿಜಯ ಕಡಂಬ, ಯುವ ಬಂಟರ ಸಂಘದ ಅಧ್ಯಕ್ಷ ಅವಿನಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ವಿವಿಧ ಕ್ರೀಡೆಗಳು ಜರುಗಿದವು. ಕಾರ್ಕಳ ಬಂಟರ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ ಸ್ವಾಗತಿಸಿದರು. ಬೇಬಿ ಆಳ್ವ ನಿರೂಪಿಸಿದರು. ಜಯಂತಿ ಶೆಟ್ಟಿ ಕುಕ್ಕುಂದೂರು ವಂದಿಸಿದರು.