ಹಳ್ಳಿಯ ಜನರ ಬೇಸಾಯದ ಆನಂತರದ ಭವಣೆ, ಅಂದಿನ ತೊಡರುಗಳನ್ನು, ಕಷ್ಟ ಕಾರ್ಪಣ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಈ ಒಂದು ಆಟಿದ ನೆಂಪು ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಹಿಂದೆ ಊರಿನ ನಂಬಿಕೆಯ ದಿನಗಳಲ್ಲಿ ಆಷಾಢ ತಿಂಗಳಲ್ಲಿ ಯಾವುದೇ ಪವಿತ್ರ ಕಾರ್ಯಕ್ರಮಗಳು ಜರಗುತ್ತಿರಲಿಲ್ಲ. ಕಾರಣ ಆ ತಿಂಗಳು ಯಾವುದೇ ಕಾರ್ಯಕ್ರಮಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ದೈಹಿಕವಾಗಿ, ಮಾನಸಿಕವಾಗಿಯೂ ಆಷಾಢ ತಿಂಗಳು ಒಂದು ತಟಸ್ಥ ಮಾಸವಾಗಿತ್ತು ಎಂದು ಕೇಮಾರು ಸಂದೀಪನಿ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜೀ ನುಡಿದರು. ಅವರು ಮಂಗಳೂರು ಉರ್ವ ಸ್ಟೋರ್ ನಲ್ಲಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಭಾಭವನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದ ವತಿಯಿಂದ “ಆಟಿದ ನೆಂಪು” ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ, ಮಾತನಾಡಿದರು. ಬದಲಾದ ಬದುಕಿನಲ್ಲಿ ಅಂದಿನ ಬದುಕಿನ ಆಚಾರ-ವಿಚಾರಗಳು ಕಟ್ಟುನಿಟ್ಟಿನ ಸಂಸ್ಕೃತಿ, ಸಂಪ್ರದಾಯದ ಪಾಲನೆಯ ಬಗ್ಗೆ ನಾವು ಇಂದಿನ ಮಕ್ಕಳಿಗೆ ಆಟಿಯ ಇಂತಹ ಕಾರ್ಯಕ್ರಮದ ಮೂಲಕ ತಿಳಿಸುವುದು ಅವಶ್ಯ. ಇಂದಿನ ಕಾರ್ಯಕ್ರಮಕ್ಕೆ ತುಳುನಾಡ ರಕ್ಷಣಾ ವೇದಿಕೆಯ ಮಹಿಳೆಯರ ಸಂಘಟಿತ ಯೋಜನೆ ಯಶಸ್ಸನ್ನು ತಂದಿದೆ. ಮುಂದೆಯೂ ಎಲ್ಲರ ಸಹಕಾರ ದೊರೆಯಲಿ ಎಂದು ಹಾರೈಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಮಾತನಾಡಿ ಆಟಿಯ ಕಾರ್ಯಕ್ರಮದಲ್ಲಿ ವಿವಿಧ ತಿನಸುಗಳ ಪ್ರದರ್ಶನಕ್ಕೆ ಮಣ್ಣಿನ ಪಾತ್ರೆಗಳಿಗೆ ಪ್ರಾಮುಖ್ಯತೆ ನೀಡಿ ಎಂದರು. ನಂತರ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ ಪಾಲೆ ಮರ ನಶಿಸಿ ಹೋಗುವ ಈ ಕಾಲಗಟ್ಟದಲ್ಲಿ ಅದನ್ನು ಸಂರಕ್ಷಿಸುವ ಅಗತ್ಯತೆ ಇದೆ ಎಂದರು.
ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕ ಮಂಗಳೂರು ಇದರ ಅಧ್ಯಕ್ಷರಾದ ಆಶಾ ಶೆಟ್ಟಿ ಅತ್ತಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಮಂಗಳೂರು ದಕ್ಷಿಣ ವಿಭಾಗ ಶಾಸಕ ಡಿ. ವೇದವ್ಯಾಸ ಕಾಮತ್, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ, ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿ’ಸೋಜ, ಭಾರತೀಯ ಕಮ್ಯುನಿಸ್ಟ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕರ್ನೂರ್ ಮೋಹನ್ ರೈ, ಅಖಿಲ ಭಾರತ ತುಳು ಒಕ್ಕೂಟ ಸಂಘಟನಾ ಕಾರ್ಯದರ್ಶಿ ಡಾ. ರಾಜೇಶ್ ಆಳ್ವ ಬದಿಯಡ್ಕ, ಸಮಾಜ ಸೇವಕಿ, ಕಲಾವಿದೆ ಶ್ರೀಮತಿ ವೀಣಾ ಜಯಂತಿ ಶೆಟ್ಟಿ, ಸಮಾಜ ಸೇವಕ ಎಂ.ಬಿ. ಖಾನ್ ಮುಲ್ಕಿ, ಮೊದಲಾದವರು ಉಪಸ್ಥಿತರಿದ್ದು, ಶುಭಾಸಂಶನೆಗೈದರು.
ಈ ವೇಳೆ ವಿವಿಧ ವಿಷಯದಲ್ಲಿ ಸಾಧನೆ ಮಾಡಿದ ಸಾಧಕರದ ಸಮಾಜ ಸೇವಕ ಶ್ರೀ ಅರ್ಜುನ್ ಭಂಡಾರ್ಕರ್ ಖ್ಯಾತ ವೈದ್ಯ ಡಾ! ಸತೀಶ್ ಕಲ್ಲಿಮಾರ್ ತುಳು- ಕನ್ನಡ ಚಿತ್ರ ನಿರ್ದೇಶಕ ಶ್ರೀ ಇಸ್ಮಾಯಿಲ್ ಮೂಡುಶೆಡ್ಡೆ , ಪಶ್ಚಿಮ ರಿಯಾ ಸಂಸ್ಥೆಯ ಶ್ರೀ ರೋಹಿತ್ ಸಾಂಕ್ತುಸ್ ಬಹುಮುಖ ಪ್ರತಿಭೆ ಕುಮಾರ್ ಧನ್ವಿತ್ ವೀರೇಂದ್ರ ಸುವರ್ಣ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.