ಗಣರಾಜ್ಯೋತ್ಸವದ ಪ್ರಯುಕ್ತ 2023 ರ ಜನವರಿ 26 ರಂದು ರಾಷ್ಟ್ರರಾಜಧಾನಿ ದೆಹಲಿಯ ಇಂಡಿಯಾ ಗೇಟ್ ಮತ್ತು ರಾಷ್ಟ್ರಪತಿ ಭವನದ ನಡುವಿನ ಕರ್ತವ್ಯ ಪಥದಲ್ಲಿ ನಡೆದ ಕರ್ನಾಟಕದ ಮೂವರು ಮಾತೆಯರ ಕಥನ ಬಿಂಬಿಸುವ ಮನ ಮುಟ್ಟುವ ಮನಸ್ಸು ಅರಳುವ, ಸ್ಪೂರ್ತಿ ತುಂಬುವ ನಾರಿ ಶಕ್ತಿ ಸ್ತಬ್ಧ ಚಿತ್ರ ಪಥಸಂಚಲನದ ಭವ್ಯ ಮೆರವಣಿಗೆಯ ಪೆರೇಡ್ ಗೆ ಆಯ್ಕೆ ಆಗಿರುವುದನ್ನು ವಾರ್ತಾ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟ್ಯಾಬ್ಲೊ ತಯಾರಾಗಿಸಿದೆ.
ನಾರಿ ಶಕ್ತಿಯ ಪರಿಚಯ= ಅಜಾದಿಕಾ ಅಮೃತ ಮಹೋತ್ಸವದ ಹೊತ್ತಲ್ಲಿ ನಾಡಿನ ಹೆಮ್ಮೆಯ ಪ್ರತೀಕವಾಗಿರುವ ಪದ್ಮ ಶ್ರೀ ಪುರಸ್ಕೃತ ನಾರಿ ಶಕ್ತಿ ಪರಿಕಲ್ಪನೆಯಲ್ಲಿ ಸ್ತಬ್ಧ ಚಿತ್ರಸಿದ್ದಗೊಳಿಸಿ ಈ ಮೂಲಕ ಭಾರತದ ನಾರಿ ಅದರಲ್ಲೂ ಕರ್ನಾಟಕದ ನಾರಿ ಶಕ್ತಿಯ ಮೂಲಬೇರನ್ನು ಪ್ರಪಂಚಕ್ಕೆ ತೋರಿಸುವ ಕೆಲಸ ಆಗಿದೆ.
ಈ ಸಲ ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಿಶಕ್ತಿ ಮುಖ್ಯ ಥಿಮ್ ಆಗಿದ್ದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರ ಕುರಿತು ಟ್ಯಾಬೋಗಳ ಗಮನಸೆಳೆದಿದೆ. ಸ್ತಬ್ಧ ಚಿತ್ರದಲ್ಲಿ ಮುಖ್ಯವಾಗಿ 3 ಭಾಗಗಳಿದ್ದು ಮೊದಲ ಭಾಗದಲ್ಲಿ ಮಗುವನ್ನು ಹಿಡಿದ ಸೂಲಗಿತ್ತಿ ಸರಸಮ್ಮ ಅವರನ್ನು ತೋರಿಸಲಾಗಿದೆ.ನುರಿತ ವೈದ್ಯರಿಲ್ಲದ ಸಮಯದಲ್ಲಿ ತನ್ನದೆ ಆದ ಜಾಣ್ಮೆ ಯಿಂದ 7 ದಶಕಗಳ ಕಾಲ ಹೆರಿಗೆ ಮಾಡಿಸಿದ ಖ್ಯಾತಿ ಇವರದ್ದು. ಸ್ತಬ್ದ ಚಿತ್ರದ ಎದುರಿನ ಭಾಗದಲ್ಲಿ ಕಲಘಟಿಗಿ ತೊಟ್ಟಿಲು ಇರುವ ಚಿತ್ರಣ ಎದ್ದುಕಾಣುತ್ತಿದ್ದರು ಯಾವುದೆ ಮಾಧ್ಯಮದಲ್ಲಿ ಈ ತೊಟ್ಟಿಲನ್ನುಉಲ್ಲೇಖಿಸಿಲ್ಲದಿರುವುದು ಒಂದು ವಿಪರ್ಯಾಸ. ಈ ಬಗ್ಗೆ ಧಾರವಾಡ ಮೂಲ ಕಲಘಟಿಗಿ ತೊಟ್ಟಿಲು ಮಾಡುವ ಕಲಾವಿದರು ತೊಟ್ಟಿಲಿದೆ ಎಂದರೆ ಹೊರತು ಯಾಕೆ ಯಾರು ಕಲಘಟಿಗಿ ಶಬ್ದ ವೇ ಉಚ್ಚರಿಸಿಲ್ಲಾ ಎಂದು ನೊಂದುಕೊಂಡಿದ್ದರು.
ಕಲಘಟಿಗಿ ತೊಟ್ಟಿಲು= ಕಲಘಟಗಿಯ ಬಣ್ಣದ ಮರದ ತೊಟ್ಟಿಲುಗಳು ವಿಶ್ವ ಪ್ರಸಿದ್ಧ. ಕೃತಕ ಬಣ್ಣಬಳಸದೆ ಅರಗಿನಿಂದ ತಯಾರಿಸಿದ ನೈಸರ್ಗಿಕ ಲೆಪನದ ಸಾಗುವಣಿಮರ, ತೇಗಿನ ಮರದ ತೋಟಿಲಿಗೆ ಜೇಡುಮಣ್ಣು, ಅಂಟು ಅರಗು ಬಳಸಲಾಗುತ್ತದೆ. ಪುರಾಣ ಚಿತ್ರಗಳೇ ಹೆಚ್ಚು ಆದ್ಯತೆ ನೀಡುವ ಮಹಾಭಾರತ ಚಿತ್ರ ರೂಪಗಳಿರುವ, ಸಾಮಾನ್ಯವಾಗಿ ತೊಟ್ಟಿಲಿನ ಸುತ್ತಲೂ ರಾಮ, ಕೃಷ್ಣರ ಬಾಲ್ಯದ ದಿನಚರಿಯಲ್ಲಿ ಚಿತ್ರಣಗಳ ಅನೇಕ ಕಥಾ ಸರಾಂಶ ಚಿತ್ರ ಗಳನ್ನು ಬಿಡಿಸಲಾಗುತ್ತದೆ. ತೊಟ್ಟಿಲು ಹಿಡಿಗೆ ಗಂಟೆ ಕಟ್ಟಲಾಗುತ್ತದೆ.
ಒಣಮರದಿಂದ ತಯಾರಿಸುವ ತೊಟ್ಟಿಲಿಗೆ ಹುಣಸೆ ಹಣ್ಣನ್ನು ರುಬ್ಬಿ ಕುದಿಸಿ ಸೋಸಿ ಜೇಡಿಮಣ್ಣುಸೇರಿಸಿ ತೊಟ್ಟಿಲಿಗೆ ಹಚ್ಚುತ್ತಾರೆ. ಕಲ್ಲಿನಿಂದ ಉಜ್ಜಿ ನಂತರ ಕೇದಗಿ ಎಲೆಯಿಂದ ಪಾಲಿಶ್ ಮಾಡಲಾಗುತ್ತದೆ. ಈ ತೊಟ್ಟಿಲಿಗೆ ಬಾರಿ ಪ್ರಮಾಣದಲ್ಲಿ ಬೇಡಿಕೆ ಇದ್ದು ರಾಜಕಾರಣಿಗಳು, ದೊಡ್ಡದೊಡ್ಡ ಕಲಾವಿದರ ಮಕ್ಕಳಿಗೆ ಇಲ್ಲಿನ ತೊಟ್ಟಿಲು ಕರಿದಿಸಿರುವ ವಿಚಾರವನ್ನು ಇಲ್ಲಿನ ಕೆಲಸ ಕರ್ಮಿಗಳು ಸಂತಸದಿ ಹಂಚಿಕೊಳ್ಳುತ್ತಾರೆ. ಕಲಘಟಗಿ ಧಾರವಾಡದ ಒಂದು ಊರು ಊರಿನ ಹೆಸರೆ ಈ ತೊಟ್ಟಿಲಿಗೆ ಬಂದಿದ್ದು.
ಮಧ್ಯ ಭಾಗದಲ್ಲಿನಮ್ಮ ರಾಜ್ಯದ ಹೆಮ್ಮೆಯ ವೃಕ್ಷ ಮಾತೆ ಎಂದೆ ಪ್ರಖ್ಯಾತ ಪಡೆದ ಹಾಲಕ್ಕಿಸಮಾಜದ ತುಳಸಿ ಗೌಡ ಅವರು ಮರ ಬೆಳೆಸುತ್ತಿರುವ ಪರಿಕಲ್ಪನೆಯನ್ನು ಬಿಂಬಿಸಲಾಗುತ್ತದೆ. ಅಪರೂಪದ 30 ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳಸಿರಕ್ಷಿಸಿದವರು.
ಕೊನೆಯ ಭಾಗದಲ್ಲಿ ತ್ಯಾಗದ ಸಂಕೇತವನ್ನಾಗಿ ಹೆದ್ದಾರಿ ಯಲ್ಲಿ ಮರ ನೆಟ್ಟು ಸಸಿಗಳಿಗೆ ನೀರುಣಿಸುವ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಮರಗಳನ್ನು ಬೆಳೆಸುವ ಚಿತ್ರಣ ಹರಿಸಿನ ಪರಿಸರ ಸೃಷ್ಟಿಯ ಸಂಕಲ್ಪದಲ್ಲಿ ಗಿಡ, ಮರ, ಬೆಟ್ಟ, ಗುಡ್ಡ ಪಕ್ಷಿಗಳು ಕಂಗೊಳಸುತ್ತಿವೆ. ಸಸ್ಯ ಶಾಮಲೆ ಕಂಗೊಳಿಸಿದೆ.
ನಾರಿಶಕ್ತಿ ಥಿಮ್ ನಡಿ ಪ್ರದರ್ಶಿಸಿದ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳುವ ನಮ್ಮ ರಾಜ್ಯದ ಸ್ತಬ್ಧ ಚಿತ್ರ ವಿಷಯಗಳ ಆಯ್ಕೆ ಪಟ್ಟಿ,ವಿನ್ಯಾಸ, ರಚನೆ, ಸಮನ್ವಯ ನಿರ್ಮಾಣ ಹೊಣೆಯನ್ನು ರಾಜ್ಯ ವಾರ್ತಾ ಇಲಾಖೆವಹಿಸಿದ್ದು ಸ್ತಬ್ಧ ಚಿತ್ರ ನಿರ್ಮಾಣ ಚಟುವಟಿಕೆ ಮತ್ತು ಪಥಸಂಚಲನದ ತರಬೇತಿ ಕಾರ್ಯಕ್ರಮಗಳು ರಕ್ಷಣಾ ಇಲಾಖೆಯ ಮೇಲುಸ್ತುವಾರಿ ಅಧಿಕಾರಿಗಳ ಆಯುಕ್ತ ಡಾ. ಪಿ ಎಸ್ ಹರ್ಷ ಅವರ ನೇತೃತ್ವದಲ್ಲಿ ಕೇವಲ ಒಂದೇ ಒಂದು ವಾರದಲ್ಲಿ ಟ್ಯಾಬ್ಲೋ ಸಿದ್ದಪಡಿಸಲಾಗಿದೆ.
ರಾಜ್ಯದಕಲಾವಿದರ ಕಲಾನೈಪುಣ್ಯತೆ ಮೆಚ್ಚಲೆ ಬೇಕು. ಸ್ತಬ್ಧ ಚಿತ್ರ ನಿರ್ಮಾಣವನ್ನು ಖ್ಯಾತ ಕಲಾವಿನ್ಯಾಸಕಾರ ಶಶಿಧರ ಅಡಪ ಹಾಗೂ ಅವರ ಬಲಾಡ್ಯ ತಂಡದ ಕಲಾವಿದರ ಕ್ಯೆಚಳಕದಿಂದ ಮೂಡಿಬಂದಿದೆ. ಕರ್ನಾಟಕ ನಾರಿ ಶಕ್ತಿ ಸಾಗುವಾಗ ಅದರ ಬದಿಯಲ್ಲಿ ಕಾರವಾರ ಅಂಕೋಲಾ ತಾಲೂಕಿನ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತ ತಂಡದ ನೃತ್ಯ ಕೂಡ ಮನ ಸೂರೆಗೊಳ್ಳುವಂತಿತ್ತು.
ನಮ್ಮ ದೇಶದ ಬೇರೆ ಬೇರೆ ರಾಜ್ಯದ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಸಾಗಿದ್ದು ಗಣರಾಜ್ಯೋತ್ಸವದ ಸಮಾರಂಭದಲ್ಲಿ ವಿದೇಶಿ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವುದು ವಾಡಿಕೆ . ಮಂತ್ರಿಮಹೋದಯರು, ಆಹ್ವಾನಿತರು,ದೇಶದ ಮೂರು ಪಡೆಗಳ ದಂಡನಾಯಕ ಕವಾಯತಿನಲ್ಲಿ ಭಾಗಿಯಾಗುವರು. ಈ ಸಂದರ್ಭದಲ್ಲಿ ಆಯೋಜಿಸುವ ಪರೇಡ್ ನಲ್ಲಿ ದೇಶದ ವೈವಿಧ್ಯಮಯ ಸಂಸ್ಕೃತಿ ಮತ್ತು ದೇಶದ ಸೇನಾಪಡೆಗಳ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಲಾಗುತ್ತದೆ.
ರಾಜಪಥ ನವೀಕರಣ ಗೊಂಡು ಕರ್ತವ್ಯ ಪಥವಾಗಿ ಅನಾವರಣಗೊಂಡ ನಂತರ ಇದೆ ಮೊದಲ ಬಾರಿ ಅಲ್ಲಿ ಗಣಜ್ಯೋತ್ಸವದ ಪರೇಡ್ ನಡೆದಿರುವಾಗ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಧ್ವಜ ಅನಾವರಗೊಳಿಸಿದರು. ಮುಖ್ಯ ಅತಿಥಿಗಳಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್ಸಿಸಿ ಕಾರ್ಯ ಕ್ರಮದಲ್ಲು ಭಾಗವಹಿಸಿದ್ದರು. ಪರೇಡ್ ಸೇನಾಬಲ, ಭವ್ಯ ಸಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಾಯಿತು.
ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯದ ನಾರಿಶಕ್ತಿ ಅಥವಾ ಮಹಿಳಾ ಸಭಿಲೀಕರಣ ವಿಷಯಗಳ ಸ್ತಬ್ಧ ಚಿತ್ರಗಳನ್ನು ಪ್ರದರ್ಶಸುವ ಮೂಲಕ ಗಣರಾಜ್ಯೊತ್ಸವ ಸಂಭ್ರಮಕ್ಕೆ ಹೊಸ ಮೆರುಗನ್ನು ತುಂಬಿದೆ.ಮೊತ್ತಮೊದಲ ಬಾರಿಗೆ 3 ರಾಜ್ಯ ಗಳು ಒಂದೇ ವಿಷಯಕ್ಕೆ ಸಂಬಂದಿಸಿದ ಸ್ತಬ್ಧ ಚಿತ್ರಗಳನ್ನು ತಯಾರು ಮಾಡಿರುವುದು ವಿಶೇಷ. ಅದರಲ್ಲೂ ನಾರಿಶಕ್ತಿಗೆ ಇನ್ನಷ್ಟು ಬಲ ಬಂದಿದೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.