ನಮ್ಮ ಆಹಾರದಲ್ಲಿ ದಿನವೂ ಇರಲಿ ಕರಿಬೇವು….!” ಆರೋಗ್ಯ ಸಮಸ್ಯೆ ನಿವಾರಣೆಗೆ ಎಂದೂ ಕಾಡುವುದಿಲ್ಲ ದೇಹದ ಉಷ್ಣತೆಯ ಕಾವು….!” ಕರಿಬೇವು ಔಷಧೀಯ ಸಸ್ಯ…!
ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)
ನಮ್ಮ ದೈನಂದಿನ ಅಡುಗೆಯಲ್ಲಿ ಬಳಸುವಂತಹ ಕರಿಬೇವು ದೇಹದಲ್ಲಿನ ಪ್ರತಿಕೂಲ ಪರಿಸ್ಥಿತಿ ಹಾಗೂ ಜಠರ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವುದರೊಂದಿಗೆ, ಮನುಷ್ಯನ ದೇಹಕ್ಕೆ ಬೇಕಾಗುವಂತಹ ವಿಟಮಿನ್ ಗಳನ್ನು ನೀಡುವಲ್ಲಿ ಸಹಕರಿಯಾಗುತ್ತದೆ. ಮನುಷ್ಯನ ದೇಹದಲ್ಲಿನ ಉಷ್ಣಾಂಶವನ್ನು ಇರುವುದರಿಂದ ತಲೆ ಕೂದಲಿನ ಸಮಸ್ಯೆ ತಲೆ ಹೊಟ್ಟು ನಿವಾರಣೆ, ಹಾಗೂ ಅತಿ ಉಷ್ಣವದಂತಹ ಜಾಗದಲ್ಲಿನ ಭಾಗಗಳನ್ನು ವಿಶೇಷ ರೀತಿಯಲ್ಲಿ ಸಂರಕ್ಷಿಸುವುದರ ಮೂಲಕ ಕರಿಬೇವು ಕಾರ್ಯನಿರ್ವಹಿಸುತ್ತದೆ. ಮನುಷ್ಯನ ದಿನಬಳಕೆ ವಸ್ತುಗಳಲ್ಲಿ ಕರಿಬೇವು ಅಗ್ರಪಂತಿಯಲ್ಲಿ ಇರುವುದರಿಂದ ಕೃಷಿಕರು ಎಚ್ಚೆತವಾಗಿ ತಮ್ಮ ಹಿತ್ತಲು ಗಿಡಗಳಲ್ಲಿ ಕರಿಬೇವನ್ನು ಬೆಳೆಸಿ ಇತರರಿಗೆ ಮಾದರಿ ಕೂಡ ಆಗಿದ ಉದಾರಣೆ, ರಾಜ್ಯದ ವಿವಿಧ ಭಾಗದಲ್ಲಿದೆ ಕರಿಬೇವು ನಮ್ಮ ಹಿತ್ತಲಗಳಲ್ಲಿ ಒಂದು ವೈಜ್ಞಾನಿಕ ಉಪಯೋಗಗಳಲ್ಲಿ ದೈನಂದಿನ ಅಡುಗೆ ಪದಾರ್ಥದಲ್ಲಿ ಕರಿಬೇವು ಒಗ್ಗರಣೆ ಬಿದ್ದರೆ ಮಾತ್ರ ಕೆಲವರಿಗೆ ತೃಪ್ತಿದಾಯಕವಾಗುತ್ತದೆ ಅದೇ ರೀತಿ ಕರಿಬೇವಿನ ವಿವಿಧ ಉಪಯೋಗಗಳು ನಾವು ಬಳಸುವಂತಹ ರೀತಿ ವಿಭಿನ್ನತರವಾಗಿ ಇದ್ದರೆ ಪ್ರತಿ ಅಡುಗೆಯಲ್ಲಿ ಆನಂದದಾಯಕರ ಪರಿಮಳ ಸವಿಸಬಹುದು.
ಕರಿಬೇವಿನ ಔಷಧಿ ಗುಣಗಳು :
ಕರಿಬೇವು ಎಂದಾಕ್ಷಣ ಒಗ್ಗರಣೆಯ ನೆನಪಾಗುತ್ತದೆ. ಇದನ್ನು ಒಗ್ಗರಣೆ ಸೊಪ್ಪು ಎಂದು ಕೂಡ ಕರೆಯುತ್ತಾರೆ. ಕರಿಬೇವನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಉಪಯೋಗಿಸದಿದ್ದರೆ ರುಚಿಯೇ ಬರುವುದಿಲ್ಲ. ಇದನ್ನು ಸಾಂಬಾರಿಗೆ ಒಗ್ಗರಣೆ ಕೊಡಲು, ಬಜೆ ಮಾಡಲು, ಚಟ್ನಿ ಮಾಡಲು, ಪಲ್ಯ ಮಾಡುವಾಗ ಇದರ ಬಳಕೆ ಹೆಚ್ಚು. ಕರಿಬೇವು ಇಲ್ಲದ ಅಡುಗೆ ರುಚಿಹೀನ ಎನ್ನಬಹುದು. ಈ ಕರಿಬೇವು ಅಡುಗೆಗೆ ಮಾತ್ರ ಸೀಮಿತವಾಗಿಲ್ಲ, ಇದನ್ನು ಸೌಂಧರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ.
ಕರಿಬೇವಿನ ಎಲೆಗಳು ಕಡು ಹಸಿರು ಬಣ್ಣದಲ್ಲಿದ್ದು,ತುಂಬಾ ಸುವಾಸನೆ ಭರಿತವಾಗಿರುತ್ತವೆ. ಕರಿಬೇವು ದೊಡ್ಡ ಮರವಾಗಿ ಬೆಳೆಯುತ್ತದೆ. ಇದು ಕಾಡಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದನ್ನು ಮನೆ ಅಂಗಳದಲ್ಲಿಯೂ ಸುಲಭವಾಗಿ ಬೆಳೆಸಬಹುದಾಗಿದೆ. ಕರಿಬೇವಿನಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಿಂ, ಕಬ್ಬಿಣ, ವಿಟಮಿನ್ ಸಿ, ,ಬಿ, ಎ ಪೋಷಕಾಂಶಗಳು ಇರುತ್ತವೆ. ಇದರ ವೈಜ್ಞಾನಿಕ ಹೆಸರು ಮರಯ ಕೊನಿಗೆ (Murraya Koenigii). ಕರಿಬೇವನ್ನು ಹೆಚ್ಚು ಹೆಚ್ಚು ಆಹಾರದಲ್ಲಿ ಬಳಸುವುದು ತುಂಬಾ ಸಹಾಯಕಾರಿಯಾಗಿದೆ. ಇದು ಹೆಚ್ಚಿನ ಔಷಧಿ ಗುಣಗಳನ್ನು ಹೊಂದಿದೆ.
ಕರಿಬೇವಿನ ಔಷಧಿ ಗುಣಗಳು ಬಿಳಿ ಕೂದಲ ಸಮಸ್ಯೆಯನ್ನು ಕರಿಬೇವು ದೂರಮಾಡುತ್ತದೆದೇಹದಲ್ಲಿ ಪೋಷಕಾಂಶದ ಕೊರತೆಯಾದಾಗ ಮಕ್ಕಳಿಗೆ ಕೂದಲು ಬೇಗ ಬಿಳಿಯಾಗುತ್ತದೆ. ಇಂತಹ ಸಮಸ್ಯೆಗೆ ಕರಿಬೇವು ತುಂಬಾ ಸಹಕಾರಿಯಾಗಿದೆ. ಹಾಗು ಕೂದಲ ಬೆಳವಣಿಗೆಗೂ ಉಪಯುಕ್ತವಾಗಿದೆ .ಕರಿಬೇವಿನ ಎಲೆಗಳನ್ನು ಒಣಗಿಸಿ, ಅದನ್ನು ಕೊಬ್ಬರಿ ಎಣ್ಣೆಯಲ್ಲಿ, ಎಣ್ಣೆ ಹಸಿರು ಬಣ್ಣಕ್ಕೆ ಬರುವ ವರೆಗೂ ಕುದಿಸಬೇಕು. ನಂತರ ತಣಿಸಿ ಕೂದಲಿಗೆ ಪ್ರತಿ ವಾರಕೊಮ್ಮೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು.
ಎಸಿಡಿಟಿಯನ್ನು ಕರಿಬೇವು ಕಡಿಮೆಮಾಡುತ್ತದೆ:-
ಕರಿಬೇವಿನ ಮರದ ತೊಗಟೆಯನ್ನ ಒಣಗಿಸಿ, ಪುಡಿಮಾಡಿಕೊಂಡು, ಒಂದು ಚಮಚ ಆ ಪುಡಿಯನ್ನು ನೀರಲ್ಲಿ ಬೆರಸಿ ಸೇವಿಸದರೆ ಎಸಿಡಿಟಿ ಕಡಿಮೆಯಾಗುತ್ತದೆ.
ಕರಿಬೇವಿನಲ್ಲಿ ವಾಯುಕಾರಕವನ್ನು ತೆಗೆದು ಹಾಕುವ ಗುಣವಿದೆ:-
1 ರಿಂದ 2 ಚಮಚದಷ್ಟು ಕರಿಬೇವಿನ ಎಲೆಯ ರಸಕ್ಕೆ, 1 ಚಮಚ ನಿಂಬೆ ರಸ ಮತ್ತು ಸಕ್ಕರೆ ಸೇರಿಸಿ ಸೇವಿಸುವುದರಿಂದ ಅಜೀರ್ಣವನ್ನು ಹೋಗಲಾಡಿಸಬಹುದು. ಅಥವಾ ಕರಿಬೇವನ್ನು ಪ್ರತಿದಿನ ಆಹಾರದಲ್ಲೂ ಕೂಡ ಉಪಯೋಗಿಸಬಹುದು.
ಬೇಧಿ, ಆಮಶಂಕೆ ನಿವಾರಣೆಗೆ ಕರಿಬೇವು ಸಹಕಾರಿ
ಎಳೆಯದಾದ ಕರಿಬೇವಿನ ಎಲೆಯನ್ನು ಜೇನು ತುಪ್ಪದೊಂದಿಗೆ ತಿನ್ನುವುದು, ಅಥವಾ ಕರಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಸೇರಿಸಿ ಕುಡಿಯುವುದರಿಂದ ಬೇಧಿ, ಆಮಶಂಕೆಯನ್ನು ನಿವಾರಿಸಬಹುದು.
ಬೊಜ್ಜು ಕರಗಿಸಲು ಕರಿಬೇವು ಸಹಕಾರಿ:-
ಕೆಲವರಿಗೆ ದೇಹದ ತೂಕ ಕಡಿಮೆ ಮಾಡುವುದು ಹೇಗೆ ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಕರಿಬೇವು ದೇಹದಲ್ಲಿನ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವುದರ ಮೂಲಕ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ 8 ರಿಂದ 10 ತಾಜಾ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ದೇಹದ ತೂಕ ಕಡಿಮೆ ಮಾಡಬಹುದು.
ಕರಿಬೇವು ಕಾಮಾಲೆ ರೋಗವನ್ನು ಗುಣಪಡಿಸುವ ಗುಣವನ್ನು ಹೊಂದಿದೆ
10 ರಿಂದ 12 ಕರಿಬೇವಿನ ಎಲೆಗಳನ್ನ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಏಕೆಂದರೆ ಎಲೆಗಳ ಮೇಲೆ ಸಣ್ಣ ಪುಟ್ಟ ಕಶ್ಮಲಗಳು ಅಥವಾ ಹುಳು ಹಪ್ಪಟೆಗಳು ಹರಿದಿರುವ ಸಾಧ್ಯತೆ ಇರುತ್ತದೆ. ನಂತರ ಎಲೆಗಳನ್ನು ಅರೆದು ಆ ಮಿಶ್ರಣವನ್ನು ಸುಮಾರು 60 ರಿಂದ 100 ಮೀ ಲಿ ಎಳೆನೀರಿನೊಂದಿಗೆ ಕುಡಿಯುವುದರಿಂದ ಕಾಮಾಲೆ ರೋಗವನ್ನು ಹೋಗಲಾಡಿಸಬಹುದು.
ರಕ್ತಹೀನತೆಯ ನಿವಾರಣೆಗೆ ಕರಿಬೇವು ಸಹಕಾರಿ:-
1/2 ಚಮಚ ಕರಿಬೇವು ಸೊಪ್ಪಿನ ಪುಡಿಯನ್ನು, ಜೇನು ತುಪ್ಪದ ಜೊತೆ ಸಮ ಪ್ರಮಾಣದಲ್ಲಿ ಬೆರಸಿ ಸೇವಿಸುವುದರಿಂದ ಅದರಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸುತ್ತದೆ.
ಕರಿಬೇವು ಕೂದಲು ಉದುರುವುದನ್ನು ತಡೆಯುತ್ತದೆ. ಪ್ರತಿನಿತ್ಯ ಕರಿಬೇವನ್ನು ಅಡುಗೆಯಲ್ಲಿ ಬಳಸುವುದರಿಂದ ವಿವಿಧ ತರಹದ ಉಷ್ಣತೆಯ ಪ್ರಕಾರ ತೆ ಕಾಯಿಲೆಗಳು ಮತ್ತು ತಲೆ ಕೂದಲಿನ ಉತ್ತಮ ಬೆಳವಣಿಗೆ ಸಹಕರಿಸುತ್ತದೆ ಅದಲ್ಲದೆ ಪ್ರತಿನಿತ್ಯ ಬಳಸುವ ಅಡುಗೆಯಲ್ಲಿ ಕರಿಬೇವು, ಸ್ವಲ್ಪ ಪ್ರಮಾಣದಲ್ಲೂ ಬಳಸುವುದು ಅತ್ಯಗತ್ಯ. ತಲೆ ಕೂದಲಿನ ಹೊಟ್ಟು ಸಮಸ್ಯೆ ,ತಲೆ ಕೂದಲಿನ ಬೆಳೆಯುವಲ್ಲಿ ಕರಿಬೇವು ವಿಶೇಷ ಪಾತ್ರ ವಹಿಸುತ್ತದೆ.
-ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು)mob:9632581508