ಗುರುಪುರ ಬಂಟರ ಮಾತೃ ಸಂಘದ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಬಂಟ ಯುವ ಸಮಾಜವನ್ನು ಸಂಘಟಿಸುವ ದೃಷ್ಟಿಯಿಂದ ಯುವ ಬಂಟರ ಸಭೆಯು ಕುಳವೂರು, ಕಿಲೆಂಜಾರು, ಮುತ್ತೂರು ಗ್ರಾಮಗಳಲ್ಲಿ ದಿನಾಂಕ 12-06-2022 ರವಿವಾರ ಯುವ ವಿಭಾಗದ ಅಧ್ಯಕ್ಷರಾದ ದೀಪಕ್ ಶೆಟ್ಟಿ ಲಿಂಗ ಮಾರ್ ಗುತ್ತು ಇವರ ನೇತ್ರತ್ವದಲ್ಲಿ ನಡೆಯಿತು.
ಈ ಸಭೆಯಲ್ಲಿ ಗ್ರಾಮದ ಹೆಚ್ಚಿನ ಯುವಕರು ಆಸಕ್ತಿಯಿಂದ ಭಾಗವಹಿಸಿದರು. ಈ ಸಭೆಯಲ್ಲಿ ಸಂಘದ ವಾರ್ಷಿಕ ಸಮಾವೇಶ ವಿದ್ಯಾರ್ಥಿ ವೇತನ ಹಾಗೂ ಸಂಘದ ನಿವೇಶನ ಖರೀದಿ ಹಾಗೂ ಸಂಪನ್ಮೂಲ ಕ್ರೂಡಿಕರಣ ಬಗ್ಗೆ ಮಾಹಿತಿನೀಡಲಾಯಿತು.
ಎಲ್ಲಾ ಯುವಕರು ಸಕಾರಾತ್ಮಕವಾಗಿ ಸ್ಪಂದಿಸಿದ ಸಭೆಯ ಯಶಸ್ವಿಗೆ ಕೈಜೋಡಿಸಿದರು.
ಯುವ ವಿಭಾಗದ ಗ್ರಾಮದ ಸಂಚಾಲಕರನ್ನು ಹಿರಿಯರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ,ಸಂಚಾಲಕರಾದ ಚಂದ್ರಹಾಸ್ ಶೆಟ್ಟಿ ನಾರಳ,ಕಾರ್ಯದರ್ಶಿ ಹರೀಶ್ ಶೆಟ್ಟಿ, ಕೃಷ್ಣಕಾಂತ್ ಸೇನವ, ಪ್ರಖ್ಯಾತ್ ಶೆಟ್ಟಿ, ಶ್ರವಣ್ ಶೆಟ್ಟಿ,ಗ್ರಾಮಗಳ ಹಿರಿಯರು,ಯುವಕರು, ಉಪಸ್ಥಿತರಿದ್ದರು