

ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಡುಪಿ ತಾಲೂಕಿನಿಂದ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಿನಕರ ಶೆಟ್ಟಿ ಹೆರ್ಗ, ಮಿಥುನ್ ಆರ್ ಹೆಗ್ಡೆ ಪಡುಬಿದ್ರೆ, ಪ್ರಸಾದ್ ಹೆಗ್ಡೆ ಮಾರಾಳಿ, ಕಿಶೋರ್ ಶೆಟ್ಟಿ ಎರ್ಮಾಳ್, ವೀರೇಂದ್ರ ಶೆಟ್ಟಿ ಪಂಜಿಮಾರ್ ಗುತ್ತು, ರವೀಂದ್ರ ಶೆಟ್ಟಿ ಪೆರ್ಡೂರು, ಜೈ ಕಿಶನ್ ಶೆಟ್ಟಿ ಬ್ರಹ್ಮಾವರ ಪ್ರಸಾದ್ ಹೆಗ್ಡೆ ಕುಕ್ಕೆಹಳ್ಳಿ, ಮಹಿಳಾ ಕ್ಷೇತ್ರದಿಂದ ಸಮಾಜಸೇವಕಿ ನಿರುಪಮಾ ಪ್ರಸಾದ್ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘ ಇದರ 2026 -29ನೇ ಅವಧಿಗೆ ಅಧ್ಯಕ್ಷರಾಗಿ ಈಗಾಗಲೇ ಕೆ ಅಜಿತ್ ಕುಮಾರ್ ರೈ ಮಾಲಾಡಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.



























































































































