ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ಜನವರಿ 24ರ ಬುಧವಾರದಂದು ಮೀರಾ ರೋಡ್ ಪೂರ್ವದ ಸೆಂಟ್ರಲ್ ಪಾರ್ಕ್ ಲಾನ್ ನಲ್ಲಿ ನಡೆಯಲಿರುವ ಬಂಟ ಕೂಟ -2026 ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಉದಯ ಎಂ ಶೆಟ್ಟಿ ಮಲಾರಬೀಡು, ರಂಗ ನಟ ಜಗದೀಶ ಶೆಟ್ಟಿ ಕೆಂಚನಕೆರೆ, ಪದಾಧಿಕಾರಿಗಳಾದ ದಿವಾಕರ ಶೆಟ್ಟಿ ಶಿರ್ಲಾಲ್, ಹರ್ಷ ಕುಮಾರ ಡಿ ಶೆಟ್ಟಿ ಪಾಂಗಾಳ, ಸಂತೋಷ್ ರೈ ಬೆಳ್ಳಿಪಾಡಿ, ಸತೀಶ್ ಶೆಟ್ಟಿ ಮುಂಡ್ಕೂರು, ಹರೀಶ್ ಶೆಟ್ಟಿ ಕಾಪು, ಸುಖವಾಣಿ ಡಿ ಶೆಟ್ಟಿ, ನವೀನಾ ಜೆ ಭಂಡಾರಿ, ಶರ್ಮಿಳಾ ಕೆ ಶೆಟ್ಟಿ, ಸುಮತಿ ಆರ್ ಶೆಟ್ಟಿ, ಪ್ರತಿಭಾ ಆರ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.



















































































































