ತುಳುವೆರೆ ಗೊಬ್ಬು ಎಂದರೆ ಅದು ನಮ್ಮ ತುಳುವರ ಸಂಸ್ಕ್ರತಿಯನ್ನು ಪ್ರಚಾರ ಪಡಿಸುವ ಕಾರ್ಯಕ್ರಮ. ಇದು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾಗಿ ಬೇಕು. ಮಕ್ಕಳಿಗೆ ಹಿಂದಿನ ಕಾಲದ ಆಟಗಳ ಬಗ್ಗೆ ತಿಳಿಸಿಕೊಡುವ ಕಾರ್ಯ ಆಗಬೇಕು. ಸಮಾಜದ ಒಳಿತಿಗಾಗಿ ನಾವು ತುಳುವರೆಲ್ಲರೂ ಕೂಡಿ ಬಾಳುವ ಮತ್ತು ಸಂಘಟನಾತ್ಮಕವಾಗಿ ಬೆಳೆಯುವ ದ್ಯೇಯ ನಮ್ಮದಾಗಿರಬೇಕು. ಸೋಲು ಗೆಲುವನ್ನು ಸಮಾನಾಂತರವಾಗಿ ಸ್ವೀಕರಿಸುವ ಮನೋಬಲ ಕೂಡಾ ನಮಲ್ಲಿರಬೇಕು. ಒಗ್ಗಟ್ಟಿಗೆ ಇಂತಹ ಕ್ರೀಡಾಕೂಟಗಳಿಂದ ಬಲ ಬರುತ್ತದೆ. ತುಳುಕೂಟದ ರಜತ ಮಹೋತ್ಸವದ ಕಾರ್ಯಕ್ರಮಗಳು ನಡೆಯುತ್ತಿದೆ. ನವೆಂಬರ್ 10ರಂದು ನಡೆಯುವ ಸಂಭ್ರಮಕ್ಕೆ ಶುಭ ಹಾರೈಸುತ್ತೇನೆ ಎಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ನುಡಿದರು.
ಅಕ್ಟೋಬರ್ 13ರಂದು ಮಹಾರಾಷ್ಟ್ರ ಮಂಡಲದ ಕಟಾರಿಯ ಕಾಲೇಜ್ ಮೈದಾನದಲ್ಲಿ ಪುಣೆ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರುರವರ ಅಧ್ಯಕ್ಷತೆಯಲ್ಲಿ, ಕ್ರೀಡಾ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆಯವರ ಆಯೋಜನೆಯಲ್ಲಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ನಡೆಯಿತು. ಗೌರವ ಅತಿಥಿಗಳಾಗಿ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಪುಣೆಯ ಖ್ಯಾತ ಕೈಗಾರಿಕೊಧ್ಯಮಿ ಸಮಾಜ ಸೇವಕ ಸದಾಶಿವ ಬಂಜನ್, ಪುಣೆ ಬಂಟರ ಸಂಘದ ಉಪಾಧ್ಯಕ್ಷರಾದ ವೈ ಚಂದ್ರಹಾಸ್ಶೆ ಟ್ಟಿಯವರು ಆಗಮಿಸಿ ದೀಪ ಬೆಳಗಿಸಿ, ಪಾರಿವಾಳ ಹಾರಿ ಬಿಡುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಕೋರಿದರು. ಅತಿಥಿಗಳು ಕ್ರೀಡಾಜ್ಯೋತಿ ಬೆಳಗಿಸಿದರು. ನಾರಾಯಣ ಹೆಗ್ಡೆ ಮತ್ತು ಕ್ರೀಡಾಳುಗಳು ಮೈದಾನಕ್ಕೆ ಸುತ್ತು ಬಂದು ಕ್ರೀಡಾ ಪ್ರತಿಜ್ಞೆಗೈದರು.
ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಮಾತನಾಡಿ, ನಾವೆಲ್ಲರೂ ತುಳುವರು. ನಮ್ಮ ಸಂಸ್ಕ್ರತಿ ಕಲೆ ಬೆಳೆಸುವಲ್ಲಿ 25 ವರ್ಷಗಳಿಂದ ಪುಣೆ ತುಳುಕೂಟ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ನಮ್ಮ ಕಲೆ ಸಂಸ್ಕ್ರತಿಯನ್ನು ಮಕ್ಕಳಿಗೆ ತಿಳಿಸುವ ಕಾರ್ಯ ತುಳುಕೂಟದ ಮುಖಾಂತರ ಅಗಲಿ. ಕ್ರೀಡೆಯಿಂದ ಸಾಧನೆ ಮಾಡಿದರೆ ಉದ್ಯೋಗ ಅವಕಾಶ ದೊರೆಯುತ್ತದೆ. ಯುವಕರು ಪ್ರಯತ್ನ ಮಾಡಬೇಕು. ತುಳುಕೂಟದ ರಜತ ಮಹೋತ್ಸವಕ್ಕೆ ಶುಭ ಹಾರೈಸುತ್ತೇನೆ ಎಂದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸೀತಾರಾಮ್ ಶೆಟ್ಟಿ, ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಡ್ತಲ, ಪಿಂಪ್ರಿ ಚಿಂಚ್ವಾಡ್ಬಂ ಟರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ ಆನಂದ್ ಶೆಟ್ಟಿ ಮಿಯ್ಯಾರ್, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಪ್ರಸನ್ನ ಶೆಟ್ಟಿಯವರು ಆಗಮಿಸಿದ್ದರು. ವೇದಿಕೆಯಲ್ಲಿ ಪಿಂಪ್ರಿ ಚಿಂಚ್ವಾಡ್ ಹೋಟೆಲ್ ಅಸೋಸಿಯೇಷನ್ ನ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಅಯ್ಯಪ್ಪ ಸ್ವಾಮೀ ಸೇವಾ ಸಂಘ ಕಾತ್ರಜ್ ನ ಅಧ್ಯಕ್ಷ ಸುಭಾಶ್ ಶೆಟ್ಟಿ, ಪುಣೆ ತುಳು ಕೂಟದ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಕ್ರೀಡಾ ಕಾರ್ಯಾಧ್ಯಕ್ಷ ನಾರಾಯಣ ಹೆಗ್ಡೆ, ಉಪಾಧ್ಯಕ್ಷರುಗಳಾದ ಮಾಧವ ಶೆಟ್ಟಿ, ಉದಯ್ ಶೆಟ್ಟಿ ಕಳತ್ತೂರು, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಉಪಾಧ್ಯಕ್ಷರುಗಳಾದ ಮಂಜುನಾಥ್ ಶೆಟ್ಟಿ, ವಿಶ್ವನಾಥ್ ಪೂಜಾರಿ, ಕೋಶಾಧಿಕಾರಿ ಮನೋಹರ್ ಶೆಟ್ಟಿ, ಪ್ರಕಾಶ್ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ, ಕ್ರೀಡಾ ಕಾರ್ಯಾಧ್ಯಕ್ಷೆ ರಂಜಿತಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಜಿತ್ ಶೆಟ್ಟಿ, ಶ್ರುತಿ ಜೆ ಶೆಟ್ಟಿಯವರು ಉಪಸ್ಥಿತರಿದ್ದರು.
ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿದರು. ಅತಿಥಿ ಗಣ್ಯರನ್ನು ಶಾಲು ಪುಷ್ಪಗುಚ್ಛ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರನ್ನು ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳನ್ನು ಪುಷ್ಪ ಗುಚ್ಛ ನೀಡಿ ಗೌರವಿಸಲಾಯಿತು. ಆಗಮಿಸಿದ ಗಣ್ಯರು ಶುಭ ಹಾರೈಸಿದರು. ಪದ್ಮನಾಭ ಶೆಟ್ಟಿ, ಸುಭಾಶ್ ಶೆಟ್ಟಿ, ಪ್ರಸನ್ನ ಶೆಟ್ಟಿಯವರು ಸಾಂದರ್ಭಿಕವಾಗಿ ಮಾತನಾಡಿದರು. ಮಕ್ಕಳು, ಮಹಿಳೆಯರು, ಪುರುಷರಿಗೆ ವಿವಿಧ ವಯೋಮಿತಿಗನುಗುಣವಾಗಿ ಕ್ರೀಡಾ ಕೂಟ ಸ್ಪರ್ದೆಗಳು ನಡೆದವು. ಅಲ್ಲದೇ ರಜತ ಮಹೋತ್ಸವದ ಸವಿ ನೆನಪಿಗಾಗಿ ನಮ್ಮ ತುಳುನಾಡ ಹಿಂದಿನ ಕಾಲದ ಹಳ್ಳಿ ಆಟೋಟ ಸ್ಪರ್ದೆಗಳು ಕೂಡಾ ನಡೆದವು. ವಿಶೇಷ ಆಕರ್ಷಣೆಯಾಗಿ ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟದ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅತಿಥಿಗಳು ಪ್ರಶಸ್ತಿ ವಿತರಿಸಿದರು. ಪುಣೆ ತುಳುಕೂಟ, ರಜತ ಮಹೋತ್ಸವ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಎಲ್ಲಾ ಸಮಿತಿಗಳು ಮತ್ತು ಸರ್ವ ಪಧಾದಿಕಾರಿಗಳ ಸಹಕಾರದೊಂದಿಗೆ ಕ್ರೀಡಾಕೂಟವು ಯಶಸ್ವಿಯಾಗಿ ಜರಗಿತು. ಕ್ರೀಡಾ ವಿಕ್ಷಕ ವಿವರಣೆಯನ್ನು ಪ್ರಿಯಾ ದೇವಾಡಿಗ ಮತ್ತು ಸಂತೋಷ್ ಶೆಟ್ಟಿ ಎಣ್ಣೆಹೊಳೆ ನಿರ್ವಹಿಸಿದರು. ರೋಹಿತ್ ಶೆಟ್ಟಿ ನಗ್ರಿಗುತ್ತು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದಿರೆ