Author: admin
ಇಂದಿನ ಯಾಂತ್ರೀಕೃತ ಜೀವನ ಶೈಲಿಯಲ್ಲಿ ಆರೋಗ್ಯವಂತರಾಗಿ ಉತ್ಸಾಹದಿಂದಿರಲು ದೇಹಕ್ಕೆ ವ್ಯಾಯಾಮ ಅತೀ ಅಗತ್ಯವಾಗಿದೆ. ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಿದ್ದು ದಿನನಿತ್ಯ ನಾವು ಸ್ವಲ್ಪ ಸಮಯವನ್ನು ವ್ಯಾಯಾಮಕ್ಕೆ ನೀಡಬೇಕು . ಹಿಂದೆ ಒಂದು ಕಾಲವಿತ್ತು ಕೇವಲ ಅಂಕ ಗಳಿಕೆಯೇ ನೌಕರಿಯ ಮಾನದಂಡವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾದರೆ ಬ್ಯಾಂಕಿಂಗ್, ರೈಲ್ವೇ, ಪೊಲೀಸ್ ಇಲಾಖೆಗಳು ನೌಕರಿ ನೀಡಲು ಕೈಬೀಸಿ ಕರೆಯುತ್ತವೆ. ಆದುದರಿಂದ ಮಕ್ಕಳು ಕಲಿಕೆಯೊಂದಿಗೆ ಕ್ರೀಡೆಗೂ ಆದ್ಯತೆ ನೀಡಿ ಆಸಕ್ತಿಯನ್ನು ಬೆಳೆಸಿಕೊಂಡು ಶ್ರಮ ಪಟ್ಟರೆ ವಿಪುಲ ಅವಕಾಶಗಳನ್ನು ಬಳಸಿಕೊಂಡು ಜೀವನವನ್ನು ಸಮೃದ್ಧಗೊಳಿಸಬಹುದಾಗಿದೆ ಎಂದು ಪಿಂಪ್ರಿ- ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆ ಅಭಿಪ್ರಾಯಪಟ್ಟರು. ಅವರು ನಗರದ ಮೋರ್ಯಾ ಗೋಸಾವಿ ಮೈದಾನದಲ್ಲಿ ನಡೆದ ಬಂಟರ ಸಂಘ ಪಿಂಪ್ರಿ – ಚಿಂಚ್ವಾಡ್ ಇದರ ವಾರ್ಷಿಕ ಕ್ರೀಡಾಕೂಟ ಹಾಗೂ ರಾಷ್ಟ್ರಮಟ್ಟದ ಕಬಡ್ಡಿ ಮತ್ತು ತ್ರೋ ಬಾಲ್ ಪಂದ್ಯಾಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಬಡ್ಡಿಯಂತಹ ಗ್ರಾಮೀಣ ಕ್ರೀಡೆ ಇಂದು ದೇಶ ,ಅಂತಾರಾಷ್ಟ್ರೀಯ…
ವಿದ್ಯಾಗಿರಿ ಯಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ಮುಗಿದ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ತ್ಯಾಜ್ಯ ವಿಲೇವಾರಿಯಲ್ಲೂ ಯಶಸ್ಸು ಕಂಡಿದೆ.ನೂರು ಎಕ್ರೆ ಜಾಗದಲ್ಲಿ ವಿವಿಧ ಮೇಳಗಳು, ವೇದಿಕೆಗಳು, ಸ್ಟಾಲುಗಳು, ಪ್ರದರ್ಶನಾಂಗಣಗಳು, ಕಾರ್ಯಾಗಾರದ ತಾಣಗಳು, ಅರಣ್ಯಲೋಕ ಎಂದು ಮುಂತಾದ ಹಲವು ಆಕರ್ಷಣೆಗಳನ್ನು ಹೊಂದಿ ಒಂದೂವರೆ ಲಕ್ಷ ಮಂದಿಯ ಓಡಾಟ, ಊಟೋಪಚಾರ ಜನಮನ ಸೆಳೆದಿದೆ. ಸಂಘಟಕರಿಗೆ ಸುಸ್ತಾದರೂ ಸಂತಸವಿದೆ, ಸಂತೃಪ್ತಿ ಇದೆ. ಈ ಎಲ್ಲ ಸಾರ್ಥಕತೆಯ ಒಳಗೊಳಗೇ ಎಂಟು ದಿನಗಳಲ್ಲಿ ಸಹಜವಾಗಿ ತಲೆಶೂಲೆಯಾಗಲಿದ್ದ ತ್ಯಾಜ್ಯ ವಿಲೇವಾರಿ ಅತ್ಯಂತ ಸಮರ್ಪಕವಾಗಿ ನಡೆದಿರುವುದನ್ನು ಗಮನಿಸಬೇಕಾಗಿದೆ. ಸುಮಾರು 60,000 ಪ್ರಶಿಕ್ಷಣಾರ್ಥಿಗಳು, ಶಿಕ್ಷಕರಿದ್ದ 21 ಹಾಸ್ಟೆಲ್‌ಗಳ ಎಂದಿನ ಸಿಬಂದಿಗಳ ಸಹಿತ ಒಟ್ಟು 900 ಮಂದಿ ಸ್ವಚ್ಛತ ಕಾರ್ಮಿಕರು ಕೆಲಸ ಮಾಡಿದ್ದಾರೆ. 6 ಟ್ರಾಕ್ಟರ್‌ಗಳು ನಿರಂತರವಾಗಿ ಓಡಾಟ ನಡೆಸಿವೆ. ಹಸಿಕಸ, ಒಣಕಸ, ನಿರುಪಯುಕ್ತ ಕಸ ಎಂದು ಅಲ್ಲಲ್ಲಿಯೇ ತ್ಯಾಜ್ಯ ವಿಂಗಡಿಸುವ ಒಟ್ಟು 60 ಘಟಕಗಳನ್ನು, 50 ಡ್ರಮ್‌ಗಳನ್ನು ಸ್ಥಾಪಿಸಲಾಗಿತ್ತು. ಹಸಿಕಸದ ಚೀಲಕ್ಕೆ ಹಸುರು, ಒಣಕಸಕ್ಕೆ ನೀಲಿ ಮತ್ತು ನಿರುಪಯುಕ್ತ ತ್ಯಾಜ್ಯವಸ್ತುಗಳಿಗೆ ಕೆಂಪು…
ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಗೆ ಪ್ರತಿಷ್ಠಿತ ಗೌರವ ಪುರಸ್ಕಾರ ಅವಾರ್ಡ್ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರಿಗೆ ಖಾನ್ ಎಜ್ಯುಕೇಶನ್ ಫೌಂಡೇಶನ್ ವತಿಯಿಂದ ಪ್ರತಿಷ್ಠಿತ ಗೌರವ ಪುರಸ್ಕಾರ ಪ್ರಶಸ್ತಿ 2021-22 ಲಭಿಸಿದೆ. ಖಾನ್ ಎಜ್ಯುಕೇಶನ್ ಫೌಂಡೇಶನ್‌ನ ವಾರ್ಷಿಕ ಪ್ರಶಸ್ತಿಗಳಲ್ಲಿ 2021-22ಸಾಲಿನ ಪ್ರತಿಷ್ಠಿತ ಗೌರವ ಪುರಸ್ಕಾರ ಅವಾರ್ಡನ್ನು ಖ್ಯಾತ ಸಮಾಜಸೇವಕ, ಕೋವಿಡ್ ವಾರಿಯರ್ ಡಾ. ಸುಧಾಕರ್ ಶೆಟ್ಟಿಯವರಿಗೆ ಮೌಲನಾ ಅಬ್ದುಲ್ ಕಲಾಂ ಅಜಾದ್ ಮೆಮೋರಿಯಲ್ ಹಾಲ್, ಪುಣೆ ಮುನ್ಸಿಪಾಲ್ ಕಾರ್ಪೊರೇಷನ್‌ನಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಪುಣೆಯ ಬೇಬಿ ಫ್ರೆಂಡ್ಸ್ ಮಕ್ಕಳ ಆಸ್ಪತ್ರೆಯ ಮಾಲಕರಾಗಿರುವ ಡಾ. ಸುಧಾಕರ ಶೆಟ್ಟಿಯವರು ಕಟೀಲ್‌ನಲ್ಲಿ ಸಂಚಾರಿ ಮಕ್ಕಳ ಕ್ಲಿನಿಕ್ ಅನ್ನು ಆರಂಭಿಸುವ ಯೋಜನೆ ಹೊಂದಿದ್ದು, ಪುಣೆಯಲ್ಲಿ ಪೊಲೀಸ್ ಆಸ್ಪತ್ರೆ, ಎಸ್‌ಆರ್‌ಪಿಎಫ್ ಹಾಸ್ಪಿಟಲ್, ಆರ್ಮಿಯಿಂದ ನಡೆಸಲ್ಪಡುವ ಕಂಟೋನ್ಮೆಂಟ್ ಆಸ್ಪತ್ರೆಗಳಲ್ಲಿ ಕೂಡಾ ಗೌರವ ತಜ್ಞರಾಗಿ ಕರ್ತವ್ಯ ನಿರತರಾಗಿದ್ದಾರೆ. ಸತತ 3 ವರ್ಷಗಳ ಕಾಲ 10 ಸಾವಿರಕ್ಕೂ ಮಿಕ್ಕಿ ಕೋವಿಡ್ ರೋಗಿಗಗಳಿಗೆ ಡಾ. ಸುಧಾಕರ…
ಬೆಂಗಳೂರು ಬಂಟರ ಸಂಘವು ನಮ್ಮ ಸಮಾಜದ ಬಡ ಕುಟುಂಬಗಳ ವಧು-ವರರಿಗೆ ಉಚಿತ ಕಂಕಣ ಭಾಗ್ಯ (ಸಾಮೂಹಿಕ ವಿವಾಹ) ಯೋಜನೆಯನ್ನು ಬೆಂಗಳೂರು ಬಂಟರ ಸಂಘದಲ್ಲಿ ಹಮ್ಮಿಕೊಂಡಿದ್ದಾರೆ. ಈ ಸೌಕರ್ಯದ ಸದುಪಯೋಗ ಪಡೆಯಲು ಇಚ್ಚಿಸುವವರು ತಮ್ಮ ಹೆಸರುಗಳನ್ನು ಕೂಡಲೇ ಬೆಂಗಳೂರು ಬಂಟರ ಸಂಘದಲ್ಲಿ ನೋಂದಾಯಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ. ಈ ಮದುವೆಗೆ ಬೆಂಗಳೂರು ಬಂಟರ ಸಂಘದ ಕಡೆಯಿಂದ ಒಂದು ವಧು-ವರರ ಜೋಡಿಗೆ 8+8 (16) ಜನರಿಗೆ ಬೆಂಗಳೂರಿಗೆ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಕೂಡ ಒದಗಿಸಿಕೊಡಲಿದ್ದಾರೆ. ವಧುವಿಗೆ ಕರಿಮಣಿ, ಸೀರೆ, ವಧುವಿನ ಅಲಂಕಾರ ಮತ್ತು ವರನಿಗೆ ಮದುವೆಯ ಉಡುಗೆಯನ್ನು ಕೂಡಾ ಕೊಡಲಿದ್ದಾರೆ. ವಧು-ವರರಿಗೆ ಮತ್ತು ಅವರ ಸಂಬಂಧಿಕರಿಗೆ ಊಟ, ಉಳಿದುಕೊಳ್ಳಲು ವ್ಯವಸ್ಥೆಯನ್ನೂ ಮಾಡಿ, ಪೂಜೆ, ಮಂಟಪ, ಛತ್ರ , ಹೂವಿನ ಅಲಂಕಾರ, ವಾದ್ಯ ಮತ್ತು ಮದುವೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಿ ಬಂಟರ ಪದ್ಧತಿಯಂತೆ ಅದ್ದೂರಿಯಾಗಿ ಬೆಂಗಳೂರು ಬಂಟರ ಸಂಘದಲ್ಲಿ ವಿವಾಹ ವೇದಿಕೆಯ ವತಿಯಿಂದ ಮದುವೆ ಮಾಡಿಕೊಡಲಾಗುವುದು ಎಂದು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ…
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಂ ಶ್ರೀ ದತ್ತಾಂಜನೆಯ ಕ್ಷೇತ್ರ ದಕ್ಷಿಣ ಗಾಣಗಾಪುರದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಸಂಕಲ್ಪದಂತೆ ತಾಯ್ನಾಡಿನ ಭಾಷೆ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳಿಗೆ ಮಹತ್ವ ನೀಡುತ್ತಿರುವುದಲ್ಲದೆ ಸಮಾಜಮುಖಿ ಸೇವಾ ಚಿಂತನೆಯೊಂದಿಗೆ ಸೇವೆ ಮಾಡುತ್ತಿದೆ ಎಂದು ಪುಣೆ ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಹೇಳಿದರು. ಸ್ವರ್ಗೇಟ್‍ನ ಚಂದನ್ ಹೊಟೇಲ್‍ನ ಸಭಾಗೃಹದಲ್ಲಿ ನಡೆದ ಪುಣೆ ಶ್ರೀ ಗುರುದೇವಾ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ 19ನೇ ವಾರ್ಷಿಕೋತ್ಸವದ ಪೂರ್ವ ತಯಾರಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆಯೊಂದಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಸ್ವಾಮೀಜಿಯವರಿಂದ ಸ್ಥಾಪನೆಗೊಂಡ ಸಂಸ್ಥೆ ಗುರುದೇವಾ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಸುಮಾರು 22 ವರ್ಷಗಳಿಂದ ಮಹತ್ತರವಾದ ಕೆಲಸಗಳನ್ನು ಮಾಡುತ್ತಿದ್ದು ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ…
ಸಹಕಾರ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ರಾಜ್ಯ ಸಹಕಾರ ಮಂಡಳ ನೀಡುವ ಸಹಕಾರ ರತ್ನ ಪ್ರಶಸ್ತಿಗೆ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ ಅಧ್ಯಕ್ಷ ರವಿರಾಜ ಹೆಗ್ಡೆಯವರು ಆಯ್ಕೆಯಾಗಿದ್ದಾರೆ. ಸೀತಾರಾಮ ರೈ ಅವರು ಸ್ಥಾಪಿಸಿದ ಆದರ್ಶ ವಿವಿದೋದ್ಧೇಶ ಸಹಕಾರಿ ಸಂಘವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಶಾಖೆಗಳನ್ನು ಹೊಂದಿ ಮುನ್ನಡೆಯುತ್ತಿದೆ. ಇವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮುಂಬಯಿಯಲ್ಲಿ ನೆಲೆಸಿ ಡೊಂಬಿವಲಿ ಬಂಟರ ಸಂಘದಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಓರ್ವ ಉತ್ತಮ ಸಂಘಟಕಿಯಾಗಿ, ಸಮಾಜಸೇವೆ ಮಾಡುತ್ತಿರುವ ಸದಾ ಹಸನ್ಮುಖಿ, ಮುಗ್ದ ಮನಸ್ಸಿನ ಶ್ರೀಮತಿ ಉದಯಾ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಮೀರಾ ಭಾಯಂದರ್ ಅವಳಿ ನಗರ ಮಹಾರಾಷ್ಟ್ರದಲ್ಲೊಂದು ಪುಟ್ಟ ಮಂಗಳೂರು ಎಂದೂ, ಥಾಣೆ ಜಿಲ್ಲೆಯ ಸಾಂಸ್ಕೃತಿಕ ನಗರವೆಂದೂ ಪ್ರಸಿದ್ಧಿ ಪಡೆದಿದೆ. ಇಲ್ಲಿ ನಮ್ಮೂರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯ ಹೂಡಿದ್ದು, ಸಂಬಂಧಿಸಿದ ಸಂಘ ಸಂಸ್ಥೆಗಳ ಸಂಖ್ಯೆಯೂ ಇನ್ನೂರು ಮೀರುತ್ತಿದೆ. ನಮ್ಮ ಸಮುದಾಯದ ಹೆಚ್ಚಿನ ಸಂಘಟಕರು, ಸಮಾಜ ಸೇವಕರು, ರಾಜಕೀಯ ನಾಯಕರು, ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರದ ಮುಂದಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಹಾಗೂ ಸಾಕಷ್ಟು ಪ್ರಭಾವಿಗಳೂ ಇರುವುದರಿಂದ ಇಲ್ಲಿ ನಾಯಕತ್ವಕ್ಕೆ ಸ್ಫರ್ಧಿಗಳೂ ಹೆಚ್ಚು. ಒಂದಕ್ಕಿಂತ ಹೆಚ್ಚು ಸಮಾನ ಯೋಗ್ಯತೆ ಇರುವ ಈ ಪ್ರದೇಶದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಕೇಂದ್ರ ಸಮಿತಿಯ ಮುಖ್ಯಸ್ಥರು ಹಾಗೂ ಸ್ಥಾನೀಯ ಮುಖ್ಯಸ್ಥರೊಂದಿಗೆ ಸೌಹಾರ್ದದ ಸಮಾಲೋಚನೆ ನಡೆಸಿ ನಾಯಕತ್ವದ ಆಯ್ಕೆಯಾಗುತ್ತದೆ. ಹಾಗೆ ತುಸು ವಿಳಂಬವಾದರೂ ಕೊನೆಗೂ ಸಮಿತಿಗೆ ಸಮರ್ಥ ನಾಯಕತ್ವದ ಆಯ್ಕೆಯಾಗಿದೆ. ಬಂಟರ ಸಂಘ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಈ ಸಾಲಿನ ಮೂರು ವರ್ಷಗಳ ಅವಧಿಗೆ ಗುತ್ತಿನಾರ್ ರವೀಂದ್ರ ಶೆಟ್ಟಿ ಬಳ್ಕುಂಜೆ ಗುತ್ತು ಅವರು ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯದ ಉಡುಪಿ…
ಅಗೋಳಿ ಮಂಜಣ್ಣ ತುಳುನಾಡಿನ ಭೀಮನೆಂದು ಪ್ರಸಿದ್ಧನಾದ ಐತಿಹಾಸಿಕ ಪುರುಷ. ಅಪ್ರತಿಮ ಶಕ್ತಿ ಸಾಹಸಗಳಿಗೆ ಹೆಸರಾದ ವ್ಯಕ್ತಿ. ಅದ್ಭುತ ಜೀರ್ಣಶಕ್ತಿಯುಳ್ಳ ತಿನಿಸಿಗ. ‘ಅಗೋಳಿ’ ಎಂಬ ತುಳು ಶಬ್ದಕ್ಕೆ ಅರ್ಥ ಗುಡಾಣ, ಹಂಡೆ ಅಥವಾ ಅಂತಹದೇ ಭಾರಿ ಗಾತ್ರದ ಪಾತ್ರೆ ಎಂದು. ಆ ಪಾತ್ರೆಯಲ್ಲಿ ಊಟ ಮಾಡುವವನು ಅಗೋಳಿ ಮಂಜಣ್ಣ. ಮಂಗಳೂರು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದಲ್ಲಿ ಅಗೋಳಿ ಮಂಜಣ್ಣನ ಕಥಾನಕವನ್ನು ತುಳು-ಕಬಿತೆ ರೂಪದಲ್ಲಿ ಅಪರೂಪಕ್ಕೊಮ್ಮೆ ಪ್ರಸಾರಮಾಡುತ್ತಾರೆ. ಅದರಲ್ಲಿ ಮಂಜಣ್ಣನ ಅಪೆಟೈಟ್ ಹೇಗಿತ್ತು ಎಂಬ ವರ್ಣನೆಯ ಸಾಲುಗಳನ್ನು ನೋಡಿ: ಬಜಿಲ್ ಒಂಜಿ ಕಳಾಸೆ ಆಂಡಾಲಾ ಒರೊರೊ ಅರಾ ಅರಾ ಆಪುಂಡ್ ಗೋಂಟ್ ತಾರಾಯಿ ಇರ್ವತ್ತೈನ್‌ಲಾ ಬಾಯಿಡೆ ಗಾಣ ಪಾಡುಂಡ್… ಅವಲಕ್ಕಿ ಒಂದು ಕಳಸಿಗೆಯಷ್ಟಿದ್ದರೂ (1 ಕಳಸಿಗೆ ಅಂದರೆ 14 ಸೇರು; 3 ಕಳಸಿಗೆ ಅಂದರೆ 1 ಮುಡಿ) ಕೆಲವೊಮ್ಮೆ ಕಡಿಮೆಯೇ ಆಗುತ್ತದೆ. ಒಣತೆಂಗಿನಕಾಯಿ ಇಪ್ಪತ್ತೈದು ಇದ್ದರೂ ಬಾಯಿಯಲ್ಲೇ ಗಾಣಹಾಕುತ್ತಾನೆ. ಸುಮಾರು ನಾಲ್ಕೈದು ತಲೆಮಾರುಗಳ ಹಿಂದೆ ಮಂಗಳೂರಿನ (ತುಳುವಿನಲ್ಲಿ ‘ಕುಡ್ಲ’ ಎನ್ನುವುದು) ಹತ್ತಿರದ ತೊರ್ತಲ್ತ್ ಎಂಬ ಹೆಸರಿನ…
ಯಕ್ಷಧ್ರುವ ಪಟ್ಲ ಪೌಂಡೇಶನ್ ವತಿಯಿಂದ ತೋಕೂರು ರಾಮಣ್ಣ ಶೆಟ್ಟಿ ಮೆಮೋರಿಯಲ್ ಶಾಲೆಯಲ್ಲಿ ನಡೆದ ಯಕ್ಷದ್ರುವ ಯಕ್ಷ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಈ ಸಂದರ್ಭ ಶಾಲೆಯ ಪ್ರಾಂಶುಪಾಲರನ್ನು ಪಟ್ಲ ಫೌಂಡೇಶನ್ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯಕ್ಷದ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ವಾಸುದೇವ ಐತಾಳ್, ಮೀನಾಕ್ಷಿ ಐತಾಳ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಶಾಲಾ ಪ್ರಾಂಶುಪಾಲೆ ಶ್ರೀ ಲತಾ ರಾವ್, ಸತೀಶ್ ಶೆಟ್ಟಿ ಎಕ್ಕಾರು, ಉಪಸ್ಥಿತರಿದ್ದರು. ಅಜಿತ್ ಕೆರೆಕಾಡು ಸ್ವಾಗತಿಸಿ ಶಿಕ್ಷಕಿ ವಾಣಿ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಸುರೇಖ ನಿರೂಪಿಸಿದರು.