ಕರಿಮಣಿ ಕರಿಮಣಿ ಕಪ್ಪು ಮಣಿ
ದಾಂಪತ್ಯ ಜೀವನದ ದಿವ್ಯಮಣಿ
ಹಿರಿಯರು ನಡೆಸಿ ಬಂದ ಸತ್ಯಮಣಿ
ಸ್ತ್ರೀಯರ ಕೊರಳಿನ ಭಾಗ್ಯಮಣಿ!!
ಮಾಂಗಲ್ಯವೇ ಸ್ತ್ರೀಯರ ಗರಿಮೆ
ಪತಿಯೇ ಅವಳ ಹಿರಿಮೆ
ಸ್ತ್ರೀಯೇ ಮನೆಮನೆಯ ಹೆಮ್ಮೆ
ಅವಳೇ ಸುಖದುಃಖದ ಸಂಗಮೆ!!
ಮಂಗಳಸೂತ್ರ ಆದರ್ಶದ ಸಾರ
ಅದಾಗಿರಬಾರದು ಬರೇ ಬಂಗಾರ
ಸ್ತ್ರೀಯರ ಮನಸಿನ ಸುವಿಚಾರ
ಇದರಿಂದಾಗುವುದು ಬಹಳ ಉಪಕಾರ!!
ಹಿಂದಿನದು ಇಂದಿನದು ನಿಜವಲ್ಲ
ಡಿಸೈನ್ ಫ್ಯಾಶನ್ ಗಳು ಸ್ಥಿರವಲ್ಲ
ಜೀವನವು ಕೇವಲ ಭೋಗವಲ್ಲ
ಸರಳತೆಗೆ ಸರಿಸಾಟಿ ಇನ್ನೊಂದಿಲ್ಲ!!
-ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ
Previous Articleಉಡುಪಿ ಗ್ರಾಮೀಣ ಬಂಟರ ಸಂಘದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ