ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿ ಅವರ ಬೇಬಿ ಫ್ರೆಂಡ್ ಕ್ಲಿನಿಕ್ ಮತ್ತು ಬಂಟ್ಸ್ ಅಸೋಸಿಯೇಷನ್ ಪುಣೆ ಸಂಯುಕ್ತ ಆಯೋಜನೆಯಲ್ಲಿ ಉಚಿತ ಕಟೀಲ್ ಬೇಬಿ ಫ್ರೆಂಡ್ ಚೈಲ್ಡ್ ಹೆಲ್ತ್ ಕಾರ್ಡ್ ಬಿಡುಗಡೆ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವು ಏಪ್ರಿಲ್ 2 ರಂದು ಬೆಳಿಗ್ಗೆ 10 ರಿಂದ ಅಪರಾಹ್ನ 1ರ ವರೆಗೆ ಪುಣೆಯ ಕ್ಯಾಂಪ್ ಎಂ. ಜಿ. ರೋಡ್ ನಲ್ಲಿರುವ ಡಾ. ಸುಧಾಕರ್ ಶೆಟ್ಟಿಯವರ ಬೇಬಿ ಫ್ರೆಂಡ್ ಕ್ಲಿನಿಕ್ ನ ಆವರಣದಲ್ಲಿ ನಡಯಲಿದೆ.
ಬಂಟ್ಸ್ ಅಸೋಸಿಯೇಷನ್ ಪುಣೆ ಅಧ್ಯಕ್ಷ ಗಣೇಶ್ ಹೆಗ್ಡೆ ಪುಂಚೂರು ಮತ್ತು ಸಂಘದ ವೈದ್ಯಕೀಯ ವಿಭಾಗದ ಕಾರ್ಯಧ್ಯಕ್ಷರು ಬೇಬಿ ಫ್ರೆಂಡ್ ಕ್ಲಿನಿಕ್ ನ ಮೂಲಕ ಡಾ. ಸುಧಾಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಪುಣೆಯ ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ಕಾರ್ಖಾನೆ, ಕಚೇರಿಗಳು ಮತ್ತು ಗೃಹ ಸೇವಕಿಯರು, ಚಾಲಕರು ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬಂದಿಯ ಮಕ್ಕಳ ಅನುಕೂಲಕ್ಕಾಗಿ ಪುಣೆ ನಗರದಲ್ಲಿ ಉಚಿತ ಕಟೀಲ್ ಬೇಬಿ ಫ್ರೆಂಡ್ ಚೈಲ್ಡ್ ಹೆಲ್ತ್ ಕಾರ್ಡ್ ಅನ್ನು ಪ್ರಾರಂಭಿಸಲಾಗಿದೆ.
ಉಚಿತ ಕಾರ್ಡ್ ನಲ್ಲಿ ಇರುವ ವಿವಿಧ ಸೌಲಭ್ಯಗಳು :
ಸಿಬ್ಬಂದಿಯ ಮಕ್ಕಳಿಗೆ ಅಂದರೆ ಜನನದಿಂದ 12 ವರ್ಷದವರೆಗೆ ಉಚಿತ ತಪಾಸಣೆ ಮತ್ತು ಇನ್ನಿತರ ವೈದ್ಯಕೀಯ ಸವಲತ್ತುಗಳನ್ನು ನೀಡುವ ವಿಶೇಷತೆಯನ್ನು ಈ ಕಾರ್ಡ್ ಹೊಂದಿದೆ. ಪುಣೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮೇಲ್ಕಾಣಿಸಿದ ಸಂಸ್ಥೆಗಳ ಸಿಬ್ಬಂದಿಯ ಮಕ್ಕಳಿಗೆ ಸಿಗುವ ಸೌಲಭ್ಯಗಳಲ್ಲಿ ವೈದ್ಯರೊಂದಿಗೆ ಉಚಿತ ಸಮಾಲೋಚನೆ, ಸರಕಾರ ಅನುಮೋದಿತ ಉಚಿತ ಲಸಿಕೆ, ಕಡಿಮೆ ದರದಲ್ಲಿ ಮಕ್ಕಳ ಎಲ್ಲಾ ಹೊಸ ಲಸಿಕೆಗಳ ವಿತರಣೆ, ಮಕ್ಕಳ ಸಹಾಯವಾಣಿ, ವಿಶೇಷ ಅಗತ್ಯಗಳು ಮತ್ತು ಹಿಂದುಳಿದಿರುವ ಮಕ್ಕಳಿಗಾಗಿ ಉಚಿತ ಮಾರ್ಗದರ್ಶನ ನೀಡಲಾಗುವುದು. ಈ ಹೆಲ್ತ್ ಕಾರ್ಡ್ 3 ವರ್ಷಗಳ ಕಾಲ ಮಾನ್ಯತೆ ಹೊಂದಿರಲಿದೆ.
ತುಳು – ಕನ್ನಡಿಗರಿಗೆ ಮೊದಲ ಆದ್ಯತೆ :
ವಿಶೇಷವಾಗಿ ತುಳು – ಕನ್ನಡಿಗ ಮಕ್ಕಳಿಗೆ ಮೊದಲ ಆದ್ಯತೆ ನೀಡುವ ಉದ್ದೇಶ ಹೊಂದಲಾಗಿದೆ. ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಹೆಗ್ಡೆ ಪುಂಚೂರು, ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಯು. ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ನ್ಯಾಯವಾದಿ ರೋಹನ್ ಶೆಟ್ಟಿ ಎಲ್ಲಾ ಕಾರ್ಯಕಾರಿ ಸಮಿತಿಗಳ ಪದಾಧಿಕಾರಿಗಳು ಹಾಗೂ ಪುಣೆಯ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಸಮಾಜ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬೇಬಿ ಫ್ರೆಂಡ್ ಕ್ಲಿನಿಕ್ (020-26131565) ಅನ್ನು ಸಂಪರ್ಕಿಸಬಹುದು. ಪುಣೆಯಲ್ಲಿ ನೆಲೆಸಿರುವ ತುಳು – ಕನ್ನಡಿಗ ಕಾರ್ಮಿಕರು ಮತ್ತು ಇತರ ಭಾಷಿಕರು ಕೂಡ ತಮ್ಮ ಮಕ್ಕಳಿಗಾಗಿ ಇದರ ಪ್ರಯೋಜನ ಪಡೆಯಬೇಕೆಂದು ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷ ಗಣೇಶ್ ಹೆಗ್ಡೆ ಮತ್ತು ಡಾ. ಸುಧಾಕರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.