ಜೈನ್ ಟ್ಯೂಬ್ಸ್ ಉದ್ದಿಮೆ ಕರಾವಳಿಯಲ್ಲಿ ಉತ್ತಮ ವ್ಯವಹಾರ ನಡೆಸಿ ಅಭಿವೃದ್ಧಿ ಹೊಂದಲಿ ಎಂದು ಸಿಎ ನಿತಿನ್ ಶೆಟ್ಟಿ ಹಾರೈಸಿದರು. ಅವರು ಮಾ.30 ರಂದು ಪಡುಬಿದ್ರಿ ಹೆಜಮಾಡಿ ಭಾಗದಲ್ಲಿ ನೂತನವಾಗಿ ಆರಂಭವಾಗಿರುವ ಜೈನ್ ಟ್ಯೂಬ್ಸ್ ಉದ್ದಿಮೆಯ ಮೊದಲನೇ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಜೈನ್ ಗ್ರೂಪ್ ಆಫ್ ಕಂಪನೀಸ್ ನ ಸಂಸ್ಥಾಪಕ ಮಹೇಂದ್ರ ಕುಮಾರ್ ಜೈನ್ ಮಾತನಾಡಿ, ಎಲ್ಲರ ಮಾರ್ಗದರ್ಶನ, ದೂರದರ್ಶಿತ್ವ, ಸಲಹೆ ಹಾಗೂ ವಿಚಾರಗಳಿಂದಲೇ ನಾವು ಬೆಳೆದಿದ್ದೇವೆ. ನಿಮ್ಮೆಲ್ಲರ ಸಹಕಾರ ಜೈನ್ ಗ್ರೂಪ್ ನೊಂದಿಗಿರಲಿ ಎಂದರು. ಜೈ ಹಿಂದ್ ಗ್ರೂಪ್ ನ ಚೇರ್ಮನ್ ಹಾಗೂ ಆಡಳಿತ ನಿರ್ದೇಶಕ ದಿವ್ಯ ಕುಮಾರ್ ಜೈನ್ ಮಾತನಾಡಿ, ಯಾವುದೇ ಉತ್ಪಾದನ ಘಟಕ ಸ್ಥಾಪನೆಗೆ ಉಡುಪಿ ಜಿಲ್ಲೆಯ ಜನರ ಮನೋಭಾವನೆ ಮತ್ತು ಜೈವಿಕ ಪರಿಸರ ವ್ಯವಸ್ಥೆ ಪೂರಕವಾಗಿವೆ. ಭಾರತ ವಿಶ್ವದ ಅಗ್ರಮಾನ್ಯ ಉತ್ಪಾದನ ಹಬ್ ಎನಿಸಲಿದೆ. ಜೈ ಹಿಂದ್ ಗ್ರೂಪ್ ಕೂಡ ನಿಮ್ಮೆಲ್ಲರ ಸಹಕಾರದೊಂದಿಗೆ ಅಗ್ರಪಂಕ್ತಿಯಲ್ಲಿ ಮುಂದುವರಿಯಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಆಸ್ಪೆನ್ ಇನ್ಫ್ರಾ ಎಸ್ಇಝೆಡ್ ನ ಹಿರಿಯ ಮಹಾ ಪ್ರಭಂಧಕ ಅಶೋಕ್ ಕುಮಾರ್ ಶೆಟ್ಟಿ, ಜೈನ್ ಗ್ರೂಪ್ ನ ಎಂಜಿನಿಯರ್ ಜೋಸೆಫ್ ಮಾಥ್ಯ, ಡೀಲರ್ ಗಳಾದ ಷಾಜಿ ಹಾಗೂ ಜೀತೇಶ್ ಮಾತನಾಡಿದರು. ‘ಬಾಲಣ್ಣ’ ಪ್ರಸಾದ್ ಕುಮಾರ್ ಶೆಟ್ಟಿ ದಿನೇಶ್ ಜೈನ್, ಮೋಹನ್ ಲಾಲ್ ಜೈನ್ ಇದ್ದರು.
ನಟಿ ಜೇಸಿಐ ವಲಯ 15 ರ ನಿಕಟಪೂರ್ವಧ್ಯಕ್ಷೆ ಸೌಜನ್ಯಾ ಹೆಗ್ಡೆ ಸ್ವಾಗತಿಸಿ ನಿರ್ವಹಿಸಿದರು. ದಿವ್ಯಕುಮಾರ್ ಜೈನ್ ವಂದಿಸಿದರು.