ಆರಾಧನೆ, ಪುರಾತನ ಇತಿಹಾಸ, ಅಲ್ಲಿನ ಯತಿ ವರ್ಯರು ಅಥವಾ ಧರ್ಮಾಧಿಕಾರಿಗಳ ಶ್ರದ್ಧೆಯಿಂದ ಪ್ರತಿಯೊಂದು ಕ್ಷೇತ್ರ ಗುರುತಿಸಲ್ಪಡುತ್ತದೆ ಎಂದು ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್ ಗುರು ಶಿವಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಅವರು ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾ ಪರಮೇಶ್ವರೀ ದೇಗುಲದಲ್ಲಿ ಕ್ಷೇತ್ರದ ವಾಯವ್ಯ ಭಾಗದ ಪುರಾತನ ಆಲಡೆ ಸಾನ್ನಿಧ್ಯಗಳ ಪುನಃ ಪ್ರತಿಷ್ಠಾಪನಾಂಗ ಬ್ರಹ್ಮಕಲಶೋತ್ಸವ, ಸಹಸ್ರ ಚಂಡಿಕಾ ಮಹಾಯಾಗ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪಳ್ಳಿ ಅಡಪಾಡಿಯಲ್ಲಿ ನಡೆದ ಕ್ಷೇತ್ರ ನಿರ್ಮಾಣ ಇಲ್ಲಿನ ಧರ್ಮದರ್ಶಿ ಪುಂಡಲೀಕ ನಾಯಕ್ ಅವರ ಶ್ರಮದ ಪರಿಣಾಮ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಕ್ತಿ, ಶ್ರದ್ಧೆಯಿಂದ ಅಡಪಾಡಿಯಲ್ಲಿ ಧಾರ್ಮಿಕ ಚಿಂತನೆ ನಡೆಯುತ್ತಿದೆ ಎಂದರು.
ಸಚಿವ ಸುನಿಲ್ ಕುಮಾರ್, ಜೋತಿಷ ವಿ| ಪ್ರಸನ್ನ ಆಚಾರ್ಯ, ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್, ಶಾಸಕ ರಘುಪತಿ ಭಟ್, ಮಂಗಳೂರಿನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಮಾಹೆ ಕುಲಪತಿ ಲೆ|ಕ| ಡಾ| ಎಂ.ಡಿ. ವೆಂಕಟೇಶ್, ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಕಾರ್ಕಳ ಶ್ರೀ ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ಕಳ ರಾಜಾಪುರ ಸಾರಸ್ವತ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಪಳ್ಳಿ ಪಂ. ಅಧ್ಯಕ್ಷ ಸಂದೀಪ್ ಅಮೀನ್, ದುಬಾೖ ಉದ್ಯಮಿ ರಾಜಶೇಖರ್ ಚೌಟ, ಉದ್ಯಮಿ ಸಖಾರಾಮ್ ಶೆಟ್ಟಿ, ಶ್ರೀಶ ನಾಯಕ್ ಪೇತ್ರಿ, ಉದ್ಯಮಿಗಳಾದ ಧನಂಜಯ ಅಮೀನ್ ಬೆಳ್ಳಾಲ, ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸ್ವಾಮೀಜಿಯವರನ್ನು, ಡಾ| ಹೆಗ್ಗಡೆಯವರನ್ನು ಹಾಗೂ ಅತಿಥಿಗಳನ್ನು ಗೌರವಿಸಲಾಯಿತು. ನೀರೆ ರವೀಂದ್ರ ನಾಯಕ್ ಸ್ವಾಗತಿಸಿ, ಹರೀಶ್ ನಾಯಕ್ ಅಜೆಕಾರು ನಿರೂಪಿಸಿದರು.