ಮುಂಬಯಿ, ಮಾ.05:ತೋನ್ಸೆ ಜನರು ಉದಾತ್ತ ಕೊಡುಗೈದಾನಿಗಳಾಗಿದ್ದು ಇಂದು ವಿಶ್ವಮಾನ್ಯರಾಗಿದ್ದಾರೆ. ಉತ್ಕೃಷ್ಟ ನಿಸ್ವಾರ್ಥ ಸೇವೆಗೆ ತೋನ್ಸೆ ಜನತೆ ಮಾದರಿ ಆಗಿದ್ದಾರೆ. ಬಿಲ್ಲವರ ಹಸ್ತಗಳನ್ನು ಸೇರಿ ಅಭಿವೃದ್ಧಿ ಕಂಡ ಸರ್ವೋತ್ಕೃಷ್ಟ ಗರಡಿಗಳಲ್ಲೊಂದಾಗಿದ್ದು ಇಂದು ತೋನ್ಸೆ ಗರಡಿ ಸಾಮರಸ್ಯದ ತಾಣವಾಗಿ ಬೆಳೆದಿದೆ. ವಿಸ್ವಸ್ಥ ಜನರÀ ಕೈಯಲ್ಲಿ ಸಾರಥ್ಯ ನೀಡಿದಾಗ ಗರಡಿಗಳ ಸರ್ವೋಭಿವೃದ್ಧಿ ಸಾಧ್ಯವಾಗುವುದು ಅನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಗರೋಡಿ ಹೆಸರಲ್ಲಿ ಮುಂಬಯಿನಲ್ಲಿ ಮೇಲ್ಫಂಕ್ತಿತಲ್ಲಿರುವ ಟ್ರಸ್ಟ್ ತೋನ್ಸೆಯ ಸಮನ್ವಯದ ಸಂಭ್ರಮವಾಗಿಸಿದ ಈ ಕಾರ್ಯಕ್ರಮ ಪರಿಪೂರ್ಣತೆ ಕಂಡಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ತಿಳಿಸಿದರು.
ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಸಮಿತಿ ತನ್ನ 14ನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಭಾನುವಾರ ಅಪರಾಹ್ನ ಸಾಂತಾಕ್ರೂಸ್ ಪೂರ್ವದ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ರಚಿತ ತೋನ್ಸೆ ಶಾನ್ಬೋಗ್ ದಿ| ಬಾಬು ಎನ್.ಶೆಟ್ಟಿ ವೇದಿಕೆಯಲ್ಲಿ ಅದ್ದೂರಿಯಾಗಿ ಸಂಭ್ರಮಿಸಿದ್ದು ಮುಖ್ಯ ಅತಿಥಿಯಾಗಿದ್ದು ಸಮಾರಂಭವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಜಯಕೃಷ್ಣ ಮಾತನಾಡಿದರು.
ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಸಮಿತಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಇಂಡಿಯನ್ ಓವ್ಹರ್ಸೀಸ್ ಬ್ಯಾಂಕ್ನ ಮಾಜಿ ಸಿಎಂಡಿ ಡಾ| ಎಂ.ನರೇಂದ್ರ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್, ಮೋಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಗೌರವಾಧ್ಯಕ್ಷ ಸುರೇಶ್ ಕಾಂಚನ್, ಭಾರತ್ ಬ್ಯಾಂಕ್ನ ನಿರ್ದೇಶಕ ಬಾಸ್ಕರ ಎಂ.ಸಾಲ್ಯಾನ್, ಹರ್ಬನ್ ಡೆವಲಪ್ಮೆಂಟ್ ಆಥಾರಿಟಿ ಉಡುಪಿ ಇದರ ಮಾಜಿ ಅಧ್ಯಕ್ಷ ಜನಾರ್ಧನ ತೋನ್ಸೆ ಉಪಸ್ಥಿತರಿದ್ದರು.
ಆನಂದ ಶೆಟ್ಟಿ ಮಾತನಾಡಿ ನನ್ನ ಪರಿವಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕುಟುಂಬದವರ ಸನ್ಮಾನ ಸ್ವೀಕರಿಸಿದ ನಾನು ಧನ್ಯ. ತೋನ್ಸೆ ಮನೆತನದ ಎಲ್ಲರೂ ಸೋದರತ್ವದಿಂದ ಬಾಳಿ ದೈವದೇವರುಗಳನ್ನು ನಂಬಿ ಬಾಳುವವರು. ಇಲ್ಲಿ ಅನೇಕ ಸಾಧಕರು ಹುಟ್ಟಿ ಬೆಳೆದು ಸಾಧಕರೆಣಿಸಿದ ಶುದ್ಧ ಶ್ರಮಜೀವಿಗಳು.ಜನ ಸೇವೆಯೇ ಜನಾರ್ಧನ ಸೇವೆ ಎಂದು ನಂಬಿದ ನಾವು ಎಲ್ಲರಿಗೂ ಸಹಾಯಹಸ್ತ ಮಾಡಬೇಕು ಎಂದರು.
ವಿನಮ್ರ ಮತ್ತು ಸರಳ ನಡೆ ನುಡಿಯ ತೋನ್ಸೆಯ ಬಹುತೇಕರು ಹುಟ್ಟು ಸಾಧಕರು ಅನ್ನುವುದು ಅಭಿಮಾನವಾಗುತ್ತದೆ. ವಿಶ್ವಮಾನ್ಯ ಮಾಲ್ದೀವ್ಸ್ ಪ್ರಕೃತಿಯ ತೋನ್ಸೆ, ದೈವಾರಾಧನೆಯ ಸೌಂದರ್ಯದ ನಾಡಾಗಿದೆ. ಇಂತಹ ಧಾರ್ಮಿಕ ತಾಣಗಳ ಅಭಿವೃದ್ಧಿ ಎಲ್ಲರ ಹೊಣೆಯಾಗಿದೆ ಎಂದು ಹರೀಶ್ ಅಮೀನ್ ತಿಳಿಸಿದರು.
ಸುರೇಶ್ ಕಾಂಚನ್ ಮಾತನಾಡಿ ನಂಬಿದ ಭಕ್ತಾಧಿಗಳು ದೇವಾಧಿ ದೇವರುಗಳ ಮತ್ತು ಗ್ರಾಮ ಒಳಿತು ಸಾಧ್ಯ. ಗ್ರಾಮದ ದೈವದೇವರುಗಳ ಹೆಸರಿನಲ್ಲಿ ಮುಂಬಯಿಯಲ್ಲಿ ಟ್ರಸ್ಟ್ನ್ನು ಕಟ್ಟಿ ಬೆಳೆಸುವುದೇ ಒಂದು ಸಾಧನೆಯಾಗಿದೆ. ಭಕ್ತಿಯ ಕೈಂಕಾರ್ಯದಿಂದ ಯಶಸ್ಸು ಸಾಧ್ಯ ಎನ್ನಲು ಈ ಟ್ರಸ್ಟ್ನ ಸಾಧನೆ ಸ್ತುತ್ಯರ್ಹ ಎಂದರು.
ಪ್ರಕೃತಿಯ ರಕ್ಷಣೆಗೆ ನಾವು ಬದ್ಧರಾಗಬೇಕಾಗಿದ್ದು ಇದಕ್ಕೆಲ್ಲಾ ಸ್ಥಾನೀಯ ದೈವದೇವಸ್ಥಾನಗಳ ಪ್ರೇರಣೆಯೂ ಅತ್ಯವಶ್ಯವಾಗಿದೆ. ಸಂಘಟಕರ ದೃಢ ಪರಿಶ್ರಮ, ಹುಮ್ಮಸ್ಸು ತೋನ್ಸೆಯ ಸಮುದಾಯದ ಒಕ್ಕೂಟಕ್ಕೆ ಪ್ರೇರಣೆಯಾದ ಕಾರ್ಯಕ್ರಮವಾಗಿದೆ ಎಂದು ನರೇಂದ್ರ ತಿಳಿಸಿದರು.
ಭಾಸ್ಕರ್ ಸಾಲ್ಯಾನ್ ಮಾತನಾಡಿ ಗರೋಡಿಯ ಕಾರ್ಯಕ್ರಮ ಬಹಳ ಅರ್ಥಪೂರ್ಣ. ಮುಂಬಯಿ ಟ್ರಸ್ಟ್ ಇಂದು ತೋನ್ಸೆ ಸಾಧಕರನ್ನು ಗುರುತಿಸುವುದು ಎಲ್ಲರಿಗೂ ಪ್ರೋತ್ಸಾಹಿಸುವಂತಾಗಿದೆ. ತೋನ್ಸೆ ಹೆಸರಲ್ಲೇ ಕಂಪನಾಶಕ್ತಿ ಇದ್ದು ಇಲ್ಲಿನ ಸಾಧನೆಗೈದ ಸಾಧಕರೇ ಇದಕ್ಕೆ ಉದಾಹರಣೆ ಎಂದರು.
ಜನಾರ್ಧನ ತೋನ್ಸೆ ಮಾತನಾಡಿ ತೋನ್ಸೆಯವರು ಭಾಗ್ಯವಂತರೇ ಸರಿ. ಅದರಲ್ಲೂ ಮುಂಬಯಿ ಭಕ್ತರ ಕೊಡುಗೆಯಿಂದಲೂ ಶ್ರೀಮಂತ ಎಂದೆಣಿಸಿದ ನಮ್ಮ ಗರೋಡಿ, ಐದು ಗ್ರಾಮಗಳ ಇತಿಹಾಸವುಳ್ಳ ಪುರಾಣ ಗರಡಿ ಆಗಿದ್ದು, ಇದರ ಸೇವೆ ನಮ್ಮ ಸೌಭಾಗ್ಯ ಎಂದರು.
ನಿತ್ಯಾನಂದ ಕೋಟ್ಯಾನ್ ಮಾತನಾಡಿ ವಿದ್ವತ್ತಿಗೆ ತನ್ನದೇ ಆದ ದರ್ಜೆವಿರುತ್ತದೆ. ಇದೊಂದು ಆತ್ಮೀಯತೆ ಕೂಡುವಿಕೆಯ ಸುಸಂದರ್ಭ ಆಗಿದ್ದು ಅನಿಸಿದ್ದ ಸೇವಾ ಕೈಂಕರ್ಯವನ್ನು ಕಾರ್ಯಗತ ಮಾಡಲು ಸಹಕಾರಿಯಾಗಿದೆ. ಗರೋಡಿಯ ಜೊತೆಗೆ ಸಮಾಜದ ಉನ್ನತಿಯೇ ನಮ್ಮ ಉದ್ದೇಶವಾಗಿದ್ದು ಯುವ ಜನತೆ ಗರೋಡಿಗಳ ಬಗ್ಗೆ ಭಕ್ತಿ ಅಧ್ಯಯನ ಮಾಡಿ ದೈವಕ್ಷೇತ್ರಗಳ ಉದ್ಧಾರದತ್ತ ಶ್ರಮಿಸಬೇಕು. ಇದು ಭಾವೀ ಜನಾಂಗದಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶ ಕಾಣಬೇಕು ಎಂದು ಅಧ್ಯಕ್ಷೀಯ ಭಾಷಣದಲ್ಲಿ ನಿತ್ಯಾನಂದ ಕೋಟ್ಯಾನ್ ತಿಳಿಸಿದರು.
ಸಮಾರಂಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಅನುಪಮ ಸೇವೆಗೈದ ದರ್ಶನ ಪಾತ್ರಿಗಳಾದ ಸೂಡಾ ಕೋಟಿ ಪೂಜಾರಿ ಮತ್ತು ಶ್ಯಾಮರಾಯ ಪೂಜಾರಿ ಅಮ್ಮುಂಜೆ ಅವರಿಗೆ ವಿಶೇಷವಾಗಿ ಸನ್ಮಾನಿಸಿದರು. ಹಾಗೂ ತೋನ್ಸೆಯ ಪ್ರಸಿದ್ಧ ಸಾಧಕರಾದ ಆಗ್ರ್ಯಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಆನಂದ ಎಂ.ಶೆಟ್ಟಿ ಮತ್ತು ಶಶಿರೇಖಾ ಎ.ಶೆಟ್ಟಿ, ಭಾರತ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷ ಡಿ.ಬಿ ಅಮೀನ್ ಮತ್ತು ಹೀರಾ ಅಮೀನ್, ಬುಧಗೀ ಇಂಜಿನಿಯರ್ಸ್ ಮತ್ತು ಕಂಟ್ರ್ರಕ್ಟರ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಹೆಚ್.ಬಾಬು ಪೂಜಾರಿ ಮತ್ತು ಮೀಣಾ ಪೂಜಾರಿ ದಂಪತಿಗಳಿಗೆ `ತೋನ್ಸೆ ಪ್ರೈಡ್’ ಮತ್ತು ಇನ್ಗ್ಲೋಬ್ ಎಕ್ಸ್ ಪೋಟ್ಸ್ ಆಡಳಿತ ನಿರ್ದೇಶಕ ರಾಜಗೋಪಾಲ್ ಬಿ.ಶೆಟ್ಟಿ ಮತ್ತು ಸುಜಾತಾ ಶೆಟ್ಟಿ, ವೈಬ್ರೇಂಟ್ ಮಾರ್ಕೆಟಿಂಗ್ ಸರ್ವಿಸಸ್ ಆಡಳಿತ ನಿರ್ದೇಶಕ ರಮಾನಂದ ಬಿ.ರಾವ್ ಮತ್ತು ಲಕ್ಷ್ಮೀ ಆರ್.ರಾವ್ ದಂಪತಿಗಳಿಗೆ, ಹೈ-ಟೆಕ್ ಇಲೆಕ್ಟ್ರೀಪಿಕೇಷನ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಗುಜರಾತ್ ಆಡಳಿತ ನಿರ್ದೇಶಕ ರವೀಂದ್ರನಾಥ ವಿ.ಶೆಟ್ಟಿ, ನೋಮರ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ ಸಚಿನ್ ಪೂಜಾರಿ ಮತ್ತು ಸುಜತಾ ಪೂಜಾರಿ ದಂಪತಿಗಳಿಗೆ `ತೋನ್ಸೆ ಸಾಧಕ’ ಬಿರುದು ಪ್ರದಾನಿಸಿ ಅತಿಥಿಗಳು ಗೌರವಿಸಿದರು. ಅಂತೆಯೇ ಸಮಿತಿಯ ಸದಸ್ಯರಾಗಿದ್ದು ದಾಂಪತ್ಯ ಸ್ವರ್ಣ ಸಂಭ್ರಮ ಪೂರೈಸಿದ ಶಂಕರ ಸುವರ್ಣ ಮತ್ತು ಪದ್ಮಾಲತಾ ಸುವರ್ಣ, ಸಿ.ಕೆ ಪೂಜಾರಿ ಮತ್ತು ಭಾರತಿ ಪೂಜಾರಿ, ಸೋಮ ಸುವರ್ಣ ಮತ್ತು ಹೀರಾ ಎಸ್.ಸುವರ್ಣ ದಂಪತಿಗಳನ್ನು ಹಾಗೂ ತೋನ್ಸೆ ಯುವ ಸಾಧಕರುಗಳಾದ ಕರಾಟೆ ಪಟು ರೋಹನ್ ಕೋಟ್ಯಾನ್ (ಪರವಾಗಿ ರವಿ ಕೋಟ್ಯಾನ್, ಕು| ಜಿಯಾ ಕೋಟ್ಯಾನ್), ನ್ಯಾ| ಲವಿಕಾ ರಾಮ ತೋನ್ಸೆ (ಕಾನೂನು), ಡಾ| ಶ್ರೇಯಾ ರಘು ಪೂಜಾರಿ (ವೈದ್ಯಕೀಯ), ಮಾ| ಆದಿ ಆರ್.ಪೂಜಾರಿ (ಕ್ರೀಡೆ) ಇವರುಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಉಪಾಧ್ಯಕ್ಷರುಗಳಾದ ಡಿ.ಬಿ.ಅಮೀನ್ ಮತ್ತು ಸಿ,ಕೆ ಪೂಜಾರಿ, ಜೊತೆ ಕಾರ್ಯದರ್ಶಿ ಕರುಣಾಕರ್ ಬಿ.ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ವಿ.ಸನಿಲ್, ಅಶೋಕ್ ಎಂ.ಕೋಟ್ಯಾನ್ ಸೇರಿದಂತೆ ಸದಸ್ಯರನೇಕರು ಹಾಜರಿದ್ದು ಜಯಂತ್ ಅಮೀನ್, ರಾಮ ಪೂಜಾರಿ ತೋನ್ಸೆ, ಭಾಸ್ಕರ್ ಜತ್ತನ್, ಜನಾರ್ಧನ ಕೋಟ್ಯಾನ್ ಹೂಡೆ, ಎನ್ಸಿಪಿ ಧುರೀಣ ಲಕ್ಷ್ಮಣ ಪೂಜಾರಿ, ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ, ನವೀನ್ ಶೆಟ್ಟಿ ತೋನ್ಸೆ, ಸಿಎ| ಅಶ್ವಜಿತ್ ಹೆಜ್ಮಾಡಿ, ನಿಲೇಶ್ ಪೂಜಾರಿ ಪಲಿಮಾರ್, ಮತ್ತಿತರರನ್ನು ಗೌರವಿಸಲಾಯಿತು.
ಹೇಮಲತಾ ಸುವರ್ಣ, ಸವಿತಾ ಕೋಟ್ಯಾನ್ ಮತ್ತಿತರರು ವೇದಿಕೆಯಲ್ಲಿದ್ದು ಮಹಿಳಾ ವಿಭಾಗದ ಸದಸ್ಯೆಯರು ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ವಿಶ್ವನಾಥ ತೋನ್ಸೆ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿ ಸನ್ಮಾನಿತರನ್ನು ಪರಿಚಯಿಸಿದರು. ಗೌರವ ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್, ಜೇಸಿ ಶೇಖರ್ ಗುಜ್ಜರಬೆಟ್ಟು, ಸದಾನಂದ ಪೂಜಾರಿ, ಭಾರತಿ ಸುವರ್ಣ, ಲಕ್ಷ್ಮೀ ಡಿ. ಅಂಚನ್, ಮೃದುಲಾ ಕೋಟ್ಯಾನ್ ಮತ್ತು ಆಕಾಶ್ ಸಂಜೀವ ಪೂಜಾರಿ ಪುರಸ್ಕೃತರನ್ನು ಪರಿಚಯಿಸಿದರು. ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ವಂದಿಸಿದರು.
ಮನೋರಂಜನೆಯನ್ನಾಗಿಸಿ ಸೇವಾ ಟ್ರಸ್ಟ್ನ ಸದಸ್ಯರು ಮತ್ತು ಮಕ್ಕಳು ವಿನೋದಾವಳಿ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾದರ ಪಡಿಸಿದರು. ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ರಚಿಸಿ ನಿರ್ದೇಶಿಸಿದ ತುಳು ನಾಟಕ `ಮೋಕೆದ ಜೋಕುಲು’ ನಾಟಕವನ್ನು ಕಲಾಜಗತ್ತು ತಂಡವು ಪ್ರದರ್ಶಿಸಿತು.