ಯಕ್ಷಗಾನ ರಂಗದಲ್ಲಿ ಅದ್ವಿತೀಯರು. ಬಲಿಪ ಪರಂಪರೆಯ ಹಿರಿಯ ಕೊಂಡಿ. ನಾರಾಯಣ ಭಾಗವತರು ಪದಲೀನವಾಗುವ ಮೂಲಕ ತೆಂಕುತಿಟ್ಟಿನ ಪರಂಪರೆಯಲ್ಲಿ ಅಂತರ ಮೂಡಿದೆ. ಹಿಮ್ಮೇಳದ ಭೀಷ್ಮರಾಗಿದ್ದ ಬಲಿಪರು ಗಾನಯಾನದ ಜತೆಗೆ ಬದುಕಿನ ಯಾನಕ್ಕೂ ಮಂಗಲ ಹಾಕಿದ್ದಾರೆ. ಏರು ಪದ್ಯ ಗ ಳಿಂದಲೇ ಪ್ರಸಿದ್ಧಿ ಪಡೆದ ಯಕ್ಷ ಗಾ ನದ ಮುಕು ಟದ ಮಣಿ. ಪರಂಪರೆಯನ್ನು ಸರ್ವತಾ ಉಳಿಸಿಕೊಂಡಿದ್ದ ಮತ್ತು ಉಳಿಸಲು ಶ್ರಮಿಸಿದ ಭಾಗವತಶ್ರೇಷ್ಠರು.
“ಬಲಿಪ” ಮನೆತನವೆಂದರೆ ಭಾಗವತರ ಮನೆ ಎಂದೇ ಖ್ಯಾತಿ. ಇವರ ಅಜ್ಜ ದಿ. ಬಲಿಪ ನಾರಾಯಣ ಭಾಗವತರು ( ಅಂದಿನ ಹಿರಿಯ ಬಲಿಪರು ) ಯಕ್ಷರಂಗದಲ್ಲಿ ಮೆರೆದ ದೊಡ್ಡ ಹೆಸರು. ತಮ್ಮ ಅಪಾರ ಸಾಧನೆಯಿಂದ “ಬಲಿಪ ಮಟ್ಟು’ ಎಂಬ ಶೆ„ಲಿಯನ್ನು ಹುಟ್ಟು ಹಾಕಿದ ಭಾಗವತ ಪಿತಾಮಹ. ತಮ್ಮ ಅಜ್ಜನಲ್ಲಿ ಹಾಗೂ ತಂದೆಯವರಲ್ಲಿ ಭಾಗವತಿಕೆ ಕಲಿತ ಪುಟ್ಟ ಬಾಲಕ ನಾರಾಯಣ, ಮುಂದೆ ತಮ್ಮ ಅಜ್ಜನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದರು. ಏಳನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, 13ನೇ ವಯಸ್ಸಿನಲ್ಲೇ ಯಕ್ಷರಂಗ ಪ್ರವೇಶಿಸಿದ ಅವರು ತಮ್ಮ ಅಜ್ಜನ “ಬಲಿಪ ಶೈಲಿ ‘ಯನ್ನೇ ಮುಂದುವರಿಸಿದರು. ಬಲಿಪರು ಕಂಚಿನ ಕಂಠದ ಭಾಗವತರು ಎಂದೇ ಪ್ರಸಿದ್ಧರು. ಕಪ್ಪು ಮೂರು ಅಥವಾ ಬಿಳಿ ನಾಲ್ಕರ ( ಕೆಲವೊಮ್ಮೆ ಬಿಳಿ ಐದು ) ಏರು ಶ್ರುತಿಯಲ್ಲಿ ಹಾಡುವ ಬಲಿಪರ ಹಾಡನ್ನು ಕೇಳಲೆಂದೇ ಬರುವ ಲಕ್ಷಾಂತರ ಅಭಿಮಾನಿಗಳಿದ್ದರು. ಯುವ ಭಾಗವತರೂ ನಾಚುವಂತೆ ಅಥವಾ ಅನುಕರಿಸುವಂತೆ ಹಾಡಬಲ್ಲವರಾಗಿದ್ದರು ಬಲಿಪರು. ಧ್ವನಿವರ್ಧಕ ವ್ಯವಸ್ಥೆ ಇಲ್ಲದ ಕಾಲದಲ್ಲೂ ಇಡೀ ರಾತ್ರಿ ಒಬ್ಬರೇ ಭಾಗವತಿಕೆ ಮಾಡಿದ ಉದಾಹರಣೆಗಳಿಗೆ ಲೆಕ್ಕವಿಲ್ಲ. ಪದ್ಯಗಳ ಕಂಠಪಾಠವಲ್ಲದೇ, ಕಲಾವಿದರು ಜಾಸ್ತಿಯಿದ್ದಲ್ಲಿ , ಹೊಸ ಪಾತ್ರಗಳನ್ನು ಸƒಷ್ಟಿಸಿ, ರಂಗಸ್ಥಳದಲ್ಲೇ ಆ ಪಾತ್ರಗಳಿಗೆ ಪದ್ಯ ಕೊಟ್ಟ ಆಶುಕವಿಗಳೂ ಹೌದು. ಪ್ರಸಂಗಗಳ ನಡೆ ತಿಳಿದಿದ್ದು , ರಂಗದಲ್ಲೇ ನಿರ್ದೇಶನ ನೀಡಬಲ್ಲ ಅಸಾಮಾನ್ಯ ನಿರ್ದೇಶಕರೇ ಆಗಿದ್ದರು. ಯಕ್ಷಗಾನದ ಕುರಿತಾದ ಯಾವುದೇ ಜಿಜ್ಞಾಸೆಗಳಿಗೆ ಬಲಿಪರ ಮಾತು ಅಂತಿಮ ಮುದ್ರೆ ಎಂಬುದು ಸರ್ವಮಾನ್ಯ ಸಂಗತಿ. ಯಕ್ಷಗಾನೀಯ ವಿಷಯಗಳನ್ನು ಚರ್ಚಿಸಲು ವಿದ್ವಾಂಸರು, ಬಲಿಪರ ಮನೆಗೇ ಬರುವುದೂ ಸಾಮಾನ್ಯವಾಗಿತ್ತು.
ಪ್ರಸಂಗಕರ್ತ, ಆಶುಕವಿ
ಸುಮಾರು 50 ಪ್ರಸಂಗ ರಚಿಸಿದ್ದಾರೆ. ಅವು ಇಂದಿಗೂ ಯಕ್ಷರಂಗದಲ್ಲಿ ಪ್ರದರ್ಶನ ಗೊಳ್ಳುತ್ತಿರುವುದು ವಿಶೇಷ. ಇವುಗಳಲ್ಲಿ 30 ಪ್ರಸಂಗಗಳು ಈಗಾಗಲೇ ಮುದ್ರಿತವಾಗಿವೆ. ಪಟ್ಲ ಪ್ರತಿಷ್ಠಾನ ಬಲಿಪರ 14 ಅಪ್ರಕಟಿತ ಪ್ರಸಂಗಗಳ ಸಂಕಲನ “ಜಯಲಕ್ಷಿ ¾à’ ಯನ್ನು ಪ್ರಕಟಿಸಿದೆ. ಈ ಪುಸ್ತಕಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ “ಪುಸ್ತಕ ಪ್ರಶಸ್ತಿ’ ನೀಡಿದೆ. ಐದು ದಿನಗಳ ಕಾಲ ಆಡಬಲ್ಲ “ಶ್ರೀ ದೇವಿಮಹಾತೆ¾’ ಪ್ರಸಂಗ ರಚಿಸಿರುವ ಬಲಿಪರ ಕೃತಿ ಅತ್ಯಂತ ಶ್ರೇಷ್ಠ ಹಾಗೂ ಅಪರೂಪದ ಕೃತಿ.
ದುಃಶಾಸನವಧೆ, ಕುಮಾರ ವಿಜಯದಂಥ ಅಪರೂಪ ಹಾಗೂ ಕ್ಲಿಷ್ಟವಾದ ಪ್ರಸಂಗಗಳನ್ನು ಬಲಿಪರೇ ಹಾಡಬೇಕು ಎಂಬುದು ಯಕ್ಷಗಾನ ಅಭಿಮಾನಿಗಳ ಅಭಿಮತ. ಯಕ್ಷಗಾನದ ಕೆಲವು ವಿಶಿಷ್ಟ ತಾಳಗಳು, ರಾಗಗಳು ಬಲಿಪರಿಗೆ ಮಾತ್ರ ಸೀಮಿತವೋ ಎಂಬಂಥ ಅಪೂರ್ವ ಸಿದ್ಧಿ ಬಲಿಪರದು. ವೃತ್ತಿನಿರತ ಭಾಗವತರಾಗಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿದ ಬಲಿಪರು ಮೂಲ್ಕಿ, ಕೂಡ್ಲು, ಕುಂಡಾವು ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಕಟೀಲು ಮೇಳದಲ್ಲೇ ನಲ್ವತ್ತು ವರ್ಷಗಳ ದೀರ್ಘಕಾಲ ತಿರುಗಾಟ ನಡೆಸಿ, ಕಟೀಲು ಮೇಳದಲ್ಲಿರುವಾಗಲೇ ನಿವೃತ್ತರಾಗಿದ್ದರು.
ಮೇಳ ಕಟ್ಟಿದ, ನಡೆಸಿದ ಯಜಮಾನ
ಬಲಿಪರು ಪಡ್ರೆ ಜಠಾಧಾರಿ ಮೇಳ ಕಟ್ಟಿ ನಡೆಸಿದ, ಮೇಳದ ಯಜಮಾನರಾಗಿಯೂ ಅನುಭವ ಗಳಿಸಿದ್ದರು. ಯಾರೊಂದಿಗೂ ವೈಷಮ್ಯ ಹೊಂದಿಲ್ಲದ ಅಜಾತಶತ್ರು. ನೂರಾರು ಸಿ.ಡಿ.ಹಾಗೂ ಕ್ಯಾಸೆಟ್ಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದಾರೆ. ಕೆಲವು ಅಪೂರ್ವ ರಾಗ, ತಾಳಗಳ ದಾಖಲೀಕರಣಕ್ಕೂ ಸಹಕರಿಸಿದ್ದವರು. ಅವರು ಗಾನ ವೈಭವಕ್ಕೂ ಸೈ. ತಮ್ಮ 80 ನೇ ವಯಸ್ಸಿನಲ್ಲೂ ಗಾನವೈಭವ’ಗಳಲ್ಲಿ, ಯುವ ಭಾಗವತರೊಂದಿಗೆ ಬಲಿಪರು ಭಾಗವಹಿಸಿ ಅಚ್ಚರಿ ಮೂಡಿಸಿದವರು. ಐದು ವರ್ಷಗಳ ಹಿಂದೆ ಪತ್ನಿ ಜಯಲಕ್ಷ್ಮೀ ಅವರನ್ನು ಕಳೆದುಕೊಂಡಿದ್ದ ಅವರು, ಕಟೀಲು ಎರಡನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ತಮ್ಮ ಎರಡನೇ ಮಗ ಪ್ರಸಾದ ಬಲಿಪರನ್ನು ಕಳೆದ ವರ್ಷವಷ್ಟೇ ಕಳೆದುಕೊಂಡಿದ್ದರು. ಇವೆಲ್ಲವೂ ಬಲಿಪರನ್ನು ಕಾಡುತ್ತಲೇ ಇತ್ತು. ಎರಡನೇ ಮಗ ಶಿವಶಂಕರರು ಪ್ರಸ್ತುತ ಕಟೀಲು 2 ನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದಾರೆ .
ಹಿರಿಯ ಮಗ ಮಾಧವರು ಹಿಮ್ಮೇಳ ವಾದನದಲ್ಲಿ ಪರಿಣತ, ಮೂರನೇ ಮಗ ಶಶಿಧರರು ಕೃಷಿಕ.
ಶಕ್ತಿಯನ್ನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಶ್ರೀ ಕೃಷ್ಣ ಮುಖ್ಯಪ್ರಾಣರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
– ಶ್ರೀ ವಿಶ್ವಪ್ರಸನ್ನತೀರ್ಥರು, ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ
ಭಾಗವತಿಕೆಯಲ್ಲಿ “ಬಲಿಪ’ರ ಶೈಲಿ ಅಜರಾಮರ
ಯಕ್ಷಗಾನದಲ್ಲಿ ಬಲಿಪರ ಶೈಲಿ ಎಂಬ ಭಾಗವತಿಕೆ ಎಂದೂ ಮರೆಯದ ಅನುಭೂತಿ. ಅದನ್ನು ಆಸ್ವಾದಿಸುವುದೇ ಒಂದು ಸಂತಸ. ಯಾವತ್ತಿಗೂ ಅದೊಂದು ಭಿನ್ನ ಸ್ವರ.
ಬಲಿಪ ನಾರಾಯಣ ಭಾಗವತರ ಜತೆಗೆ ತಿರುಗಾಟ ನಾನು ಮಾಡದಿದ್ದರೂ ಅವರ ಹಲವಾರು ಹಾಡಿಗೆ ಕುಣಿದಿದ್ದೇನೆ. ಅವರ ಅಜ್ಜನ ಕಂಠವೇ ಬಲಿಪರಲ್ಲಿ ನಾವು ಕಂಡಿದ್ದೇವೆ. ಅದು ರೋಮಾಂಚಕ ಶೈಲಿ. ಅಂದಹಾಗೆ, ಯಕ್ಷಗಾನದ ಪ್ರಸಂಗಗಳನ್ನು ಬಾಯಿಪಾಠ ಮಾಡಿದ ಭಾಗವತರು ಬಲು ಅಪರೂಪ. ಅಂತಹ ಗುಣ ಎಲ್ಲರಲ್ಲಿಯೂ ಇರುವುದಿಲ್ಲ. ಆದರೆ, ಬಲಿಪರು ಬಹುತೇಕ ಬಾಯಿಪಾಠ ಮಾಡಿದ್ದರು. ಅದು ಅವರ ಕಲಾ ಶ್ರೀಮಂತಿಕೆಯ ದ್ಯೋತಕ. ರಂಗದಲ್ಲಿ ಬಹು ವಿಶೇಷ ಗುಣ ಸಂಪನ್ನತೆಯನ್ನು ಹೊಂದಿದ್ದರು. ಕಲಾವಿದನನ್ನು ನೋಡಿಕೊಂಡು ಅವರನ್ನು ರಂಗಸ್ಥಳದಲ್ಲಿ ಪಳಗಿಸುವ ಗುಣ ಬಲಿಪರಲ್ಲಿತ್ತು. ಅಂತಹ ಅನುಭವ ಸಾಮಾನ್ಯವಾಗಿ ಎಲ್ಲ ಭಾಗವತರಲ್ಲಿ ಇರುವುದಿಲ್ಲ. ಅವರು ನಮ್ಮ ಜತೆಗೆ ಇಲ್ಲವಾದರೂ, ಅವರ ಸ್ವರ ನಮ್ಮ ಜತೆಗೆ ಶಾಶ್ವತವಾಗಿ ಇರುತ್ತದೆ.
– ಕೋಳ್ಯೂರು ರಾಮಚಂದ್ರ ರಾವ್, ತೆಂಕುತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿ
( ಯಕ್ಷಗಾನ ರಂಗಕ್ಕೆ ನೀಡಿದ ಕೊಡುಗೆಗಾಗಿ ಈ ಗೌರವದ ಲೇಖನ )