ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿನ ಬಹುಮುಖ ಪ್ರತಿಭಾನ್ವಿತ ಕಲಾವಿದ ಕಂಠದಾನ ಸ್ಟಾರ್ ಸುರೇಂದ್ರ ಕುಮಾರ್ ಮಾರ್ನಾಡ್ (ಸ್ವೀಟ್ ಸೂರಿ) ಇವರ ಭಕ್ತಿಪ್ರಧಾನ ಸಾಹಿತ್ಯದೊಂದಿಗೆ ಮೂಡಿ ಬಂದ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಿಯಾಧಾರಿತ `ಹಸಿರು ಬೆಟ್ಟದ ಒಡೆಯ’ ಭಕ್ತಿಗೀತೆಯು ಇದೇ ಫೆ.18ರ ಶನಿವಾರ ರಾತ್ರಿ 8.00 ಗಂಟೆಗೆ ಶಿವರಾತ್ರಿಯ ಶುಭ ಸಂಧರ್ಭದಲ್ಲಿ ಶ್ರೀ ಸಿದ್ಧೇಶ್ವರ ದೇವಸ್ಥಾನ, ಅಪ್ಪಾಜಿ ಬೀಡು, ಮಧುಸೂಧನ ಮಿಲ್ಸ್ ಆವರಣ, ಪಿ.ಬಿ ಮಾರ್ಗ, ವರ್ಲಿ, ಮುಂಬಯಿ ಇಲ್ಲಿ ನಗರದ ಹಿರಿಯ ಮೂವರು ಗುರುಸ್ವಾಮಿಗಳ ದಿವ್ಯೋಪಸ್ಥಿತಿ ಹಾಗೂ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಗೊಳ್ಳಲಿದೆ.
ಭಕ್ತಿ ಕುಸುಮದ ಲೋಕಾರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಪ್ಪಾಜಿ ಬೀಡು ಇದರ ಸಂಸ್ಥಾಪಕ ರಮೇಶ್ ಗುರುಸ್ವಾಮಿ ವಹಿಸಲಿದ್ದು ಮುಖ್ಯ ಅತಿಥಿಯಾಗಿ ತುಳು-ಕನ್ನಡ ಕವಿ ಹಾಗೂ ಸಾಹಿತಿ ಶಾಂತಾರಾಮ್ ವಿ.ಶೆಟ್ಟಿ, ಗೌರವ ಅತಿಥಿಯಾಗಿ ಜಿಯೋ ಸಮೂಹ ಸಂಸ್ಥೆಗಳು ಬೆಂಗಳೂರು ಇದರ ಪ್ರಬಂಧಕ ಗೋಪಾಲ್ ಪಟ್ಟೆ ಉಪಸ್ಥಿತಿ ಹಾಗೂ ಲಂಡನ್ (ಯು.ಕೆ) ಅಲ್ಲಿನ ಐಲೇಸಾದ ರೂವಾರಿ ವಿವೇಕಾನಂದ ಮಂಡೇಕರ್ ಇವರ ವಿಶೇಷವಾದ ಕೂಡುವಿಕೆಯಲ್ಲಿ ಶ್ರೀ ರಾಜಮಣಿ ಗುರುಸ್ವಾಮಿ ಮಾಟುಂಗ (ಮುಂಬಯಿ) ಇವರು `ಹಸಿರು ಬೆಟ್ಟದ ಒಡೆಯ’ ಭಕ್ತಿಗೀತೆ ಲೋಕಾರ್ಪಣೆ ಮಾಡಲಿದ್ದಾರೆ. ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ (ಮುಂಬಯಿ) ಆಶೀರ್ವಚನ ನೀಡಲಿದ್ದಾರೆ.
ಸುರೇಂದ್ರ ಮಾರ್ನಾಡ್ ಇವರ ಭಜನಾ ಸಾಹಿತ್ಯಕ್ಕೆ ಮುಖ್ಯ ಗಾಯಕಿಯಾಗಿ ಐಲೇಸಾ ಸ್ಪೆಷಲ್ ಸಿಂಗರ್ ಅವಾರ್ಡ್ ವಿಜೇತೆ ಡಾ| ಪಲ್ಲವಿ ಸೇರಿದಂತೆ ಹಿನ್ನಲೆ ಗಾಯಕರಾಗಿ ಶ್ರೀಕಾಂತ್ ಕೃಷ್ಣ ಮೂರ್ತಿ, ವಿಜಯ ರಾಘವನ್ ಸುವಿಧ್ ಮಾರ್ನಾಡ್, ಕುಮಾರಿ ರಾಶಿ, ರಮೇಶ್ ನಾರಾಯಣ ಇವರು ತಮ್ಮ ಸುಮಧುರವಾದ ಕಂಠಸಿರಿಯಿಂದ ಹಾಡಿದ್ದಾರೆ.
ಅಪ್ಪಾಜಿ ಬೀಡು ಫೌಂಡೇಶನ್ನ ಅಧ್ಯಕ್ಷ ಸಂತೋಷ್ ವಿ.ಶೆಟ್ಟಿ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ಕವಿತಾ ಶೆಟ್ಟಿ ಆಡಳಿತ ಟ್ರಸ್ಟಿ ಶಾಂಭವಿ ರಮೇಶ್ ಗುರುಸ್ವಾಮಿ ಇವರೆಲ್ಲರ ಮುತುವರ್ಜಿಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಫೌಂಡೇಶನ್ (ರಿ.) ಇದರ ವಿಶ್ವಸ್ಥರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಮತ್ತು ಮಹಿಳಾ ವಿಭಾಗ ಸದಸ್ಯರು ಹಾಗೂ ಐಲೇಸಾ-ದಿ ವಾಯ್ಸ್ ಆಫ್ ಓಷನ್ ಬೆಂಗಳೂರು ಇದರ ಸ್ಥಾಪಕ ಅಧ್ಯಕ್ಷ ರಮೇಶ್ಚಂದ್ರ ಹಾಗೂ ಟೀಂ ಐಲೇಸಾ ವಿನಂತಿಸಿ ಕೊಂಡಿದ್ದಾರೆ.