ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಆಶ್ರಯದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪುಣೆಯ ಹಾಗೂ ತುಳುನಾಡಿನ ನಾಮಾಂಕಿತ ಕಲಾವಿದರ ಕೂಡುವಿಕೆಯಲ್ಲಿ ಜನವರಿ ೩೦ ರಂದು ಸೋಮವಾರ ಸಂಜೆ ಗಂಟೆ ೪ ರಿಂದ ಆಚಾರ್ಯ ಅತ್ರೆ ಸಭಾಗೃಹ ವಲ್ಲಭ್ ನಗರ್ ಪಿಂಪ್ರಿ ಇಲ್ಲಿ ” ನಾಗ ಚಂದನ ” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಸಂದರ್ಭ ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಇದರ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಇವರ ಅಧ್ಯಕ್ಷತೆಯಲ್ಲಿ ನಡೆವ ಸಭಾಕಾರ್ಯಕ್ರಮದಲ್ಲಿ ಮೀರಾ -ಡಹಾನು ಬಂಟರ ಸಂಘದ ಅಧ್ಯಕ್ಷರಾದ ವಿರಾರ್ ಶಂಕರ ಶೆಟ್ಟಿ ಹಾಗೂ ಎನ್ ಸಿಪಿ ಕಾಮಗಾರ್ ಯೂನಿಯನ್ ಅಧ್ಯಕ್ಷರಾದ ಕಳತ್ತೂರು ವಿಶ್ವನಾಥ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಗುವುದು . ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹರೀಶ್ ಶೆಟ್ಟಿ ಕುರ್ಕಾಲ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿದ್ದಾರೆ .