ನಮ್ಮ ಜೀವನದ ತೇರನ್ನು ಎಳೆಯಲು ಈ ಮಾಯ ನಗರಿಗೆ ಬಂದಿದ್ದು, ಇಲ್ಲಿ ನಾವು ನಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಿದ್ದು ನಮ್ಮ ಜನ್ಮ ಭೂಮಿಯನ್ನು ನೆನಪಿಸುತ್ತ ಹಳೆ ಬೇರು ಜೊತೆ ಹೊಸ ಬೇರನ್ನು ಸೇರಿಸಿ ಜಾತಿ ಮತ, ಬಡವ ಶ್ರೀಮಂತ ನೆಂಬ ಬೇದವಿಲ್ಲದೆ, 6,000 ಮಕ್ಕಳಿಗೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ತಿಳಿಯಪಡಿಸುವುದಕ್ಕೆ ಚಿಣ್ಣರ ಬಿಂಬ ಮಕ್ಕಳ ಸಂಸ್ಥೆಯನ್ನು ಕಟ್ಟಿದ ಪೊಲೀಸ ಅಧಿಕಾರಿ ಪ್ರಕಾಶ್ ಬಂಡಾರಿ ಅವರು ಈ
ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದ್ದಾರೆ ಅವರಿಗೆ ಮತ್ತು ಅವರ ತಂಡಕ್ಕೆ ಅಭಿನಂದನೀಯ. ಚಿನ್ನರ ಬಿಂಬದ ಕಲಾವಿದರು ಭವಿಷ್ಯವಿದೆ ಮುಂದೆ ಖ್ಯಾತ ಕಲಾವಿದರಾಗುತ್ತಾರೆ ಎಂಬುದು ಇಂದು ನಡೆದ ಕಲಾಪ್ರಕಾರಗಳೇ ಸಾಕ್ಷಿಯಾಗಿದೆ . ಚಿನ್ನರಲ್ಲಿ ಕನ್ನಡವನ್ನು ಬೆಳಿಸಿ ಉಳಿಸುವ ಈ ಸಂಸ್ಥೆಗೆ ಕರ್ನಾಟಕ ಸರಕಾರ ಅನುದಾನ ನೀಡದೇ ಇರುವುದು ತುಂಬಾ ಖೇದಕರ ಸಂಗತಿ, ಸರಕಾರ ಮುಂದಿನ ದಿನಗಳಲ್ಲಿ ಚಿಣ್ಣರ ಬಿಂಬ ವನ್ನು ಗುರುತಿಸಿ ಅನುದಾನ ದೊಂದಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕು, ಈ ಸಂಸ್ಥೆಯು 25ನೇ ವರ್ಷವನ್ನು ಅದ್ದೂರಿಯಿಂದ ಮಾಡಲು ಕರ್ನಾಟಕ ಸರಕಾರದಿಂದ ಹಾಗೂ ನನ್ನಿಂದಾಗುವ ಸಹಾಯವನ್ನು ನೀಡಲು ಪ್ರಯತ್ನಿಸುವೆನು ಎಂದು ಖ್ಯಾತ ಉದ್ಯಮಿ ಎಂ.ಅರ್.ಜಿ. ಗ್ರೂಪಿನ ಸ್ಥಾಪಕ ಸಿಎಡಿ. ಕೆ. ಪ್ರಕಾಶ್ ಶೆಟ್ಟಿ ಅವರು ನುಡಿದರು.
ಚಿಣ್ಣರ ಬಿಂಬದ 20ನೇ ವಾರ್ಷಿಕ ಮಕ್ಕಳ ಉತ್ಸವ 2023 ಸಮಾರಂಭವು ಫೆ.19ರಂದು ಬೆಳಿಗ್ಗೆ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ಬಂಡಾರಿ ಸಭಾಗೃಹದಲ್ಲಿ ನಡೆದಿದ್ದು ಮುಖ್ಯ ಅತಿಥಿಯಗಿ ಉಪಸ್ಥಿತರಿದ್ದು ಮಾತನಾಡಿದ ಕೆ. ಪ್ರಕಾಶ್ ಶೆಟ್ಟಿ ಯವರು ಚಿಣ್ಣರ ಬಿಂಬದ ದಶಮಾನೋತ್ಸವಕ್ಕೆ ಬಂದ ಮೇರು ನಟ ಯಶ್ ಇಲ್ಲಿನ ಮಕ್ಕಳ ಪ್ರತಿಭೆಯನ್ನು ನೋಡಿ ಇಲ್ಲಿ ನಮ್ಮ ಕರ್ನಾಟಕಕ್ಕಿಂತಲೂ ಮೇಲ್ಮಟ್ಟದ ಕಲಾವಿದರಿದ್ದಾರೆ ಎಂದಿದ್ದರು. ಚಿಣ್ಣರ ಬಿಂಬದ ಮಕ್ಕಳಿಗೆ ಮುಂದೆ ಉತ್ತಮ ಭವಿಷ್ಯವಿದೆ. ಮಕ್ಕಳು ಸಾಧನೆಯ ಹಾದಿಯಲ್ಲಿ ಬೆಳೆಯಬೇಕು, ಇಂದಿನ ಕಾರ್ಯಕ್ರಮದವನ್ನು ನೋಡುವಾಗ ಮಕ್ಕಳಲ್ಲಿ ಆತ್ಮಶೈರ್ಯ ತುಂಬಿದ್ದನ್ನು ಕಂಡಿದ್ದೇನೆ. ಚಿನ್ನ ಮಕ್ಕಳು ನಮ್ಮ ನಾಡಿಗೆ ಮಾಡಲಿ ಎಂದು . ಕೆ. ಪ್ರಕಾಶ್ ಶೆಟ್ಟಿ ಅವರು ನುಡಿದರು.
ಗೌರವ ಅತಿಥಿಯಾಗಿ ಆಗಮಿಸಿದ ವಿ. ಕೆ. ಗ್ರೂಪ್ಸ್ ನ ಕೆ. ಎಂ. ಶೆಟ್ಟಿಯವರು ಮಾತನಾಡುತ್ತಾ ಚಿಣ್ಣರ ಬಿಂಬದ ಮಕ್ಕಳು ತಮ್ಮ ಹೆತ್ತವರಿಗೆ ತಕ್ಕಂತೆ ನಡೆದುಕೊಳ್ಳುವುದರೊಂದಿಗೆ ತಮ್ಮ ನಾಡಿಗೆ ಮಾತ್ರವಲ್ಲ ದೇಶಕ್ಕೆ ಉತ್ತಮ ಹೆಸರನ್ನು ತರುವಂತಾಗಲಿ. ಇಂದು ನಡೆದ ಮಕ್ಕಳ ಭಜನಾ ಕಾರ್ಯಕ್ರಮವು ಬಹಳ ಉತ್ತಮವಾಗಿದೆ ಮಾತ್ರವಲ್ಲದೆ ನಮ್ಮ ನಾಡಿನ ಆಚಾರ ವಿಚಾರವನ್ನು ಉಳಿಸುವಲ್ಲಿ ಅವರಿಗೆ ದೇವರು ಮುಂದೆಯೂ ಶಕ್ತಿ ಸಾಮರ್ಥ್ಯವನ್ನು ಕರುಣಿಸಲಿ ಎಂದರು.
ತ್ರಿವೇಣಿ ಮೆನೇಜ್ಮೆಂಟ್ ಕನ್ಸಲ್ಟನ್ಸಿ ಸರ್ವೀಸಸ್ ನ ನಿರ್ದೇಶಕ ಸಿಎ ಎನ್. ಬಿ. ಶೆಟ್ಟಿ ಮಾತನಾಡುತ್ತಾ
ತುಳು ಕನ್ನಡ ಕಲಿಯುವ ಮಕ್ಕಳಿಗೆ ಇದು ಉತ್ತಮ ಅವಕಾಶ. ನಮ್ಮ ನಾಡಿನ ಸಂಗೀತ, ಭಜನೆ ಯನ್ನು ಕಲಿಯುದರ ಮೂಲಕ ನಾಡಿನ ಸಂಸ್ಕೃತಿಯನ್ನು ಉಳಿಸುವಲ್ಲಿ ಸಂದೇಹವಿಲ್ಲ. ಮಕ್ಕಳು ತಮ್ಮ ಪ್ರತಿಭೆಯನ್ನು ಉಳಿಸಿ ಬೆಳೆಸುವಲ್ಲಿ ನನ್ನ ಶುಭ ಹಾರೈಕೆ. ಇದರಲ್ಲಿ ಅವರ ಹೆತ್ತವರ ಕೊಡುಗೆ ಬಹಳವಿದ್ದು ಅವರಿಗೂ ಅಭಿನಂದನೆಗಳು.
ಬಿಲ್ಲವರ ಅಸೋಶಿಯೇಶನ್ ಮುಂಬಯಿ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಮಾತನಾಡುತ್ತಾ
ಚಿಣ್ಣರ ಬಿಂಬದ ಕಾರ್ಯಕ್ರಮದಲ್ಲಿ ನಾನು ಈ ಮೊದಲೂ ಬಾಗವಹಿಸಿದ್ದೇನೆ. ಚಿಣ್ಣರ ಬಿಂಬವು ಪ್ರತಿಭಾವಂತ ಮಕ್ಕಳ ಸಂಘಟನೆ. ಈ ಸಂಸ್ಥೆಯಲ್ಲಿ ಶಿಕ್ಷಕರು ನಿಜಕ್ಕೂ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಪ್ರಕಾಶ್ ಭಂಡಾರಿಯವರ ಚಿಣ್ಣರ ಮೇಲಿನ ಪ್ರೇಮ ನಿಜಕ್ಕೂ ಸ್ಲಾಘನೀಯ. ಕೆಲವೇ ವರ್ಷಗಳಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಲಿರುವ ಚಿಣ್ಣರ ಬಿಂಬಕ್ಕೆ ಹಾಗೂ ಪ್ರಕಾಶ್ ಭಂಡಾರಿ ಮತ್ತು ಅವರ ಬಳಗಕ್ಕೆ ಅಭಿನಂದನೆಗಳು.
ಚಿಣ್ಣರ ಬಿಂಬದ ಮಕ್ಕಳಿಂದ ಶಿಸ್ತುಭದ್ದವಾಗಿ ಭಜನಾ ಕಾರ್ಯಕ್ರಮ ನಡೆಯಿತು.
ಚಿಣ್ಣರ ಬಿಂಬದ ಸಂಚಾಲಕಿ ಗೀತಾ ಹೇರಳ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಕಾಶ್ ಭಂಡಾರಿ ಅವರು ಪೊಲೀಸ್ ಅಧಿಕಾರಿಯಾಗಿದ್ದಾಗ ಹಲವಾರು ಯುವಕರು ಕ್ರೈಂನಲ್ಲಿ ಪಾಲ್ಗೊಂಡಿದ್ದನ್ನು ನೋಡಿದ್ದಾರೆ ಅದನ್ನು ಕಂಡು ನಮ್ಮ ನಾಡಿನ ಮಕ್ಕಳು ಉತ್ತಮ ಪ್ರಜೆಗಳಾಗಬೇಕು ಸಂಸ್ಕಾರವಂತರಾಗಬೇಕು ಎಂಬ ನಿಟ್ಟಿನಲ್ಲಿ 50 ಮಕ್ಕಳಿಂದ ಸಂಸ್ಥೆಯನ್ನು ಕಟ್ಟಿದ್ದಾರೆ ಈಗ ಏಳು ಸಾವಿರ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಸಂಸ್ಕೃತಿಯನ್ನು ಸಂಸ್ಕಾರವನ್ನು ಪಡೆಯುತ್ತಿದ್ದಾರೆ ಎಂದು ನುಡಿದರು.
ಚಿಣ್ಣರ ಬಿಂಬ ಭವನ ನಿರ್ಮಾಣದ ಯೋಜನೆ: ಪ್ರಕಾಶ್ ಭಂಡಾರಿ,
ಚಿಣ್ಣರ ಬಿಂಬ ರೂವಾರಿ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಬಂಡಾರಿ ಅವರು ಮಾತನಾಡುತ್ತಾ ಕರ್ನಾಟಕ ಸರಕಾರ ಮಾಡುತ್ತಿರುವ ಕೆಲಸವನ್ನು ಮುಂಬೈ ನಗರದಲ್ಲಿ ಚಿಣ್ಣರ ಬಿಂಬ ಮಾಡುತ್ತಿದೆ ಆದರೆ ಕರ್ನಾಟಕ ಸರಕಾರ ಮಾತ್ರ ಯಾವುದೇ ರೀತಿಯ ಸರಕಾರ ಬೆಂಬಲವನ್ನು ನೀಡುತ್ತಿಲ್ಲ, ಮುಂದಿನ ಬಜೆಟ್ಟಿನಲ್ಲಾದರೂ ನಾವು ಮಾಡುವ ಕೆಲಸಕ್ಕೆ ಅನುದಾನ ನೀಡಬೇಕು. ದಾನಿಗಳೆಲ್ಲರೂ ಸಹಕಾರ ನೀಡುವರೆಂಬ ಭರವಸೆಯಿಂದ ಚಿಣ್ಣರ ಬಿಂಬ ಭವನ ನಿರ್ಮಾಣದ ಯೋಜನೆ ಇದೆ. ಅದು ಪೂರ್ಣಗೊಳ್ಳುವುದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ನುಡಿದರು.
ಸರಕಾರವು ಮಾಡಬೇಕಾದ ಕೆಲಸವನ್ನು ಮರಾಠಿ ಮಣ್ಣಲ್ಲಿ ಚಿಣ್ಣರ ಬಿಂಬವು ಮಾಡುತ್ತಿದೆ :
ಪ್ರವೀಣ್ ಭೋಜ ಶೆಟ್ಟಿ
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ
ಪ್ರವೀಣ್ ಭೋಜ ಶೆಟ್ಟಿ
ಮಕ್ಕಳಿಗೆ ಜೀವನದ ಬಗ್ಗೆ ಸೂಕ್ತ ವೇದಿಕೆಯನ್ನು ನೀಡುತ್ತಿರುವ ಏಕೈಕ ಸಂಸ್ಥೆ ಚಿಣ್ಣರ ಬಿಂಬ. ಮಕ್ಕಳನ್ನು ನಮ್ಮ ದೇಶದ ಸತ್ಪ್ರಜೆಯನ್ನಾಗಿಸುವಲ್ಲಿ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸರಕಾರವು ಮಾಡಬೇಕಾದ ಕೆಲಸವನ್ನು ಮರಾಠಿ ಮಣ್ಣಲ್ಲಿ ಚಿಣ್ಣರ ಬಿಂಬವು ಮಾಡುತ್ತಿದೆ. ನಾವೆಲ್ಲರೂ ಒಂದಾಗಿ ಈ ಸಂಸ್ಥೆಗೆ ಒಂದು ಜಾಗವನ್ನು ದೊರಕಿಸುವಲ್ಲಿ ಸಹಕರಿಸೋಣ. ಎಲ್ಲಾ ಮಕ್ಕಳ ಹೆತ್ತವರಿಗೆ ಅಭಿನಂದನೆಗಳು.
ಅತಿಥಿಗಳನ್ನು ಶ್ಲೋಕ ಸಾಲ್ಯಾನ್, ಆತ್ಮಿ ಶೆಟ್ಟಿ, ಯಜ್ನ ಶೆಟ್ಟಿ, ಶಾಕ್ಷಾತ್ ಶೆಟ್ಟಿ, ರಕ್ಷಿತ ಶೆಟ್ಟಿ ಮತ್ತು ಪ್ರತ್ಯುಶಾ ಶೆಟ್ಟಿ ಪರಿಚಯಿಸಿದರು. ಚಿಣ್ಣರ ಬಿಂಬ ಟ್ರಸ್ಟಿ ಡಾ. ಸುರೇಂದ್ರ ಕುಮಾರ್ ಹೆಗ್ಡೆಯವರು ಎಲ್ಲರನ್ನೂ ಸ್ವಾಗತಿಸಿದರು.
ವೇದಿಕೆಯಲ್ಲಿ ರಮೇಶ್ ರೈ, ಅಶೋಕ್ ಶೆಟ್ಟಿ, ಜಗದೀಶ್ ರಾವ್, ಮಂಜುಳಾ, ಆಶಾ ಪೂಜಾರಿ, ಸುಮಿತ್ರಾ ದೇವಾಡಿಗ, ಸವಿತ, ಆಶಾಲತಾ ಕೋಟಾರಿ, ವಿನಯಾ ಶೆಟ್ಟಿ, ವಿಜಯ ಕೋಟ್ಯಾನ್, ಜೈನ್ ರಾಜವರ್ಮ ಮೊದಲಾದವರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮವನ್ನು ಡಾ. ಪೂರ್ಣಿಮಾ ಶೆಟ್ಟಿ, ಪವಿತ್ರಾ ಮತ್ತು ಕೃಷ್ಣ ಉಡುಪ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಸ್ಪರ್ಧೆ, ನಾಟಕ, ಭಾಷಣ, ಯಕ್ಷಗಾನ ನಡೆಯಿತು.
ಚಿತ್ರ ವರದಿ : ದಿನೇಶ್ ಕುಲಾಲ್