ನಮ್ಮ ಬದುಕು ಗಿಡಮರಗಳಿಂದ ಅರಳಿದೆ ಹಿರಿಯರು ಮಕ್ಕಳಿಗೆ ಗಿಡಮರಗಳ ಅಗತ್ಯತೆ ಬಗ್ಗೆ ತಿಳಿಸಿದಲ್ಲಿ ಅವರ ಅತ್ಮಸ್ಥೆರ್ಯ ಹೆಚ್ಚುತ್ತದೆ ಎಂದು ಮಂಗಳೂರು ವಲಯಾ ಅರಣ್ಯಾಧಿಕಾರಿ ಪಿ ಶ್ರೀಧರ್ ನುಡಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ನಡೆದ ಸುರತ್ಕಲ್ ಬಂಟರ ಸಂಘದ ವತಿಯಿಂದ ಮಹತ್ವಾಕಾಂಕ್ಷೆ ಯೋಜನೆಯಾದ ಮನೆಗೊಂದು ಮರ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ ಕಾಲಘಟ್ಟದಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಸಂಧರ್ಭದಲ್ಲಿ ಗಿಡಮರಗಳನ್ನು ಹೆಚ್ಚು ಬೆಳೆಸುವುದು ಅತೀ ಅಗತ್ಯ ಇಲ್ಲವಾದಲ್ಲಿ ಮುಂದೆ ನಾವು ಸ್ವಚ್ಛ ಗಾಳಿ ಉಸಿರಾಡುವುದು ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಬಂಟರ ಸಂಘವು ಮನೆಗೊಂದು ಮರ ಕಾರ್ಯ ಕ್ರಮ ಹಮ್ಮಿಕೊಂಡದ್ದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ಮಾತನಾಡಿ ಪ್ರಸಕ್ತ ವರ್ಷದಲ್ಲಿ ಸುರತ್ಕಲ್ ಬಂಟರ ಸಂಘವು ಬೆಳ್ಳಿಹಬ್ಬ ಅಚರಿಸುತ್ತಿರುವ ಸಂದರ್ಭದಲ್ಲಿ ಸಂಘವು ಹಲವಾರು ಸಮಿತಿಗಳನ್ನು ಸಮಾಜಮುಖಿಯಾಗಿ ಕೆಲಸ ಮಾಡಲು ರಚಿಸಿದ್ದು ಅದರಲ್ಲಿ ಕೃಷಿ ಸಮಿತಿ ಮುಖಾಂತರ ಮಹತ್ವಾಕಾಂಕ್ಷೆ ಯೋಜನೆಯಾದ ಪ್ರತಿ ಸಂಘದ ಸದಸ್ಯರ ಮನೆಗೆ ಒಂದು ಗಿಡವನ್ನು ಕೊಟ್ಟು ಅ ಗಿಡವನ್ನು ಸದಸ್ಯರು ಮುಂದೆ ಮರವಾಗಿ ಬೆಳೆಸಿ ಪರಿಸರವನ್ನು ಸ್ವಚ್ಚವಾಗಿಡುವ ಕೆಲಸ ಬಂಟರ ಸಂಘ ಕೈಗೊಂಡಿದೆ ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವೆಂದರು. ಮುಖ್ಯ ಅತಿಥಿಗಳಾಗಿ ಸುರತ್ಕಲ್ ತೋಟಗಾರಿಕೆ ಇಲಾಖೆ ಅಧಿಕಾರಿ ಯೂಗೇಂದ್ರ, ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ, ಸಂಘದ ಜತೆ ಕಾರ್ಯ ದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಮೊದಲಾದವರು ಉಪಸ್ಥಿತರಿದ್ದರು. ಕೃಷಿ ಸಮಿತಿ ಸಂಚಾಲಕ ಪುಷ್ಪರಾಜ್ ಶೆಟ್ಟಿ ಮಧ್ಯ ಸ್ವಾಗತಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಉಪಾಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಕಾರ್ಯ ಕ್ರಮ ನಿರೂಪಿಸಿದರು ಇದೇ ಸಂದರ್ಭದಲ್ಲಿ ಸುಮಾರು 800 ಗಿಡಗಳನ್ನು ಸಂಘದ ಸದಸ್ಯರಿಗೆ ವಿತರಿಸಲಾಯಿತು.