ಅನ್ಯಾಯ್ ನಿವಾರಣ್ ನಿರ್ಮೂಲನ ಸೇವಾ ಸಮಿತಿ ಮತ್ತು ಗೋ ರಕ್ಷಾ ಫೌಂಡೇಶನ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೃಹನ್ಮುಂಬಯಿ ಮಲಬಾರ್ಹಿಲ್ ಅಲ್ಲಿನ ಮಹಾರಾಷ್ಟ್ರ ರಾಜಭವನದಲ್ಲಿ ಜನಹಿತ ಅನುಪಮ ಸೇವೆಗಾಗಿ ಸಮಾಜ ರತ್ನ ಸಮ್ಮಾನ 2021-2022 ಪುರಸ್ಕಾರ ಪ್ರದಾನ ಕಾರ್ಯಕ್ರಮ ಇಂದಿಲ್ಲಿ ಸೋಮವಾರ ಆಯೋಜಿಸಿತ್ತು.
ರಾಜ್ಯಪಾಲರ ಅಧಿಕೃತ ಕಾರ್ಯಾಲಯ ಸಮಲೋಚನಾ ಸಭಾಗೃಹದಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದ ಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಹೆಸರಾಂತ ತುಳು ಕನ್ನಡಿಗ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ ಇವರಿಗೆ ವಿಶೇಷವಾಗಿ ಕೊರೊನಾ ಸಂಧಿಗ್ಧ ಕಾಲದಲ್ಲಿ ಸಲ್ಲಿಸಿದ ಗಣನೀಯ ಸೇವೆ ಹಾಗೂ ರಾಷ್ಟ್ರೀಯ ಭಾವೈಕ್ಯತೆಗಾಗಿ ಸಮಾಜ ರತ್ನ ಸಮ್ಮಾನ 2021-2022 ಪುರಸ್ಕಾರ ಮತ್ತು ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಚೇತನ, ದೇಶ ಸೇವೆ, ಸಮಾಜ ಸೇವೆಯನ್ನಾಗಿಸಿ ಜನತಾ ಹಿತಚಿಂತಕರಾಗಿ ಕಾರ್ಯ ನಿರ್ವಾಹಿಸಿದ ತುಳು-ಕನ್ನಡಿಗ ಎರ್ಮಾಳ್ ಹರೀಶ್ ಶೆಟ್ಟಿ ಸೇರಿದಂತೆ ಸುಮಾರು 30 ಮಂದಿ ಸರ್ವೋತ್ಕೃಷ್ಟ ಸಮಾಜ ಸೇವಕರಿಗೆ ಸಮಾಜ ರತ್ನ ಸಮ್ಮಾನ ಪ್ರದಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ನ್ಯಾಯ್ ನಿವಾರಣ್ ನಿರ್ಮೂಲನ ಸೇವಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ರಾಜಬಾವು ಶೇಠ್, ಉಪಾಧ್ಯಕ್ಷ ಡಾ| ಪ್ರಮೋದ್ ಪಾಂಡೇ, ಸಂಘಟಕರಾದ ಶೈಲಜಾ ಮಲಿಕ್ ಮತ್ತು ಕಂಪೆರೆ ನೀತಾ ಬಾಜಪೈ ಉಪಸ್ಥಿತರಿದ್ದು ಜಿಎಸ್ಟಿ ಇದರ ಜಂಟಿ ಆಯುಕ್ತ ಪಿಯೂಷ್ ಶುಕ್ಲಾ ರಚಿತ ‘ದಿ ಲಾಕ್ಡೌನ್ ಸ್ಟೋರೀಸ್’ ಪುಸ್ತಕವನ್ನು ರಾಜ್ಯಪಾಲರು ಬಿಡುಗಡೆ ಮಾಡಿ ಶುಭಾರೈಸಿದರು.
ಎರ್ಮಾಳ್ ಹರೀಶ್ ಶೆಟ್ಟಿ: ಮುಂಬಯಿ ಮಹಾನಗರದಾದ್ಯಂತ ಎರ್ಮಾಳ್ ಹರೀಶ್ ಎಂದೇ ಪರಿಚಿತರಾದ ಹರೀಶ್ ಮೂಲತಃ ಕರ್ನಾಟಕ ಕರಾವಳಿಯ ಉಡುಪಿ ಎರ್ಮಾಳ್ನ ಅಂಬೋಡಿ ಕಲಾ ಮನೆಯವರಾಗಿದ್ದಾರೆ. ಏಳನೇ ತರಗತಿಯವರೆಗೆ ಅದಮಾರು ಶಾಲೆಯಲ್ಲಿ ಓದಿ ಬಳಿಕ ಮುಂಬಯಿಯಲ್ಲಿ ಶಿಕ್ಷಣ ಪಡೆದಿರುವುದು. ಮಹಾನಗರದಲ್ಲಿ ಮಧ್ಯಂತರದಲ್ಲಿ ನಿರ್ಲಾನ್ ಕಂಪೆನಿಯಲ್ಲಿ ಆರು ವರ್ಷ ದುಡಿದಿದ್ದರೂ ಆರಂಭದಿಂದಲೇ ಹೋಟೇಲ್ನಲ್ಲಿ ಪಳಗಿದ್ದ ಕಾರಣ ಮತ್ತೆ ಈ ಉದ್ಯಮದಲ್ಲೇ ತಲ್ಲೀನರಾದರು.
ಲಿಂಕ್ ವೀವ್ ಫೈನ್ ಡೈನ್ ಹೋಟೇಲ್ನ ಪ್ರಧಾನ ಸಂಸ್ಥೆಯಾದ ಕ್ರೀಷ್ವಿ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಮಡಾಯ್ ಲ್ಯಾಂಡ್ನಲ್ಲಿನ ಮಂತ್ರ ರೆಸಿಡೆನ್ಸಿ ಮಾಲೀಕರಾಗಿರುವರು. ಸಮಾಜ ಸೇವೆಯಲ್ಲಿ ಸದಾ ಕಾರ್ಯಶೀಲರಾಗಿರುವ ಇವರು ತೆರೆಯ ಮರೆಯಲ್ಲೇ ಇದ್ದು ತಮ್ಮ ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಕಳೆದ ಅನೇಕ ದಶಕಗಳಿಂದ ಮುಂಬಯಿಯಲ್ಲಿದ್ದು ಓರ್ವ ಉದ್ಯಮಿ, ಸಮಾಜ ಸೇವಕರಾಗಿದ್ದರೂ ವರ್ಷಂಪ್ರತೀ ತವರೂರ ಕಾಪುನಲ್ಲಿ ಕೃಷಿ ಮಾಡಿ ಹಲವಾರು ಮಂದಿಗೆ ಕೆಲಸವೂ, ಕಳಸೆ ತುಂಬಾ ಭತ್ತವನ್ನೂ ಬೆಳೆಸಿ ಸಂತಸ ಪಡುತ್ತಿರುವ ಸಹೃದಯಿ. ಬಂಟರ ಸಂಘ ಮುಂಬಯಿ ಇದರ ಬೋರಿವಿಲಿ ಶೈಕ್ಷಣಿಕ ಯೋಜನಾ ಸಮಿತಿ ಉಪಾಧ್ಯಕ್ಷ, ಉತ್ತರ ಮುಂಬಯಿ ಜಿಲ್ಲಾ ಭಾರತೀಯ ಜನತಾ ಪಕ್ಷ (ಬಿಜೆಪಿ) ಉಪಾಧ್ಯಕ್ಷ, ಆಗಿದ್ದು ಮುಂಬಯಿಯಾದ್ಯಾಂತ ಎರ್ಮಾಳ್ ಹರೀಶ್ ಎಂದೇ ಪ್ರಸಿದ್ಧರು.
ಚಿತ್ರ, ವರದಿ : ರೋನ್ಸ್ ಬಂಟ್ವಾಳ್