ಪುಣೆಯಲ್ಲಿ ತುಳು ಕನ್ನಡಿಗರ ನೂತನ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ “ತುಳುನಾಡ ಫೌಂಡೇಶನ್” ಅಸ್ತಿತ್ವಕ್ಕೆ ಬಂದಿದೆ. ಡಿಸೆಂಬರ್ 16ರಂದು ದಿ. ಡಾ. ಶಾಮರಾವ್ ಕಲ್ಮಾಡಿ ಕನ್ನಡ ಮಾಧ್ಯಮ ಶಾಲೆಯ ದಿ. ಗುಂಡೂರಾಜ್ ಎಂ ಶೆಟ್ಟಿ ಸಭಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಂಸ್ಥೆಯನ್ನು ಅನಾವರಣಗೊಳಿಸಲಾಯಿತು. ನೂತನ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ನ್ಯಾಯವಾದಿ ರೋಹನ್ ಪುರುಷೋತ್ತಮ ಶೆಟ್ಟಿ ಅವರನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು. ಪೂರ್ವಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಪುಣೆ ಬಂಟರ ಸಂಘದ ಜೊತೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ನಿಟ್ಟೆ ವಹಿಸಿದ್ದರು.
ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಹಾಗೂ ಖ್ಯಾತ ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿ, ಪುಣೆ ಬಂಟರ ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ತಾರಾನಾಥ ರೈ ಮೇಗಿನ ಗುತ್ತು, ಬಿಜೆಪಿ ಎಜುಕೇಶನ್ ಸೆಲ್ ನ ಪುಣೆ ನಗರ ಉಪಾಧ್ಯಕ್ಷೆ ವಿಂದಿ ಪೂಜಾರಿ, ಕನ್ನಡ ಮಾಧ್ಯಮ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆ, ಗೋವರ್ಧನ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆಯರಾದ ಲತಾ ರಘುನಾಥ ಗೌಡ, ಪ್ರೇಮಾ ಪುರುಷೋತ್ತಮ ಶೆಟ್ಟಿ, ಉಮಾ ಎಸ್ ಶೆಟ್ಟಿ, ನಯನಾ ಸಿ ಶೆಟ್ಟಿ ಉಪಸ್ಥಿತರಿದ್ದು ನೂತನ ಸಂಸ್ಥೆಯ ನಾಮಫಲಕವನ್ನು ಅನಾವರಣಗೊಳಿಸಿದರು. ಮೊದಲಿಗೆ ಕನ್ನಡ ಮಾಧ್ಯಮ ಹೈ ಸ್ಕೂಲಿನ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ಚಂದ್ರಕಾಂತ ಹಾರಕೂಡೆಯವರು ಸ್ವಾಗತಿಸಿ ಸಮಿತಿಯ ಸ್ಥಾಪನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿದ್ದ ಗಣ್ಯರು ನೂತನ ಸಂಸ್ಥೆಗೆ ಶುಭವನ್ನು ಹಾರೈಸಿದರು.
ಈ ಸಂದರ್ಭ ನೂತನ ಸಂಸ್ಥೆಯ ವತಿಯಿಂದ ಕನ್ನಡ ಮಾಧ್ಯಮ ಹೈಸ್ಕೂಲಿನ ಸುಮಾರು 150 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಗಳನ್ನು ವಿತರಿಸಲಾಯಿತು ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲಾಯಿತು. ಸಭೆಯಲ್ಲಿ ಕನ್ನಡ ಮಾಧ್ಯಮ ಹೈಸ್ಕೂಲಿನ ಶಿಕ್ಷಕ ವೃಂದ, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಮಿತಿಯ ಸದಸ್ಯರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭವನ್ನು ಹಾರೈಸಿದರು. ಪತ್ರಕರ್ತ ಕಿರಣ್ ಬಿ ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಸದಸ್ಯರಾದ ಸುಜಯ್ ಶೆಟ್ಟಿ, ಅಕ್ಷಿತ್ ಸಾಲಿಯಾನ್, ವಿನಿತ್ ಪೂಜಾರಿ, ರವಿರಾಜ್ ಶೆಟ್ಟಿ, ಶಶಿಧರ ಕೋಟ್ಯಾನ್, ಸೂರಜ್ ಬಂಗೇರ, ಮಲ್ಲಣ್ಣ ಲಿಂಗಾಯತ್, ಪ್ರಸಾದ್ ಪೂಜಾರಿ, ಕೌಶಿಕ್ ಶೆಟ್ಟಿ, ರೋಹನ್ ಕೋಟ್ಯಾನ್, ಪೂಜಾ ಜಾಗೀರದಾರ್, ಸ್ನೇಹ ಶೆಟ್ಟಿ, ಹೃತಿಕ್ ಶೆಟ್ಟಿ, ಪ್ರತೀಕ್ ಪೂಜಾರಿ, ಶಿವಪ್ರಸಾದ್ ಪೂಜಾರಿ, ವಿನೀತ್ ಗೌಡ, ವಿಶ್ವನಾಥ್ ಚರಣತಿಮಠ, ವೀಕ್ಷಿತ್ ಕುಲಾಲ್, ಅದೀಪ್ ಶೆಟ್ಟಿ, ಶಶಿಕಾಂತ್ ಶೆಟ್ಟಿ ಮತ್ತು ನಿತಿನ್ ಬಾಲೆರಾವ್ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ, ವರದಿ : ಕಿರಣ್ ಬಿ ರೈ ಕರ್ನೂರು