ಕನ್ನಡ ಸೇವಾ ಸಂಘದ ಕಟ್ಟಡದ ಎದುರಿನ ಮಾರ್ಗದ ಚೌಕಕ್ಕೆ ಪೇಜಾವರ ಶ್ರೀಗಳ ಹೆಸರನ್ನು ಮುಂಬಯಿ ನಗರ ಪಾಲಿಕೆಯ ನಗರ ಸೇವಕಿ ಶ್ರೀಮತಿ ಅಶ್ವಿನಿ ಆಶೋಕ್ ಮಾಟೆಕರ್ ಇವರ ಶಿಫಾರಸ್ಸಿನಂತೆ ಅನಾವರಣ ಗೊಳಿಸಿತು.
ಚೌಕ ಉದ್ಘಾಟನೆಯನ್ನು ಕನ್ನಡ ಸೇವಾ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಆರ್ ಜಿ ಶೆಟ್ಟಿಯವರು ತೆಂಗಿನ ಕಾಯಿ ಹೊಡೆದು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಗರ ಸೇವಕಿಯ ಪತಿ ಅಶೋಕ್ ಮಾಟೆಕರ್ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ನಾಣಯರ ಗರಡಿ ಪ್ರಭಾಕರ ಶೆಟ್ಟಿ, ಕಯ್ಯಾರ ಗುತ್ತು ರಮೇಶ್ ಡಿ ರೈ, ಸುಧಾಕರ ಜಿ ಪೂಜಾರಿ, ಕಾರ್ಯದರ್ಶಿ ನಾಗರಾಜ ಗುರುಪುರ, ಕೋಶಾಧಿಕಾರಿ ಸಂದೇಶ ಶೆಟ್ಟಿ ಬೆಳ್ಳೆ, ರಾಜೇಶ್ ಆರ್ ಪೂಜಾರಿ, ಮಹಿಳಾ ಕಾರ್ಯಧ್ಯಕ್ಷೆ ಶ್ರೀಮತಿ ಶೋಭಾ ರಮೇಶ್ ರೈ, ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷೆ ಪ್ರಶಾಂತಿ ಡಿ ಶೆಟ್ಟಿ, ಮಹಿಳಾ ವಿಭಾಗದ ಸಲಹೆಗರಾದ ಶ್ರೀಮತಿ ಶೈಲ ಎಸ್ ಶೆಟ್ಟಿ. ಶ್ರೀಮತಿ ಜ್ಯೋತಿ ಆರ್ ಜಿ ಶೆಟ್ಟಿ, ಮಹಿಳಾ ಕಾರ್ಯದರ್ಶಿ ಶ್ರೀಮತಿ ರೇಖಾ ಸಿ ಶೆಟ್ಟಿ, ಸುಗುಣ ಕೆ ಶೆಟ್ಟಿ, ಉಷಾ ಆರ್ ಸಾಲಿಯಾನ್, ಸರೋಜಿನಿ ಪೂಜಾರಿ, ಶ್ರೀಮತಿ ಸವಿತಾ ಕೆ ಶೆಟ್ಟಿ, ಪಣಿಯೂರು ಪ್ರಭಾಕರ್ ಶೆಟ್ಟಿ ಹಾಗೂ ಕನ್ನಡ ಸೇವಾ ಸಂಘ ಪೊವಾಯಿಯ ಸದಸ್ಯರು ಪರಿಸರದ ಜನರು ಉಪಸ್ಥಿತರಿದ್ದರು. ಪೇಜಾವರ ಶ್ರೀಗಳ ಹೆಸರನ್ನು ಇಡುವಂತೆ ಕನ್ನಡ ಸಂಘದ ಮಾಜಿ ಅಧ್ಯಕ್ಷರು ರಮೇಶ್ ಡಿ ರೈ ಹಾಗೂ ಆಡಳಿತ ಸಮಿತಿ ಸದಸ್ಯರಾದ ಪೇತ್ರಿ ವಿಶ್ವನಾಥ ಶೆಟ್ಟಿಯವರು ನಗರ ಸೇವಕಿ ಅಶ್ವಿನಿ ಮಾಟೆಕರ್ ಇವರಿಗೆ ಮನವಿ ಸಲ್ಲಿಸಿದ್ದರು
