ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿ ತನ್ನದೇ ಆದ ವಿಶಿಷ್ಟ, ಶುಚಿ-ರುಚಿಯಾದ ಊಟ ಉಪಹಾರದ ಜೊತೆ, ದೇಶಪ್ರೇಮದ ಬೀಜ ಬಿತ್ತಿರುವ ಶ್ರೀ ಪಂಜುರ್ಲಿ ಎಲ್ಲರ ಮನೆಮಾತಾಗಿದೆ. ಇದೀಗ ಶ್ರೀ ಪಂಜುರ್ಲಿ ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆಗೆ ಹೆಜ್ಜೆಯಿಡುತ್ತಿದೆ. ದಾವಣಗೆರೆಯ ಗ್ರಾಹಕರಿಗೆ ತನ್ನದೇ ಆದ ವಿಶಿಷ್ಟವಾದ ಊಟ, ಉಪಹಾರದ ಜೊತೆ ದಾವಣಗೆರೆ ಜನತೆಗೆ ಒಂದು ಸುಂದರ, ವಿನೂತನವಾದ ಶ್ರೀ ಲೀಲಾವತಿ ಕಲ್ಯಾಣ ಮಂಟಪ ಅನ್ನದಾತ, ಸಮಾಜಸೇವಕ ರಾಜೇಂದ್ರ ವಿ ಶೆಟ್ಟಿ ಸಾರಥ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಫೆಬ್ರವರಿ 23ರಂದು ಬುಧವಾರ ಬೆಳಿಗ್ಗೆ 9.30 ಕ್ಕೆ ಸತ್ಯನಾರಾಯಣ ಪೂಜೆಯೊಂದಿಗೆ ಆರಂಭಗೊಳ್ಳಲಿದೆ. ಶ್ರೀ ಪಂಜುರ್ಲಿ ಗ್ರೂಪ್ ನ ಮಾಲಕರಾದ ರಾಜೇಂದ್ರ ಶೆಟ್ಟಿ ಅವರ ಶ್ರಮ ನಿಜವಾಗಲೂ ಮೆಚ್ಚುವಂತದ್ದೇ, ತಾನು ಬೆಳೆದು ತಮ್ಮವರನ್ನು ಬೆಳೆಸಬೇಕೆಂಬ ಅವರ ದೊಡ್ಡ ಗುಣ, ಅವರನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯುತ್ತಿದೆ. ಇದೆ 23ಕ್ಕೆ ಇದನ್ನೇ ಆಮಂತ್ರಣ ಎಂದು ಭಾವಿಸಿ, ಹೆಚ್ಚಿನ ಸಂಖ್ಯೆಯಲ್ಲಿ ದಾವಣಗೆರೆಗೆ ಆಗಮಿಸಿ, ಹೋಟೆಲ್ ಶ್ರೀ ಪಂಜುರ್ಲಿ ಪ್ಯಾಲೆಸ್ ಹಾಗೂ ಶ್ರೀ ಲೀಲಾವತಿ ಕಲ್ಯಾಣ ಮಂಟಪಕ್ಕೆ ಶುಭಾಶಯ ಕೋರಲು ಸಮಸ್ತ ಬಂಟ ಸಮಾಜಕ್ಕೆ ಆದರದ ಸ್ವಾಗತವನ್ನು ಕೋರಿದ್ದಾರೆ.