ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊAದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಮಾಣಿಕ್ಯ ಪ್ರಶಸ್ತಿ ವಿಜೇತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು ೨೦೨೬-೨೭ನೇ ಸಾಲಿನ ವಿತ್ತೀಯ ವರ್ಷದ ಮೊದಲನೇ ತ್ರೈಮಾಸಿಕ ಅವಧಿ ದಿನಾಂಕ ೩೦.೦೬.೨೦೨೬ಕ್ಕೆ ರೂ.೭೨೧ ಕೋಟಿ ಠೇವಣಿ, ರೂ.೬೪೧ ಕೋಟಿ ಸಾಲ, ರೂ.೧೩೬೨ ಕೋಟಿ (ಠೇವಣಿ ಮತ್ತು ಸಾಲ) ವ್ಯವಹಾರವನ್ನು ಹೊಂದಿದೆ. ೨೦೨೫ನೇ ಜೂನ್ ೩೦ಕ್ಕೆ ಹೋಲಿಸುವಾಗ ಠೇವಣಾತಿಯಲ್ಲಿ ರೂ.೧೧೫ ಕೋಟಿ ೧೯% ವೃದ್ಧಿ, ಹೊರಬಾಕಿ ಸಾಲದಲ್ಲಿ ರೂ.೧೨೦ ಕೋಟಿ ಹೆಚ್ಚಳ ೨೩% ವೃದ್ಧಿಯೊಂದಿಗೆ, ಒಟ್ಟು ವ್ಯವಹಾರದಲ್ಲಿ ರೂ.೨೩೫ ಕೋಟಿ ವೃದ್ಧಿಯಿಂದ ೨೧% ಹೆಚ್ಚಳವನ್ನುಸಾಧಿಸಿದೆ.


೩೦.೦೬.೨೦೨೬ಕ್ಕೆ ನಿವ್ವಳ ಲಾಭವು ರೂ.೩.೭೪ ಕೋಟಿ ದಾಖಲಿಸಿದ್ದು, ಇದು ೨೦೨೫ನೇ ಜೂನ್ ೩೦ಕ್ಕೆ ಹೋಲಿಸುವಾಗ ರೂ.೧.೧೦ ಕೋಟಿ ಹೆಚ್ಚಳವಾಗಿ ೪೨% ದ್ಧಿಯಾಗಿರುತ್ತದೆ. ಸ್ಥಾಪನೆಯಾದನಿಂದ ನಿರAತರ ಡಿವಿಡೆಂಡನ್ನು ನೀಡುತ್ತಾ ಬಂದ ಸೊಸೈಟಿ, ೨೦೨೪-೨೫ನೇ ಸಾಲಿಗೆ ಶೇ.೨೫ ಡಿವಿಡೆಂಡನ್ನು ನೀಡಿದ್ದು, ಕಳೆದ ಏಳು ವರ್ಷಗಳಿಂದ ಗರಿಷ್ಟ ೨೫% ಡಿವಿಡೆಂಡನ್ನು ನೀಡುತ್ತಿದೆ. ಸಂಘದ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ ೧೮ ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿದ್ದು, ಸಾಲ ಮರುಪಾವತಿಯು ಉತ್ತಮವಾಗಿರುತ್ತದೆ. ೩೧.೦೩.೨೦೨೭ಕ್ಕೆ ಒಟ್ಟು ವ್ಯವಹಾರದ ಗುರಿ ರೂ.೧೫೧೫ ಕೋಟಿಯಾಗಿದ್ದು, ಅದನ್ನು ತಲುಪಲು ಸರ್ವ ಪ್ರಯತ್ನ ಮಾಡಲಾಗಿದೆ ಹಾಗೂ ಸಂಘದ ನಿರಂತರ ಪ್ರಗತಿಗೆ ಸಹಕರಿಸುತ್ತಿರುವ ಸಂಘದ ಎಲ್ಲಾ ಆಡಳಿತ ಮಂಡಳಿ
ಸದಸ್ಯರುಗಳಿಗೆ, ಶಾಖಾ ಸಲಹಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ, ಸಂಘದ ಸರ್ವ ಸದಸ್ಯ ಬಾಂಧವರಿಗೆ ಮತ್ತು ಹಿತೈಷಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




















































































































