ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಂತ ಪ್ಯಾಟ್ರಿಕ್ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಪೋಡುಂಬ ಆಯ್ಕೆಯಾಗಿದ್ದಾರೆ. ಸಂದೀಪ್ ಶೆಟ್ಟಿಯವರು ಸಿದ್ದಕಟ್ಟೆ ಕೊಡಂಗೆ ವೀರ ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿ ಮತ್ತು ಸಿದ್ದಕಟ್ಟೆ ವಲಯ ಬಂಟರ ಸಂಘದಲ್ಲಿ ಅಧ್ಯಕ್ಷರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.



ಕಾರ್ಯದರ್ಶಿಯಾಗಿ ರತೀಶ್ ಶೆಟ್ಟಿ ಕೊನೆರಬೆಟ್ಟು ಮತ್ತು ಕೋಶಾಧಿಕಾರಿಯಾಗಿ ಶಾಲಾ ಮುಖ್ಯ ಶಿಕ್ಷಕಿ ರೀಟಾ ಆಯ್ಕೆಯಾಗಿದ್ದಾರೆ. ಶತಮಾನೋತ್ಸವ ಆಚರಣೆ ಯಶಸ್ವಿಯಾಗಲು ವಿವಿಧ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.




















































































































