ಸೂರಿ ಮಾರ್ನಾಡ್ ಎಂದೇ ಖ್ಯಾತರಾಗಿರುವ ಪಡು ಮಾರ್ನಾಡಿನ ಸುರೇಂದ್ರ ಶೆಟ್ಟಿ ಮಾರ್ನಾಡುರವರು ‘ಕರ್ನಾಟಕ ಸಂಘ ಅಂಧೇರಿ’ ಇವರು ನೀಡುವ ‘ಶ್ರೇಷ್ಠ ಹೊರನಾಡ ಕನ್ನಡಿಗ’ ಪ್ರಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿದ್ದಾರೆ. ಅಮನೊಟ್ಟು ಮಹಾವೀರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಜೈನ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪಡೆದ ಬಳಿಕ ಮುಂಬಯಿಯತ್ತ ತೆರಳಿದ ಅವರು ಉಳಿದ ವಿದ್ಯಾಭ್ಯಾಸವನ್ನು ಮುಂಬಯಿಯಲ್ಲಿ ಪೂರೈಸಿದರು. ಕಲಾವಿದರಾಗಿ, ನಿರ್ದೇಶಕರಾಗಿ, ಕಲಾ ಪೋಷಕರಾಗಿ ಸಾಕಷ್ಟು ಕಲಾ ಕಾರ್ಯಕ್ರಮಗಳನ್ನು ಸಂಘಟಿಸಿರುವ ಸೂರಿ ಮಾರ್ನಾಡು ಅವರ ಕಲಾ ಸೇವೆಯನ್ನು ಗುರುತಿಸಿ ಅಂಧೇರಿಯ ಕರ್ನಾಟಕ ಸಂಘವು ಈ ಪ್ರಶಸ್ತಿಗೆ ಆಯ್ಕೆ ಮಾಡಿತ್ತು.


ಈ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಪಡು ಮಾರ್ನಾಡು ಮೂಡುಬಿದಿರೆಗೆ ಕೀರ್ತಿ ತಂದಿರುವ ಸೂರಿ ಮಾರ್ನಾಡು ಅವರಿಗೆ ಅವರ ಸನ್ಮಿತ್ರ ರಮೇಶ್ ಶೆಟ್ಟಿ ಪಡು ಮಾರ್ನಾಡು ಅವರು ಅಭಿನಂದನೆ ಸಲ್ಲಿಸಿದ್ದಾರೆ.





















































































































