
ಶಾಲಾ ಶುಲ್ಕ ಭರಿಸಲು ಅಸಾಧ್ಯವಾದ ಪರಿವಾರದ ಬಾಲಕಿಯ ಶಾಲಾ ಶುಲ್ಕವಾದ 39,000 ರೂಪಾಯಿಗಳನ್ನು ಭರಿಸಲು ಶಿವಾಯ ಫೌಂಡೇಶನ್ ವತಿಯಿಂದ ಸಹಾಯ ಮಾಡಲಾಯಿತು. ಈ ಹೆಣ್ಣು ಮಗುವಿನ ತಂದೆ ಕಿಡ್ನಿ ಸಮಸ್ಯೆಯಿಂದ ಬಳಳುತ್ತಿದ್ದು, ದೀರ್ಘ ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕ ಸಹಾಯಕ್ಕಾಗಿ ಶಿವಾಯ ಫೌಂಡೇಶನ್ ನಿಂದ ಸಹಾಯ ಯಾಚಿಸಿದ್ದರು. ಈ ಸಂದರ್ಭದಲ್ಲಿ ಶಿವಾಯ ಫೌಂಡೇಶನ್ ನ ಗೌರವಾಧ್ಯಕ್ಷರಾದ ನವೀನ್ ಚಂದ್ರ ಜೆ ಶೆಟ್ಟಿ ಪಡುಬಿದ್ರಿ, ಎಸ್.ಇ.ಝಡ್ ಇದರ ಮುಖ್ಯಸ್ಥರಾದ ಅಶೋಕ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಪಲಿಮಾರು, ಹರೀಶ್ ಕೋಟ್ಯಾನ್ ಪಡು ಇನ್ನ, ರವಿ ಶೆಟ್ಟಿ ಪಾದೆಬೆಟ್ಟು, ಸ್ಮೈಲ್ ಫೋಟೋಗ್ರಾಫಿಯ ಮಹೇಶ್ ದೇವಾಡಿಗ ಉಪಸ್ಥಿತರಿದ್ದರು.































































































































