

ಮಂಗಳೂರು ನಗರದಲ್ಲಿ ಈಗ ಹೊಸದೊಂದು ಅಪಾಯ ತಲೆ ಎತ್ತಿದೆ. Instagram Follow ಮಾಡಿ, “ಪ್ರಾಂಕ್ ಮಾಡ್ತೀವಿ”, “ಜುಜುಬಿ ಗಿಫ್ಟ್ ಕೊಡ್ತೀವಿ” ಎಂಬ ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಕೆಲ ಯುವಕರ ತಂಡಗಳು ಬೀದಿಗಿಳಿದಿವೆ. ಇದು ಕೇವಲ ಮೋಜಲ್ಲ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುವ ಟ್ರ್ಯಾಪ್. ರೈಲ್ವೆ ಸ್ಟೇಷನ್, ಶಾಪಿಂಗ್ ಮಾಲ್, ಕಾಲೇಜು ರಸ್ತೆ, ಮಾರ್ಕೆಟ್ ಇವೇ ಇವರ ಅಡ್ಡಾಗಳು. ಕೈಯಲ್ಲಿ ಹಣದ ಕಂತೆ, ಇನ್ನೊಂದು ಕೈಯಲ್ಲಿ ಗಿಫ್ಟ್ ಬ್ಯಾಗ್ ಹಿಡಿದುಕೊಂಡು ಯುವತಿಯರ ಗುಂಪನ್ನು ಅಡ್ಡಗಟ್ಟುತ್ತಾರೆ. “ಒಂದು Question ಕೇಳ್ತೀವಿ”, “Follow ಮಾಡಿದ್ರೆ ಗಿಫ್ಟ್” ಅಂತ ಮಾತು ಶುರು ಮಾಡುತ್ತಾರೆ. ನಂಬರ್ ಕೇಳುತ್ತಾರೆ, ಸ್ನೇಹ ಬೆಳೆಸಲು ಯತ್ನಿಸುತ್ತಾರೆ.
ಕೆಲವು ಯೂಟ್ಯೂಬರ್ಗಳು “ವೈರಲ್” ಆಗುವ ಹುಚ್ಚಿಗೆ ಬಿದ್ದು ಇದನ್ನೇ ಕಂಟೆಂಟ್ ಮಾಡಿಕೊಂಡಿದ್ದಾರೆ. ಹೆಣ್ಣುಮಕ್ಕಳ ಅನುಮತಿ ಇಲ್ಲದೇ ವಿಡಿಯೋ ಮಾಡಿ, ಅವರ ಮುಜುಗರದ ಕ್ಷಣಗಳನ್ನು ಲಕ್ಷ ಲೈಕ್ಸ್ಗಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾಸರಗೋಡು, ಉಪ್ಪಳ ಭಾಗದಿಂದಲೂ ಬಂದು ಈ ಕೆಲಸ ಮಾಡುತ್ತಿರುವ ಬಗ್ಗೆ ಸ್ಥಳೀಯರ ದೂರುಗಳಿವೆ.


ಟ್ರ್ಯಾಪ್ನ ಮೊದಲ ಹೆಜ್ಜೆ : ಇಂದು ಗಿಫ್ಟ್, ನಾಳೆ ಸ್ನೇಹ, ನಾಡಿದ್ದು ಬ್ಲ್ಯಾಕ್ಮೇಲ್. 2025 ಜುಲೈನಲ್ಲಿ ಮಂಗಳೂರಿನ ಮೂಲ್ಕಿಯಲ್ಲಿ Instagram ಸ್ನೇಹದ ಹೆಸರಿನಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಕಿರುಕುಳ ನೀಡಿದ ಘಟನೆ ನಡೆದಿದೆ. ಗುರುಪುರದಲ್ಲಿ 7 ಜನರ ತಂಡ ಇದೇ ರೀತಿ ಯುವತಿಯನ್ನು ಬಳಸಿಕೊಂಡ ಪ್ರಕರಣ ದಾಖಲಾಗಿದೆ.
Views, Followersಗಾಗಿ ಕೆಲವರು ಯಾವ ಮಟ್ಟಕ್ಕೂ ಇಳಿಯುತ್ತಾರೆ. ಬೆಂಗಳೂರು ಮೆಟ್ರೋದಲ್ಲಿ ಮಹಿಳೆಯರ ವಿಡಿಯೋ ಕದ್ದುಮುಚ್ಚಿ ತೆಗೆದು ಅಪ್ಲೋಡ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದರು.
ಒಮ್ಮೆ ನಂಬರ್ ಕೊಟ್ಟರೆ, ಒಮ್ಮೆ ಫೋಟೋ ವಿಡಿಯೋ ಸಿಕ್ಕಿಹಾಕಿಕೊಂಡರೆ ಮತ್ತೆ ವಾಪಸ್ ಬರುವುದು ಕಷ್ಟ. ಪಾಪದ ಹೆಣ್ಣುಮಕ್ಕಳು ಜೀವನವನ್ನೇ ಕಳೆದುಕೊಳ್ಳುತ್ತಾರೆ. ಅಪರಿಚಿತರು ಗಿಫ್ಟ್ ಕೊಡ್ತೀವಿ, Follow ಮಾಡಿ ಅಂದರೆ ಸ್ಪಷ್ಟವಾಗಿ “ಬೇಡ” ಅನ್ನಿ. ನಂಬರ್ ಕೊಡಬೇಡಿ. ಒಬ್ಬರೇ ಇರುವಾಗ ಇಂತಹವರನ್ನು Avoid ಮಾಡಿ. ಅನುಮತಿ ಇಲ್ಲದೇ ವಿಡಿಯೋ ಮಾಡಿದರೆ ಜೋರಾಗಿ ಪ್ರಶ್ನಿಸಿ.
ನಿಮ್ಮ ಹೆಣ್ಣು ಮಕ್ಕಳಿಗೆ ಸೋಶಿಯಲ್ ಮೀಡಿಯಾ ಅಪಾಯಗಳ ಬಗ್ಗೆ ತಿಳಿಸಿ. ಅಪರಿಚಿತರ Friend Request, Online ಸ್ನೇಹ, ಗಿಫ್ಟ್ ಆಮಿಷ ಇವುಗಳಿಂದ ದೂರ ಇರಲು ಹೇಳಿ. ಮಕ್ಕಳ ಫೋನ್, ಚಟುವಟಿಕೆಗಳ ಮೇಲೆ ನಿಗಾ ಇಡಿ.
ಮಾಲ್, ಕಾಲೇಜು, ಬಸ್ ಸ್ಟ್ಯಾಂಡ್ನಲ್ಲಿ ಇಂತಹ ಪುಂಡಾಟಿಕೆ ಕಂಡರೆ ಸುಮ್ಮನೇ ಇರಬೇಡಿ. ತಕ್ಷಣ ಸೆಕ್ಯುರಿಟಿ ಅಥವಾ 112ಗೆ ಕರೆ ಮಾಡಿ. ನಾವು ಎಚ್ಚೆತ್ತುಕೊಂಡು ಮುಂದೆ ಬರುವ ಅನಾಹುತ ತಪ್ಪಿಸೋಣ.
ಮಂಗಳೂರಿನ ಸಂಸ್ಕೃತಿ, ಹೆಣ್ಣುಮಕ್ಕಳ ಘನತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. 100 ರೂಪಾಯಿ ಗಿಫ್ಟ್ಗೆ ಜೀವನ ಹಾಳು ಮಾಡಿಕೊಳ್ಳಬೇಡಿ. ಜಾಗೃತರಾಗಿರಿ, ಸುರಕ್ಷಿತರಾಗಿರಿ.
ಒಂದು ಅನಾಹುತ ಆದ ಮೇಲೆ ಅನುಭವಿಸಿ ಪ್ರಯೋಜನ ಇಲ್ಲ. ಈಗಲೇ ಎಚ್ಚೆತ್ತುಕೊಳ್ಳೋಣ.





























































































































