
ಬಂಟರ ಸಂಘ ಮುಂಬಯಿ ಪ್ರತಿ ವರ್ಷ ಏಪ್ರಿಲ್ 14 ರಂದು ಬಿಸು ಪರ್ಬ ಆಚರಣೆಯ ದಿನದಂದು ವಿಶ್ವ ಬಂಟರ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಪ್ರತೀ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿಕೊಂಡು ಬರುತ್ತಿದೆ. ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಅತ್ಯುತ್ತಮ ಸೇವೆಗೆ ರೈ ಸುಮತಿ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ| ಅರುಣೋದಯ ಎಸ್ ರೈ ಹಾಗೂ 2025 ರ ಸಾಲಿನ ಮಿಸೆಸ್ ಇಂಡಿಯಾ ಕಿರೀಟ ಹೊತ್ತ ಡಾ. ರಷ್ಮಾ ಮೋಹಿತ್ ಶೆಟ್ಟಿಯವರು 2026 ರ ಸಾಲಿನ ಬೆಸ್ಟ್ ಬಂಟ್ ಅಚೀವರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾರ್ಯಕ್ರಮವು ಏಪ್ರಿಲ್ 14 ರಂದು ಕುರ್ಲಾ ಬಂಟರ ಭವನದಲ್ಲಿ ನಡೆಯಲಿದೆ.



























































































































