ಮುಂಬಯಿ: ಜ.6: ಕರ್ನಾಟಕದ ಜಾನಪದ ಸಂಪತ್ತುಗಳಾದ ವೈವಿಧ್ಯಮ ಕಲೆ , ಸಂಸ್ಕಾರ , ಸಂಸ್ಕ್ರತಿ , ಆಚಾರ , ವಿಚಾರಗನ್ನು ಕರ್ನಾಟಕದ ಹೊರರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ತುಳು – ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಮಹಾರಾಷ್ಟ್ರದ ಮಣ್ಣಿನಲ್ಲಿ ಉಳಿಸಿ , ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯನಿರತವಾಗಿರುವ ಕರ್ನಾಟ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಇದರ ಸಭೆಯು ಜ.5 ರ ಬುಧವಾರದಂದು ದಾದರ್ ಪಶ್ವಿಮದ ಶಿವಸೇನಾ ಮುಖ್ಯ ಕಚೇರಿಯ ಎದುರುಗಡೆಯ ಕೊಹಿನೂರು ಸ್ಕ್ಯಾರ್ ನ ಅಧ್ಯಕ್ಷ ಕಚೇರಿಯಲ್ಲಿ ಜರಗಿತು. ಈ ಸಭೆಯಲ್ಲಿ ಕರ್ನಾಟಕ ಜನಪದ ಪರಿಷತ್ತು ,ಜಾನಪದ ಲೋಕ ,ಇದರ ಪ್ರಧಾನ ಅಧ್ಯಕ್ಷ ,ಟಿ .ತಿಮ್ಮೇಗೌಡ ಐ ಎ ಎಸ್(ನಿ)ಯವರ ಅನುಮೋದನೆಯ ಮೇರೆಗೆ ನೂತನ ಪದಾಧಿಕಾರಿಗಳ ನೇಮಕಾತಿಯ ಬಗ್ಗೆ ಕರ್ನಾಟಕ ಸರಕಾರದ ಮಾನ್ಯತೆಯನ್ನು ನೀಡಿದ ಅಧಿಕೃತ ಪತ್ರವನ್ನು ಮಂಡಿಸುವುದರ ಮುಖಾಂತರ ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ತಿಳಿಯ ಪಡಿಸಲಾಯಿತು .
ಅದರಂತೆ ನೂತನ ಅಧ್ಯಕ್ಷರನ್ನಾಗಿ ಜೀವವಿಮಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ತರ ಸಾಧನೆ ಗೈದ ಹೆಮ್ಮೆಯ ತುಳು ಕನ್ನಡಿಗರೆಂದು ಹೆಸರುವಾಸಿಯಾಗಿರುವ ಮತ್ತು ಪ್ರಸ್ತುತ ವಿಶ್ವಮಾನ್ಯತೆಯನ್ನು ಪಡೆದ ಬಂಟರ ಸಂಘ ಮುಂಬಯಿ ಇದರ ಗೌ.ಪ್ರ.ಕಾರ್ಯದರ್ಶಿಯಾಗಿ ಸೇವ ನಿರತರಾಗಿರುವ ,ಕರ್ನಾಟಕ ರಾಜ್ಯ್ೋತ್ಸವ ಪ್ರಶಸ್ತಿ ಪುರಸ್ಕ್ರತ ಡಾ. ಆರ್ .ಕೆ. ಶೆಟ್ಟಿಯವರನ್ನು ನೂತನ ಅಧ್ಯಕ್ಷರನ್ನಾಗಿ ಸರ್ವಾನು ಮತದಿಂದ ಅವಿರೋಧವಾಗಿ ಆಯ್ಕೆ ಬಹಿರಂಗ ಪಡಿಸಲಾಯಿತು .
ಹಾಗೇ ಉಪಾಧ್ಯಕ್ಷರನ್ನಾಗಿ ನಗರದ ಪ್ರತಿಷ್ಠಿತ ಉಧ್ಯಮಿ , ಶ್ರೇಷ್ಠ , ನಾಮಾಂಕಿತ ರಂಗಕರ್ಮಿ , ಜಾನಪದ ಕಲೆ ,ಸಾಹಿತ್ಯದಲ್ಲಿ ಬಹಳಷ್ಟು ಅನುಭವವನ್ನು ಹೊಂದಿರುವ ಮತ್ತು ಪ್ರಸ್ತುತ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಡಾ . ಸುರೇಂದ್ರ ಕುಮಾರ್ ಹೆಗ್ಡೆಯವರನ್ನು , ಗೌ.ಪ್ರಧಾನ ಕಾರ್ಯದರ್ಶಿಯಾಗಿ , ಚಿರಪರಿಚಿತ ರಂಗ ಕಲಾವಿದ , ನಿರುಪಣಾ ಮಾಂತ್ರಿಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮತ್ತು ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿಯ ಗೌ.ಪ್ರ. ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಇತ್ತೀಚೆಗೆ ಕಲೆಗೆ ಮತ್ತು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ನೆಲೆಯಲ್ಲಿ ಕಾರ್ಯರೂಪಕ್ಕೆ ಬಂದಿರುವ ” ತ್ರಿರಂಗ ಸಂಗಮ” ಸಂಸ್ಥೆಯ ರೂವಾರಿಗಳಲ್ಲೋರ್ವರಾಗಿರುವ ಆಶೋಕ್ ಪಕ್ಕಳರವರನ್ನು ಹಾಗೂ ಗೌ. ಕೋಶಾಧಿಕಾರಿಯನ್ನಾಗಿ ಪ್ರತಿಷ್ಠಿತ ಬ್ಯಾಂಕ್ ಉದ್ಯೋಗಿಯಾಗಿರುವುದರ ಜೊತೆಗೆ ರಂಗ ಕಲಾವಿದರರಾಗಿ ಸೇವೆ ಸಲ್ಲಿಸಿರುವ ಗಣೇಶ್ ಜಿ. ನಾಯ್ಕ್ ರವರನ್ನು ಇದೇ ವೇಳೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು .
ಅದೇ ರೀತಿ ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷರನ್ನಾಗಿ ನಾಮಂಕಿತ ಉದ್ಯಮಿ ,_ಸಮಾಜ ಸೇವಕ ,ದಾರ್ಮಿಕ ಹಿತಚಿಂತಕ ಹಾಗೂ ಪ್ರಸ್ತುತ ಸಫಾಲಿಗ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ಕಾರ್ಯನಿರತರಾಗಿರುವ ಶ್ರೀನಿವಾಸ ಸಾಪಲ್ಯರವರನ್ನು ಹಾಗೂ ಜೊತೆ ಕಾರ್ಯಧ್ಯಕ್ಷರನ್ನಾಗಿ ಜನಪ್ರಿಯ ರಂಗ ನಟ , ನಿರ್ದೇಶಕ ಕೃಷ್ಣರಾಜ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು .
ಉಳಿದಂತೆ ಜೊತೆ ಕಾರ್ಯದರ್ಶಿಯಾಗಿ ನಗರದ ಜನಪ್ರಿಯಾ ಕಲಾಸಂಸ್ಥೆಯಲ್ಲೊಂದಾದ ಕಲಾಸೌರಭ ತಂಡದ ರೂವಾರಿ , ಹಿನ್ನಲೆ ಸಂಗೀತಗಾರ, ಗಾಯಕ ಪದ್ಮನಾಭ ಸಸಿಹಿತ್ಲು ಮತ್ತು ಜೊತೆ ಕೋಶಾಧಿಕಾರಿಯಾಗಿ ಪ್ರತಿಷ್ಠಿತ ಮಾಟುಂಗ ಕನ್ನಡ ಸಂಘದಲ್ಲಿ ಕಾರ್ಯನಿರ್ವಹಿಸಿದ ಅನುಭವಸ್ಥೆ , ಕುಸುಮಾ ಪೂಜಾರಿಯವರನ್ನು ನೇಮಿಸಲಾಯಿತು
ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯನ್ನಾಗಿ ಬಂಟರ ಸಂಘ ಮುಂಬಯಿ ಇದರ ಅಂಧೇರಿ – ಬಾಂದ್ರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಕ್ರೀಯ ಕಾರ್ಯಕರ್ತೆಯಾಗಿ ಮತ್ತು ಚಿಣ್ಣರ ಬಿಂಬಿದ. ಸಕ್ರೀಯ ಸದಸ್ಯೆಯಾಗಿ ಗುರುತಿಸಿ ಕೊಂಡಿರುವ ಅನಿತಾ ಯು. ಶೆಟ್ಟಿ ಯವರನ್ನು ಆಯ್ಕೆಮಾಡಲಾಯಿತು.
ಡಾ. ಆರ್ ಕೆ . ಶೆಟ್ಟಿ ( ಅಧ್ಯಕ್ಷರು )
ಡಾ. ಸುರೇಂದ್ರ ಕುಮಾರ್ ಹೆಗ್ಡೆ ( ಉಪಾಧ್ಯಕ್ಷರು )
ಅಶೋಕ್ ಪಕ್ಕಳ ( ಗೌ.ಪ್ರ .ಕಾರ್ಯದರ್ಶಿ )
ಗಣೇಶ್ ಜಿ. ನಾಯ್ಕ್ ( ಗೌ.ಕೋಶಾಧಿಕಾರಿ )
ಪದ್ಮನಾಭ ಸಸಿಹಿತ್ಲು ( ಜೊತೆ ಕಾರ್ಯದರ್ಶಿ )
ಕುಸುಮಾ ಪೂಜಾರಿ ( ಜೊತೆ ಕೋಶಾಧಿಕಾರಿ )
ಶ್ರೀನಿವಾಸ ಸಾಫಲ್ಯ ( ಕಾರ್ಯಾಧ್ಯಕ್ಷರು , ಸಾಂಸ್ಕೃತಿಕ ಸಮಿತಿ )
ಕೃಷ್ಣರಾಜ್ ಶೆಟ್ಟಿ ( ಜೊತೆ ಕಾರ್ಯಾಧ್ಯಕ್ಷರು , ಸಾಂಸ್ಕೃತಿಕ ಸಮಿತಿ )
ಅನಿತಾ ಯು. ಶೆಟ್ಟಿ ( ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ )