
ಕರ್ನಾಟಕ ರಾಜ್ಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಚಾಮರಾಜನಗರ ಜಿಲ್ಲೆಯ ಡಾ| ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜನವರಿ 19 ಮತ್ತು 20 ರಂದು ನಡೆಯಿತು. ಬಾಲಕರ ವಿಭಾಗದಲ್ಲಿ 24 ಮತ್ತು ಬಾಲಕಿಯರ ವಿಭಾಗದಲ್ಲಿ 16 ತಂಡಗಳು ಭಾಗವಹಿಸಿದ್ದವು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಎರಡು ಬಾಲಕರ ಹಾಗೂ ಎರಡು ಬಾಲಕಿಯರ ತಂಡಗಳು ಸೇರಿದಂತೆ ಒಟ್ಟು 4 ತಂಡಗಳು ಪಾಲ್ಗೊಂಡಿದ್ದವು. ಲೀಗ್ ಹಾಗೂ ನಾಕೌಟ್ ಮಾದರಿ ಪಂದ್ಯಾಟದಲ್ಲಿ ಆಳ್ವಾಸ್ ಬಾಲಕ ಹಾಗೂ ಬಾಲಕಿಯರ ‘ಎ’ ತಂಡವು ಚಾಂಪಿಯನ್ಸ್ ಪಟ್ಟ ಅಲಂಕರಿಸಿದರೆ, ಆಳ್ವಾಸ್ನ ಬಾಲಕ ಹಾಗೂ ಬಾಲಕಿಯರ ‘ಬಿ’ ತಂಡಗಳು ರನ್ನರ್ಸ್ ಆಪ್ ಪ್ರಶಸ್ತಿಯನ್ನು ಪಡೆದು ಪ್ರಾಬಲ್ಯ ಮೆರೆದವು. ಸೆಮಿಫೈನಲ್ ನಲ್ಲಿ ಆಳ್ವಾಸ್ ಬಾಲಕರ ‘ಎ’ ತಂಡವು ಚಾಮರಾಜನಗರದ ಜಿಲ್ಲಾ ತಂಡವನ್ನು ಹಾಗೂ ಆಳ್ವಾಸ್ ‘ಬಿ’ ತಂಡವು ರಾಜರಾಜೇಶ್ವರಿ ನಗರ ತಂಡವನ್ನು ಸೋಲಿಸಿತ್ತು. ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ‘ಎ’ ತಂಡವು ಮೂಡಿಗೆರೆ ತಂಡವನ್ನು ಹಾಗೂ ಆಳ್ವಾಸ್ ‘ಬಿ’ ತಂಡವು ರಾಜರಾಜೇಶ್ವರಿ ನಗರ ತಂಡವನ್ನು ನೇರ ಸೆಟ್ ನಿಂದ ಸೋಲಿಸಿ ಫೈನಲ್ ಹಂತಕ್ಕೆ ತಲುಪಿದ್ದವು. ಫೈನಲ್ನ ಎರಡು ವಿಭಾಗದಲ್ಲಿ ಆಳ್ವಾಸ್ನ 4 ತಂಡಗಳು ಹೋರಾಡಿ ಪ್ರಶಸ್ತಿಯನ್ನು ಪಡೆದುಕೊಂಡವು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹಳ ಆಳ್ವ ಅಭಿನಂದಿಸಿದ್ದಾರೆ.



















































































































