
ಬಂಟ್ಸ್ ಫೋರಮ್ ಮೀರಾ ಭಾಯಂದರ್ ಜನವರಿ 24 ರಂದು ಉದಯ್ ಎಂ ಶೆಟ್ಟಿ ಮಲಾರಬೀಡು ಅವರ ಅಧ್ಯಕ್ಷತೆಯಲ್ಲಿ ಬಂಟ ಕೂಟ – 2026 ಕಾರ್ಯಕ್ರಮವು ಮೀರಾ ರೋಡ್ ಪೂರ್ವದ ಎಸ್ ಕೆ ಸ್ಟೋನ್ ಸಮೀಪ ಸೆಂಟ್ರಲ್ ಪಾರ್ಕ್ ಎಸಿ ಲಾನ್ ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಡಾ| ಆರ್ ಕೆ ಶೆಟ್ಟಿ ವೇದಿಕೆಯಲ್ಲಿ ಮದ್ಯಾಹ್ನ 12:00 ರಿಂದ ರಾತ್ರಿ 9:00ರ ತನಕ ನಡೆಯಲಿದೆ. ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು. ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಬಳ್ಕುಂಜೆ ಗುತ್ತು, ಸಾಯಿಬಾಬಾ ಆಸ್ಪತ್ರೆಯ ಸಿಎಂಡಿ ನಿಂಜೂರು ಅಂಬರೀಶ್ ಹೆಗ್ಡೆ, ಮೀರಾ ಭಾಯಂದರ್ ಹೋಟೆಲ್ಸ್ ಅಸೋಸಿಯೇಷನ್ ನ ಅಧ್ಯಕ್ಷ ರಂಜನ್ ಶೆಟ್ಟಿ ಆಗಮಿಸಲಿರುವರು.

ಅತಿಥಿಗಳಾಗಿ ಹೋಟೆಲು ಉದ್ಯಮಿ ಮುಂಡಪ್ಪ ಎಸ್ ಪಯ್ಯಡೆ, ಮೀರಾ ಭಾಯಂದರ್ ನ ಬಿಜೆಪಿ ಉಪಾಧ್ಯಕ್ಷ ಉದಯ ಶೆಟ್ಟಿ ಪೆಳತ್ತೂರು, ಮೀರಾಗಾಂವ್ ಮಹಾಲಿಂಗೇಶ್ವರ ಮಂದಿರದ ಟ್ರಸ್ಟಿ ಬಾಬಾ ರಂಜನ್ ಶೆಟ್ಟಿ, ಉದ್ಯಮಿ ಐಕಳ ಆನಂದ ಶೆಟ್ಟಿ, ಅಂತರಾಷ್ಟ್ರೀಯ ತುಳುವ ಮಹಾಸಭೆಯ ಸಂಚಾಲಕ ನ್ಯಾಯವಾದಿ ಮೋರ್ಲ ರತ್ನಾಕರ ಶೆಟ್ಟಿ, ಬಂಟರ ಸಂಘ ಮುಂಬಯಿಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಹೋಟೆಲ್ ಉದ್ಯಮಿ ಸಾಯಿ ಪ್ರಸಾದ್ ಪೂಂಜ, ತೆರಿಗೆ ಸಲಹೆಗಾರ ಪ್ರಕಾಶ್ ಶೆಟ್ಟಿ, ಉದ್ಯಮಿ ದಯಾನಂದ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಉಮೇಶ್ ಎಸ್ ಶೆಟ್ಟಿ ಮತ್ತು ಶಿವರಾಂ ಶೆಟ್ಟಿ, ಮೀರಾ ಭಾಯಂದರ್ ಹೋಟೆಲ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಮಧುಕರ್ ಕೆ ಶೆಟ್ಟಿ, ಬಂಟರ ಸಂಘ ಮುಂಬಯಿಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶೆಟ್ಟಿ ಹಾಗೂ ನಗರ ಸೇವಕಿ ಆಕಾಂಕ್ಷ ಶೆಟ್ಟಿ ಉಪಸ್ಥಿತರಿರುವರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸದಸ್ಯರ ಮತ್ತು ಮಕ್ಕಳಿಂದ ನೃತ್ಯ ವೈವಿಧ್ಯ, ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದಲ್ಲಿ ಸದಸ್ಯರಿಂದ ತುಳು ನಾಟಕ ಪನರೆ ಪೋವೊಡ್ಚಿ ಹಾಗೂ ಮಹಿಳಾ ವಿಭಾಗದ ಸದಸ್ಯರಿಂದ ಕಿರು ನಾಟಕ ಸಂಸಾರದ SOMEಸಾರ ಸಾದರಗೊಳ್ಳಲಿದೆ. ಗಣ್ಯರ ಉಪಸ್ಥಿತಿಯಲ್ಲಿ ಸಮರೋಪ ಸಮಾರಂಭ ನಡೆದು ನಂತರ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಬಂಟ ಬಾಂಧವರು, ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಕನ್ನಡೇತರರು ಆಗಮಿಸಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ಬಂಟ್ಸ್ ಫೋರಮ್ ನ ಅಧ್ಯಕ್ಷ ಉದಯ ಎಂ ಶೆಟ್ಟಿ ಮಲಾರಬೀಡು, ಸಂಚಾಲಕ ಅನೀಲ್ ಶೆಟ್ಟಿ ಎಲ್ಲೂರು ಒಡಿಪರ ಗುತ್ತು, ಉಪಾಧ್ಯಕ್ಷರುಗಳಾದ ದಿವಾಕರ ಎಂ ಶೆಟ್ಟಿ ಶಿರ್ಲಾಲ್ ಮತ್ತು ಹರ್ಷಕುಮಾರ್ ಡಿ ಶೆಟ್ಟಿ, ಕಾರ್ಯದರ್ಶಿ ಸತೀಶ್ ಶೆಟ್ಟಿ ಮುಂಡ್ಕೂರು, ಕೋಶಾಧಿಕಾರಿ ಹರೀಶ್ ಶೆಟ್ಟಿ ಕಾಪು, ಜೊತೆ ಕಾರ್ಯದರ್ಶಿ ಶರ್ಮಿಳಾ ಕೆ ಶೆಟ್ಟಿ, ಜೊತೆ ಕೋಶಾಧಿಕಾರಿ ಮಧುಕರ್ ಎಸ್ ಶೆಟ್ಟಿ ಅಜೆಕಾರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಖವಾಣಿ ಡಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನಟರಾಜ ಡಿ ಶೆಟ್ಟಿ, ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ನವೀನಾ ಜೆ ಭಂಡಾರಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ಆರ್ ಶೆಟ್ಟಿ ಹಾಗೂ ಉಪಕಾರ್ಯಾಧ್ಯಕ್ಷೆ ಚೈತ್ರ ಆರ್ ಹೆಗ್ಡೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


















































































































