
ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯೋತ್ಸವದ ಅಂಗವಾಗಿ ವಿವೇಕ ಕಾಯಕರತ್ನ ಪ್ರಶಸ್ತಿ ಪ್ರಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಜನವರಿ 24 ರಂದು ಶನಿವಾರ ಸಂಜೆ 6 ಗಂಟೆಗೆ ಅಳಿಯೂರಿನ ವಿಕಾಸ ನಗರದ ಶ್ರೀ ಶನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ. ಕರಿಂಜೆ ಶ್ರೀ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ. ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಂಗಳೂರಿನ ನ್ಯಾಯವಾದಿ ಚಂದ್ರವರ್ಮ ಜೈನ್ ಅಳಿಯೂರು ಅವರು ವಿವೇಕಾನಂದರ ಸಂದೇಶ ನೀಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವಿ ಸಲ್ಲಿಸಿದ ಸದಾನಂದ ಪೂಜಾರಿ, ಅಚ್ಯುತ ಆಚಾರ್ಯ, ರವೀಂದ್ರ ಅಮೀನ್, ಆನಂದ ಸೀತಾರಾಮ ಶೆಟ್ಟಿ, ಸಂತೋಷ ಆಚಾರ್ಯ, ಲೀಲಾ ಮಡಿವಾಳ್ತಿ, ವಸಂತಿ ಶೆಟ್ಟಿ, ಚಂದ್ರಾವತಿ ಪೂಜಾರಿ, ಸುಮನ ನೆಲ್ಲಿಕಾರು, ನಾರಾಯಣ ಮಡಿವಾಳ, ಮುರಳಿದರ ಸುವರ್ಣ ಹಾಗೂ ದಿನೇಶ್ ದೇವಾಡಿಗ ಅವರಿಗೆ ವಿವೇಕ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರುಕ್ಮಯ ಪೂಜಾರಿ ಅವರಿಗೆ ವಿಶೇಷ ಅಭಿನಂದನೆ ಹಾಗೂ ಪರಶುರಾಮ ಸೇವಾ ಟ್ರಸ್ಟ್ ಮತ್ತು ಪ್ರತಿಭಾ ಮಹಿಳಾ ಸ್ವಸಹಾಯ ಸಂಘಕ್ಕೆ ಅತ್ಯುತ್ತಮ ಸೇವಾ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದ ನಂತರ ಮೂಲ್ಕಿಯ ನವವೈಭವ ಕಲಾವಿದರಿಂದ ‘ಸತ್ಯದ ತುಡರ್’ ಭಕ್ತಿ ಪ್ರಧಾನ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















































































































