ಕೊಕ್ಕರ್ಣೆ ಶ್ರೀ ಅನಿತಾ ವಿದ್ಯಾ ಸಂಸ್ಥೆಯ ದುರ್ಗಾ ಆಂಗ್ಲ ಮಾಧ್ಯಮ ಶಾಲೆಯ ದಶಮಾನೋತ್ಸವ ಸಮಾರಂಭ ನೆರವೇರಿತು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಹುಬ್ಬಳ್ಳಿಯ ಚಾರ್ಟರ್ಡ್ ಅಕೌಂಟೆಂಟ್ ಎಸ್.ಬಿ ಶೆಟ್ಟಿ, ಹುಬ್ಬಳ್ಳಿಯ ಶೆಟ್ಟಿಸ್ ಕನ್ಸ್ಟ್ರಕ್ಷನ್ ನ ಎಂ.ಡಿ ಪ್ರಸನ್ನ ಶೆಟ್ಟಿ, ಉಡುಪಿ ಡಯಟ್ ಪ್ರಾಂಶುಪಾಲ ಡಾ| ಅಶೋಕ್ ಕಾಮತ್, ಬ್ರಹ್ಮಾವರದ ನ್ಯೂ ಕರ್ನಾಟಕ ಬಿಲ್ಡರ್ ಆಂಡ್ ಡೆವಲಪರ್ಸ್ ನ ಮಾಲಕ ಚೇತನ್ ಕುಮಾರ್ ಶೆಟ್ಟಿ, ಉಡುಪಿಯ ವೃತ್ತ ನಿರೀಕ್ಷಕ ರಮೇಶ್ ಕೆ, ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ್ ಪೂಜಾರಿ, ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಂಶುಪಾಲರು, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ದಾನಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.



















































































































