ವಾಮದಪದವು ವಲಯ ಬಂಟರ ಸಂಘದ ಯುವ ಬಂಟರ ಸಂಘದ ವತಿಯಿಂದ ಡಿಸೆಂಬರ್ 20 ರಂದು ನಡೆಯುವ ಯುವ ಬಂಟ ವೈಭವ- 2025 ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಸಂಘದ ಆಲದ ಪದವಿನ ನಿವೇಶನದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಬಂಟ್ವಾಳ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಗೋಕುಲ್ ಭಂಡಾರಿ, ವಾಮದಪದವು ವಲಯದ ಅಧ್ಯಕ್ಷ ವಸಂತ್ ಶೆಟ್ಟಿ ಕೇದಗೆ, ಸಿದ್ದಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಮತ್ತು ಕಿಶೋರ್ ಕುಮಾರ್ ಭಂಡಾರಿ ಬೆಳ್ಳೂರು ಶುಭ ಹಾರೈಸಿದರು.



ಮುಖ್ಯ ಅತಿಥಿಗಳಾಗಿ ಯಶ್ವಿನ್ ಡಿ ಶೆಟ್ಟಿ ಕಡ್ತಲಬೆಟ್ಟು ಗುತ್ತು, ಭಾಸ್ಕರ್ ಶೆಟ್ಟಿ ಗಂಟಾರಬೆಟ್ಟು,ಕೊಡಂಗೆ ಕಂಬಳ ಸಮಿತಿಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಕಲ್ಲಾಪು, ಸಂಪತ್ ಶೆಟ್ಟಿ ಪಣಕಜೆ ಭಾಗವಹಿಸಿದ್ದರು. ವಲಯ ಸಮಿತಿ ಉಪಾಧ್ಯಕ್ಷರಾದ ಯಶೋಧರ ಶೆಟ್ಟಿ ದಂಡೆ, ರಮೇಶ್ ಶೆಟ್ಟಿ ವಾಮದಪದವು ಪ್ರದಾನ ಕಾರ್ಯದರ್ಶಿ ಗಂಗಾಧರ ಶೆಟ್ಟಿ,ಕೋಡ್ಯೇಲು ಬಾಳಿಕೆ, ಕೋಶಾಧಿಕಾರಿ ವಸಂತ್ ಶೆಟ್ಟಿ ಪಿಂಗಾರ ಫಾರ್ಮ್, ವಾಮದಪದವು ವಲಯದ ಮಹಿಳಾ ಅಧ್ಯಕ್ಷೆ ಚೇತನಾ ಶೆಟ್ಟಿ ದಂಡೆ, ಕೋಶಾಧಿಕಾರಿ ರೇಣುಕಾ ವಿ ರೈ ಮೊದಲಾದವರು ಉಪಸ್ಥಿತರಿದ್ದರು. ವಲಯ ಯುವ ಸಮಿತಿ ಅಧ್ಯಕ್ಷ ಪ್ರಜ್ವಲ್ ಶೆಟ್ಟಿ ಗಂಟೆರಾಬೆಟ್ಟುಗುತ್ತು ಸ್ವಾಗತಿಸಿ, ಯುವ ಘಟಕದ ಕಾರ್ಯದರ್ಶಿ ದೀಕ್ಷಿ ತ್ ಶೆಟ್ಟಿ ಬುಳೇರಿ ವಂದಿಸಿ, ದೀಪ್ತಿ ಪೂಂಜ ಕಾರ್ಯಕ್ರಮ ನಿರೂಪಿಸಿದರು.











































































































