ಮನುಷ್ಯನ ಜೀವನ ಪಯಣವನ್ನು ಸುಲಭ ಸೂಕ್ಷ್ಮವಾಗಿ ತಿಳಿಸುವ ತತ್ವ ಸತ್ವದ ವಿ ಮನೋಹರ್ ಸಾಹಿತ್ಯವನ್ನು ಅವರೇ ಸಂಗೀತಕ್ಕೆ ಅಳವಡಿಸಿದ ಹಾಡನ್ನು ಐಲೇಸಾ ಇದೇ ಭಾನುವಾರ ಸಂಜೆ 7:30 ಗಂಟೆಗೆ ಜೂಮ್ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಹಾಡನ್ನು ಐಲೆಸಾದ ಯುವ ಗಾಯಕ ಆತ್ಮರಾಮ್ ಆಳ್ವ ಮಧುರವಾಗಿ ಹಾಡಿದ್ದಾರೆ. ತುಳುವನಾಡಿನ ಸಾಹಸಿ ಮೊಗವೀರರ ಜೀವನ ಶೈಲಿಯ ಪರಿಭಾಷೆಯಲ್ಲಿ ಜೀವನ ದೃಷ್ಟಿಯನ್ನು ಹೇಳುತ್ತಾ ಸಾಗುವ ಹಾಡು ನಿರಾಯಾಸದ ಸೀದಾ ಸಾದಾ ಜೀವನ ನಡೆಸಬೇಕು ಮತ್ತು ಭೇದವಿಲ್ಲದೆ ನಮ್ಮನ್ನು ಸಲಹುವ ಪ್ರಕೃತಿಯನ್ನು, ನದಿಗಳನ್ನು ತಾಯಿಯಂತೆ ಪ್ರೀತಿಸಬೇಕು ಎನ್ನುವ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ.

ಸದಾ ಐಲೇಸಾದ ಕೆಲಸಗಳನ್ನು ಪ್ರೀತಿಯಿಂದ ಮತ್ತು ಅಭಿಮಾನದಿಂದ ಪ್ರೋತ್ಸಾಹಿಸುತ್ತಾ ಬಂದಿರುವ ಸೌದಿಯ ನರೇಂದ್ರ ಶೆಟ್ಟಿ ಮತ್ತು ಸುಮನಾ ನರೇಂದ್ರ ಶೆಟ್ಟಿ ದಂಪತಿಗಳು ಹಾಡನ್ನು ಪ್ರಾಯೋಜಿಸಿದ್ದು, ಬಹರೈನ್ ಮೊಗವೀರ ಸಂಘದ ಅಧ್ಯಕ್ಷೆ ಶಿಲ್ಪಾ ಶಮೀತ್ ಕುಂದರ್ ಬಿಡುಗಡೆಗೊಳಿಸಿ ಮುಖ್ಯ ಅತಿಥಿಯಾಗಿ ಮಾತಾಡಲಿದ್ದಾರೆ. ಹಾಡಿನ ಕರೋಕೆಯನ್ನು ಮತ್ತೊಬ್ಬ ಅತಿಥಿ ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಬಿಡುಗಡೆ ಮಾಡುತ್ತಾರೆ. ಕಾರ್ಯಕ್ರಮವನ್ನು ಮ್ಯಾಂಗಲೋರ್ ಅಸೋಸಿಯೇಷನ್ ಆಫ್ ಸೌದಿ ಅರೇಬಿಯಾ (MASA) ದ ಮಾಜಿ ಅಧ್ಯಕ್ಷ ರವಿ ಕರ್ಕೇರ ನಿರ್ವಹಿಸಲಿದ್ದು, ವಿಡಿಯೋ ಸಂಕಲನ ಮತ್ತು ತಾಂತ್ರಿಕವಾಗಿ ಗೋಪಾಲ್ ಪಟ್ಟೆ ಸಹಕರಿಸಿದ್ದಾರೆ.
ಚಿತ್ರೀಕರಣದಲ್ಲಿ ಅನಿಶ್ ಕಿನ್ನಿಗೋಳಿ, ಸುದರ್ಶನ್ ಮುಗೆರಾಯ, ಪ್ರಕಾಶ್ ಪಾವಂಜೆ, ಅಜೇಶ್ ಚಾರ್ಮಾಡಿ, ಮಂಜುನಾಥ್ ಸಾನಿಧ್ಯ, ನವೀನ ಕೋಟ್ಯಾನ್, ಉಮೇಶ್ ಬಂಗೇರ, ಮಂಜುನಾಥ್ ಬಂಗೇರ, ಸತೀಶ್ ತಿಂಗಳಾಯ, ನೂತನ್ ಶ್ರೀಯಾನ್ ಸಹಕರಿಸಿದ್ದಾರೆ. ಹಾಡು ಡಿಸೆಂಬರ್ 7 ರಂದು ಸಂಜೆ 7:30 ಭಾರತದ ಸಮಯಕ್ಕೆ ಝೂಮ್ ವೇದಿಕೆಯಲ್ಲಿ ಬಿಡುಗಡೆ ಆಗಲಿದ್ದು, ಸಂಗೀತ ಪ್ರಿಯರು ಜೂಮ್ ಗುರುತು ಸಂಖ್ಯೆ 5340283988 ಪಾಸ್ ವರ್ಡ್ 0324 ಮೂಲಕ ಸೇರಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಲು ಐಲೇಸಾದ ಮಾಧ್ಯಮ ಸಂಚಾಲಕ ಸುರೇಂದ್ರ ಶೆಟ್ಟಿ ಮಾರ್ನಾಡು ವಿನಂತಿಸಿದ್ದಾರೆ.











































































































