ಎಪಿಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರ್ಡೂರಿನಲ್ಲಿ 33 ವರ್ಷಗಳ ಕಾಲ ಶಿಕ್ಷಕರಾಗಿ ವಯೋ ನಿವೃತ್ತಿ ಹೊಂದಿದ ಉದಯಕುಮಾರ್ ಹೆಗ್ಡೆ ಕುಕ್ಕೆಹಳ್ಳಿ ಇವರನ್ನು ಅವರ ಸ್ವಗೃಹ ಕುಕ್ಕೆಹಳ್ಳಿಯಲ್ಲಿ ಕುಂದಾಪುರ ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು. ಕೆಂಜೂರು ವೀರೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನವೀನ್ ಚಂದ್ರ ಶೆಟ್ಟಿ ಪ್ರಸ್ತಾವಿಸಿದರು. ನಿವೃತ್ತ ಶಿಕ್ಷಕ ಸಂತೋಷ್ ಕುಮಾರ್ ಹೆಗ್ಡೆ ಮೊಳಹಳ್ಳಿ ಅವರು ನಿವೃತ್ತರಿಗೆ ಶಾಲು ಹೊದಿಸಿ ಸನ್ಮಾನಿಸಿದರು.ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ವಂಡ್ಸೆ ನಾಗರಾಜ ಶೆಟ್ಟಿ, ಚೋನಾಳಿ ಶಾಲೆಯ ಮುಖ್ಯ ಉಪಾಧ್ಯಾಯ ಪ್ರದೀಪ್ ಕುಮಾರ್ ಭಂಡಾರಿ, ದೈಹಿಕ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ ಕೆಂಜೂರು, ಪಿಎಂ ಶ್ರೀ ಕುವೆಂಪು ಶಾಲೆ ತೆಕ್ಕಟ್ಟೆಯ ಅಧ್ಯಾಪಕ ಸದಾನಂದ ಶೆಟ್ಟಿ ವಕ್ವಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹನುಮಂತನಗರದ ದೈಹಿಕ ಶಿಕ್ಷಣ ಶಿಕ್ಷಕಿ ವಿನಯ ಹೆಗ್ಡೆ ಉಪಸ್ಥಿತರಿದ್ದರು.
