ಪುಣೆ ತುಳು ಕೂಟದ 26ನೇ ವಾರ್ಷಿಕೋತ್ಸವ ಸಮಾರಂಭವು ಆಗಸ್ಟ್ 15 ರಂದು ಪುಣೆಯ ಬಾಣೇರ್ ನಲ್ಲಿಯ ಬಂಟರ ಭವನದ ಓಣಿ ಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ಜರಗಿತು. ತುಳುವರು ದೇಶ ಜೋಡಿಸುವ ಕಾರ್ಯವನ್ನು ದೇಶ ವಿದೇಶದಲ್ಲಿ ಮಾಡುತ್ತಿದ್ದಾರೆ. ಗುಣದಲ್ಲಿ, ಜ್ಞಾನದಲ್ಲಿ, ಕಠಿನ ಪರಿಶ್ರಮದಲ್ಲಿ ದುಡಿದು ಸಮಾಜ ಸೇವೆಯಲ್ಲಿರುವ ತುಳುವರು ಎಲ್ಲೇ ಇದ್ದರೂ ತುಳು ಬಾಷೆಯ ಜೀವಂತಿಕೆಯನ್ನು ಉಳಿಸಿ ಬೆಳೆಸಿದವರು. ನಮ್ಮ ಹಿರಿಯರ ಕಟ್ಟು ಕಟ್ಟಲೆ, ಸಂಸ್ಕತಿ, ಸಂಸ್ಕಾರ, ಆಚಾರ ವಿಚಾರವನ್ನು ಬಿಟ್ಟು ಕೊಡದೆ ತುಳುವ ಮಣ್ಣಿನ ಮಕ್ಕಳಾದ ತುಳುವರು ಘನತೆ ಗೌರವವನ್ನು ಉಳಿಸಿಕೊಂಡು ನಡೆದವರು ಎಂಬ ಹೆಮ್ಮೆ ನಮ್ಮದು. ತುಳುವರ ಸಂಸ್ಕಾರ ಏನು ಎಂಬುದನ್ನು ಜಗತ್ತಿಗೆ ತೋರಿಸಿ ಕೊಟ್ಟಿದ್ದೇವೆ. ನಮ್ಮ ಜಲ ಮಣ್ಣು ಬಾಷೆಯ ಜೊತೆಯಲ್ಲಿ ನಿರಂತರ ಸಂಬಂಧವನ್ನಿಟ್ಟುಕೊಂಡು ತುಳು ಸಂಘಟನೆಯನ್ನು ಕಟ್ಟಿ ತುಳುವರನ್ನು ಚಾವಡಿಯಲ್ಲಿ ಒಟ್ಟು ಸೇರಿಸಿಕೊಂಡು ಪುಣೆಯ ತುಳುವರು ಮಾಡುವ ಸೇವೆಯ ಉದ್ದೇಶವೇ ತುಳುವರ ಒಗ್ಗಟ್ಟು, ತುಳುನಾಡಿನ ಸಂಸ್ಕ್ರತಿಯ ಬೆಳವಣಿಗೆ ಹಾಗೂ ತುಳು ಸಂಸ್ಕ್ರತಿಯ ಮೌಲ್ಯದ ಅರಿವು ಮೂಡಿಸುವ ಕಾರ್ಯಗಳು ಆಗುತ್ತಿವೆ. ಎಂದು ಆಖಿಲ ಭಾರತ ತುಳು ಒಕ್ಕೂಟದ ಮಾಜಿ ಅಧ್ಯಕ್ಷ, ವಿಶ್ವ ದೇವಾಡಿಗ ಮಹಾ ಮಂಡಲದ ಅಧ್ಯಕ್ಷ, ಮುಂಬಯಿ ದೇವಾಡಿಗ ಸಂಘದ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಧರ್ಮಪಾಲ್ ದೇವಾಡಿಗ ನುಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಧರ್ಮ ಪಾಲ್ ದೇವಾಡಿಗರವರು ಪುಣೆಯ ತುಳುವರು ಒಂದೇ ಮನೋಭಾವದೊಂದಿಗೆ ಒಗ್ಗಟ್ಟಿನಿಂದ ತುಳುವರಿಗಾಗಿ ಮಿನಿ ಭವನ ನಿರ್ಮಿಸಿದ್ದಕ್ಕೆ ಹೆಮ್ಮೆಯಾಗಿದೆ ಮತ್ತು ನಿಮಗೂ ಗೌರವ ತಂದಿದೆ. ಅಧ್ಯಕ್ಷರಾದ ದಿನೇಶ್ ಶೆಟ್ಟಿಯವರ ನೇತೃತ್ವದಲ್ಲಿ ಇನ್ನಷ್ಟು ಸೇವಾ ಕಾರ್ಯಗಳು ನಡೆಯಲಿ ಎಂದರು.

ತುಳು ಕೂಟ ಪುಣೆ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ಅಶ್ವಥಗುತ್ತುರವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭಾ ಸಮಾರಂಭವು ನಡೆಯಿತು. ಗೌರವ ಅತಿಥಿಗಳಾದ ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರು ಗುತ್ತು, ಭದ್ರಾವತಿ ಬಂಟರ ಸಂಘದ ಅಧ್ಯಕ್ಷ, ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಲಯನ್ ದಿವಾಕರ್ ಶೆಟ್ಟ, ಸಾಹಿತಿ ಮುದ್ದು ಮೂಡುಬೆಳ್ಳೆ, ಪುಣೆ ತುಳು ಕೂಟದ ವಾರ್ಷಿಕ ಬಿರುದು ಪಡೆದ ಮತ್ತು ವಿಶೇಷ ಸನ್ಮಾನಿತರಾದ ಅಹ್ಮದ್ ನಗರದ ಖ್ಯಾತ ಉದ್ಯಮಿ ಶಬರಿ ಇಂಡಸ್ಟ್ರಿಯಲ್ ಹಾಸ್ಪಿಟಾಲಿಟಿ ಪ್ರೈ.ಲಿನ ಆಡಳಿತ ನಿರ್ದೇಶಕ, ಪುಣೆ ತುಳುಕೂಟದ ಟ್ರಸ್ಟಿ, 2024ರ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕೆ.ಕೆ ಶೆಟ್ಟಿ ಹಾಗೂ ವಿಶೇಷ ಸನ್ಮಾನ ಪಡೆದ ಪುಣೆಯ ಧಾರ್ಮಿಕ ಮುಖಂಡ, ಖ್ಯಾತ ಉದ್ಯಮಿ ಸದಾನಂದ ಗ್ರೂಪ್ ಆಫ್ ಹೋಟೆಲ್ಸ್ ಸಿಎಂಡಿ, ಸದಾನಂದ ಸೇವಾ ಫೌಂಡೇಶನ್ ಸ್ಥಾಪಕರಾದ ಸದಾನಂದ ಕೆ ಶೆಟ್ಟಿ ಮತ್ತು ಮಂಗಳೂರು ನಗರ ಪಾಲಿಕೆಯ ನಿಕಟಪೂರ್ವ ನಗರ ಸೇವಕ ಗಣೇಶ್ ಕುಲಾಲ್, ಪುಣೆ ತುಳುಕೂಟದ ಸ್ಥಾಪಕಾಧ್ಯಕ್ಷ ಜಯ ಶೆಟ್ಟಿ, ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ವಿಶ್ವಸ್ಥ ಮಂಡಳಿಯ ಸಲಹೆಗಾರರಾದ ಶ್ರೀಧರ್ ಶೆಟ್ಟಿ ಬಾರಾಮತಿ, ಪ್ರವೀಣ್ ಶೆಟ್ಟಿ ಪುತ್ತೂರು, ಸದಾಶಿವ ಸಾಲ್ಯಾನ್, ಉಪಾಧ್ಯಕ್ಷರುಗಳಾದ ಮಾಧವ ಶೆಟ್ಟಿ, ಉದಯ ಶೆಟ್ಟಿ ಕಳತ್ತೂರು, ಶೇಖರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜಾರಾಮ ಶೆಟ್ಟಿ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಟಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಶೆಟ್ಟಿಯವರು ಉಪಸ್ಥಿತರಿದ್ದರು. ಗೀತಾ ಪೂಜಾರಿ, ಗೀತಾ ದೇವಾಡಿಗ ಪ್ರಾರ್ಥನೆಗೈದರು. ಉಪಾಧ್ಯಕ್ಷ ಉದಯ ಶೆಟ್ಟಿ ಕಳತ್ತೂರು ಸ್ವಾಗತಿಸಿದರು. ಅಧ್ಯಕ್ಷ ದಿನೇಶ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತಾನಾಡಿದರು.
ಈ ಸಂದರ್ಭದಲ್ಲಿ ಪುಣೆ ಕೂಟ ಈ ವರ್ಷದಿಂದ ಒಬ್ಬ ತುಳು ಸೇವಾಕರ್ತನಿಗೆ ಬಿರುದು ಸನ್ಮಾನ ನೀಡುವ ಸಂಕಲ್ಪ ಮಾಡಿದ್ದು, ಆ ಪ್ರಕಾರ ಪುಣೆ ತುಳುಕೂಟದ ಟ್ರಸ್ಟಿ, ಧಾರ್ಮಿಕ ಸೇವಾಕರ್ತ, ತುಳು ಭಾಷಾ ಪ್ರೇಮಿ, ಸಾಮಾಜಿಕ, ಶೈಕ್ಷಣಿಕ, ಕಲಾ ಸೇವಕ, ಅಹ್ಮದ್ ನಗರದ ಉದ್ಯಮಿ ಕೆ.ಕೆ ಶೆಟ್ಟಿಯವರಿಗೆ ‘ತೌಳವ ಛತ್ರಪತಿ’ ಬಿರುದು ನೀಡಿ ಸನ್ಮಾನಿಸಲಾಯಿತು. ಸದಾನಂದ ಕೆ ಶೆಟ್ಟಿ ಮತ್ತು ಗಣೇಶ್ ಕುಲಾಲ್ ರವರನ್ನು ಶಾಲು, ಹಾರ, ಫಲಪುಷ್ಪ, ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು. ಇವರ ಸನ್ಮಾನ ಪತ್ರವನ್ನು ಜಗದೀಪ್ ಶೆಟ್ಟಿ, ಶ್ವೇತಾ ಎಚ್ ಮೂಡಬಿದ್ರಿ ಮತ್ತು ಶಶಿಕಾಂತಿ ಎನ್ ದೇವಾಡಿಗ ಓದಿದರು ಹಾಗೂ ವೇದಿಕೆಯಲ್ಲಿದ್ದ ಅತಿಥಿ ಗಣ್ಯರನ್ನು ಸ್ಮರಣಿಕೆ ನೀಡಿ ಸತ್ಕರಿಸಲಾಯಿತು. ತುಳು ಕೂಟದ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಪುಣೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಮತ್ತು ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರು ಗುತ್ತುರವರನ್ನು ವಿಶೇಷವಾಗಿ ಗೌರವಿಸಲಾಯಿತು ಮತ್ತು ಪದಾಧಿಕಾರಿಗಳು ಸಂಪೂರ್ಣ ಸಹಕಾರವನ್ನಿತ್ತರು. ತುಳುಕೂಟದ ಟ್ರಸ್ಟಿ ಪ್ರವೀಣ್ ಶೆಟ್ಟಿ ಪುತ್ತೂರುರವರ ಪ್ರಾಯೋಜಕತ್ವದಲ್ಲಿ 2024-25 ರ ಸಾಲಿನ ಶೈಕ್ಷಣಿಕ ವರ್ಷದ ಪ್ರತಿಭಾನ್ವಿತ ವಿಧ್ಯಾರ್ಥಿಗಳು ಮತ್ತು ಸಾಧಕರನ್ನು ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ತುಳುಕೂಟದ ಸದಸ್ಯರುಗಳಿಂದ, ಮಕ್ಕಳಿಂದ ನೃತ್ಯ ವೈಭವ, ತುಳುನಾಡ ಸೊಬಗನ್ನು ಸಾರುವ ನೃತ್ಯರೂಪಕ ಮತ್ತು ಕ್ರೇಜ್ ಪ್ಲಾನೆಟ್ ಮುಂಬಯಿ ಇವರಿಂದ ಸಾಂಸಾರಿಕ ನಾಟಕ ‘ಮಣ್ಣಿ’ ಪ್ರದರ್ಶನ ಗೊಂಡಿತು. ಪುಣೆ ಬಂಟರ ಸಂಘದ ಸಂಪೂರ್ಣ ಸಹಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ, ತುಳುಕೂಟದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಮಹಿಳಾ ಸಮಿತಿ, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಅಕ್ಷತಾ ಸುಜಿತ್ ಶೆಟ್ಟಿ ಮತ್ತು ತಾರಾನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಶೆಟ್ಟಿ ಧನ್ಯವಾದಗೈದರು. ನಂತರ ತುಳುನಾಡ ಶೈಲಿಯ ಪ್ರೀತಿ ಭೋಜನ ನಡೆಯಿತು.
ಚಿತ್ರ, ವರದಿ : ಹರೀಶ್ ಮೂಡುಬಿದಿರೆ