ಹೃದಯ ಪೂರ್ವಕವಾಗಿ ಸಮಯಕ್ಕೆ ಸರಿಯಾಗಿ ಮತ್ತು ಅವಶ್ಯಕತೆಗೆ ಅನುಗುಣವಾಗಿ ನಾವು ಮಾಡುವ ಸೇವೆ ಸರಿಯಾದ ವ್ಯಕ್ತಿಗೆ ತಲುಪಿಸುವ ಸೇವಾಧರ್ಮ ನಮ್ಮಿಂದ ಆಗಬೇಕು. ಅದೇ ರೀತಿ ಯಾವುದೇ ವ್ಯಕ್ತಿಯ ಕಷ್ಟ ಸಮಯದಲ್ಲಿ ಅವಶ್ಯಕತೆಗೆ ಸಹಾಯ ಮಾಡಲು ಯಾರಾದರೂ ಸಿಕ್ಕೇ ಸಿಗುತ್ತಾರೆ ಇದು ನಿಯಮ. ಪುಣೆ ಬಂಟರ ಭವನದ ರೂವಾರಿ ಸಂತೋಷ್ ಶೆಟ್ಟಿಯವರ ಮಹತ್ವಾಕಾಂಕ್ಷೆಯ ಯೋಜನೆ ಕಲ್ಪ ವೃಕ್ಷದಲ್ಲಿ ಅದೆಷ್ಟೋ ಸಮಾಜದ ಅಶಕ್ತರಿಗೆ ಸಹಾಯ ಆಗಿದೆ. ಇದರಲ್ಲಿ ಸೇವಾ ಕಾರ್ಯ ಮಾಡುವ ಭಾಗ್ಯ ನನಗೂ ಸಿಕ್ಕಿದೆ. ಇದು ನನ್ನ ಸಮಾಜಕ್ಕಾಗಿ ನಾನು ಮಾಡುವ ಸೇವೆಯೆಂದೇ ಪರಿಗಣಿಸಿದ್ದೇನೆ. ಸಮಾಜದ ಮಕ್ಕಳು ಯಾರೂ ಕೂಡಾ ವಿದ್ಯೆಯಿಂದ ವಂಚಿತರಾಗಬಾರದು. ಸೃಷ್ಟಿಕರ್ತ ಪ್ರತಿಯೊಬ್ಬನ ಬದುಕಿನಲ್ಲಿ ಏನಾದರು ಬರೆದಿಡುತ್ತಾನೆ. ಅದನ್ನು ಸಾದಿಸುವ ಇಚ್ಚಾ ಶಕ್ತಿ ನಮ್ಮಲ್ಲಿರಬೇಕು. ಇದೇ ನನ್ನ ಜೀವನದಲ್ಲಿ ಕೂಡಾ ಬಂದಿದೆ. ವಿಚಾರಧಾರೆ ಸರಿಯಾಗಿದ್ದು ಒಂದೇ ದೃಡ ನಿರ್ಧಾರ, ಇಳಿದ ಕಾರ್ಯದಲ್ಲಿ ಸಾಧನೆ ಮಾಡಿ ಗುರಿ ಮುಟ್ಟಬೇಕು ಎಂಬ ಛಲ ಕಠಿನ ಪರಿಶ್ರಮ ಇದ್ದಿದರಿಂದ ಇಲ್ಲಿಯವರೆಗೆ ಬಂದಿದ್ದೇನೆ ಮತ್ತು ದೇಶ ವಿದೇಶದಲ್ಲಿ ಹೆಸರನ್ನು ಗಳಿಸುವಂತೆ ಆಯಿತು. ಇದು ನನ್ನ ತಂದೆ ತಾಯಿ ಮಾಡಿದ ಪುಣ್ಯ ಫಲದಿಂದ ಬಂದಿದೆ. ಮಕ್ಕಳು ಕೂಡಾ ಹಾಗೆ ಸಿಕ್ಕಿದ ಸಹಾಯವನ್ನು ಸರಿಯಾಗಿ ಉಪಯೋಗಿಸಿ ಉನ್ನತ ಮಟ್ಟದ ಶಿಕ್ಷಣ ಪಡೆದು ಛಲ ಮತ್ತು ಕಠಿನ ಪರಿಶ್ರಮದಿಂದ ಗುರಿ ಮುಟ್ಟುವ ತನಕ ವಿರಮಿಸದೇ ಸಾಧಿಸಬೇಕು. ವಿಧ್ಯಾರ್ಥಿಗಳಿಗೆ ಇದೇ ನನ್ನ ಕಿವಿ ಮಾತು. ನಮ್ಮ ಹಿರಿಯರ ಕಾಲದಿಂದಲೂ ಯಾವುದೋ ಪ್ರಕೃತಿ ನಿಯಮದ ಕಾರಣಕ್ಕೆ ಆಟಿ ತಿಂಗಳಿಗೆ ಮಹತ್ವ ಇದೆ. ಇಂದು ಕೂಡಾ ನಮ್ಮ ಸಂಸ್ಕ್ರತಿ ಆಚರಣೆ ಬಗ್ಗೆ ತಿಳಿ ಹೇಳುವ ಆಚರಣೆ ಆಟಿದ ಕೂಟ ಮಹತ್ವ ಪಡೆದಿದೆ. ಅಧ್ಯಕ್ಷರಾದ ಅಜಿತ್ ಹೆಗ್ಡೆ ಮತ್ತು ಮಹಿಳಾ ಅಧ್ಯಕ್ಷೆ ಶಮ್ಮಿ ಹೆಗ್ಡೆಯವರ ನೇತೃತ್ವದಲ್ಲಿ ಎರಡೂ ಕಾರ್ಯಕ್ರಮಗಳು ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ನಡೆದಿದೆ ಎಂದು ಬಯೋರಡ್ ಮೆಡಿಸಿಸ್ ಪ್ರೈ ಲಿಮಿಟೆಡ್ ನ ಎಂಡಿ, ಪುಣೆ ಬಂಟರ ಸಂಘದ ಟ್ರಸ್ಟಿ ಜಿತೇಂದ್ರ ಹೆಗ್ಡೆ ನುಡಿದರು.

ಪುಣೆ ಬಂಟರ ಸಂಘದ ಶಕುಂತಲಾ ಜಗನ್ನಾಥ್ ಶೆಟ್ಟಿ ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ಸಮಾಜದ ವಿಧ್ಯಾರ್ಥಿಗಳಿಗೆ ಅರ್ಥಿಕ ಸಹಾಯಧನ ವಿತರಣೆ, ಪ್ರತಿಭಾನ್ವಿತ ಮಕ್ಕಳ ಸತ್ಕಾರ ಸಮಾರಂಭ ಮತ್ತು ಮಹಿಳಾ ವಿಭಾಗದ ಆಯೋಜನೆಯಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮವು ಆಗಸ್ಟ್ 3 ರವಿವಾರದಂದು ಪುಣೆ ಬಂಟರ ಸಂಘದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಭವನದಲ್ಲಿ ಜರಗಿತು. ಪುಣೆ ಬಂಟರ ಸಂಘದ ಗೌರವಾಧ್ಯಕ್ಷರಾದ ಸಂತೊಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಗೌರವಾಧ್ಯಕ್ಷತೆಯಲ್ಲಿ, ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತುರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಬಯೋರಡ್ ಮೆಡಿಸಿಸ್ ಪ್ರೈ ಲಿಮಿಟೆಡ್ ನ ಎಂಡಿ, ಪುಣೆ ಬಂಟರ ಸಂಘದ ಟ್ರಸ್ಟಿ ಜಿತೇಂದ್ರ ಹೆಗ್ಡೆ, ಗೌರವ ಅತಿಥಿಗಳಾದ ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಹೋಬಳಿಯ ಅಧ್ಯಕ್ಷೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಶ್ರೀಮತಿ ವಿಜಯಲಕ್ಷ್ಮಿ ಪಿ ರೈ, ಕೆ.ಎಸ್.ಎಚ್ ಇಂಟರ್ನ್ಯಾಷನಲ್ ಪ್ರೈ ಲಿಮಿಟೆಡ್ ನ ಡೈರೆಕ್ಟರ್, ಪುಣೆ ಮಹಿಳಾ ಸೇವಾ ಮಂಡಲ ಸಮಿತಿ ಸದಸ್ಯೆ ರಾಖಿ ಶೆಟ್ಟಿ, ಬಂಟರ ಸಂಘದ ಉಪಾದ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಪ್ರ. ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣಂಜಾರ್, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಮ್ಮಿ ಎ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ, ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳಾದ ಸುಧಾಕರ್ ಸಿ ಶೆಟ್ಟಿ, ನಾರಾಯಣ ಹೆಗ್ಡೆ, ಸಂದೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷರುಗಳಾದ ವಿನೋದ ಶೆಟ್ಟಿ, ಪ್ರೇಮಾ ಅರ್. ಶೆಟ್ಟಿ, ಶಾಲಿನಿ ಎಂ ಶೆಟ್ಟಿ, ನಯನಾ ಸಿ ಶೆಟ್ಟಿಯವರು ಉಪಸ್ಥಿತರಿದ್ದರು.
ಶಕುಂತಲಾ ಜಗನ್ನಾಥ್ ಶೆಟ್ಟಿ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯ ಈ ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಅತಿಥಿ ಗಣ್ಯರು, ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಲತಾ ಎಸ್ ಶೆಟ್ಟಿ ಪ್ರಾರ್ಥನೆಗೈದರು. ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು ಸ್ವಾಗತಿಸಿದರು. ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಗಣ್ಯರಾದ ಜಿತೇಂದ್ರ ಹೆಗ್ಡೆ, ವಿಜಯಲಕ್ಷ್ಮಿ ಪಿ ರೈ, ರಾಖಿ ಶೆಟ್ಟಿಯವರನ್ನು ಶಾಲು ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇವರ ಪರಿಚಯವನ್ನು ಕ್ರಮವಾಗಿ ಅಭಿನಂದನ್ ಶೆಟ್ಟಿ, ಶಾಲಿನಿ ಎಂ ಶೆಟ್ಟಿ, ನೀನಾ ಬಿ ಶೆಟ್ಟಿ ಓದಿದರು. ಎಂ.ಆರ್.ಜಿ ಗ್ರೂಪ್ ಸಿಎಂಡಿ ಪ್ರಕಾಶ್ ಶೆಟ್ಟಿ ಪ್ರಾಯೋಜಿತ ವಿದ್ಯಾದಾತ, ಗಂಧರ್ವ ಗ್ರೂಪ್ ಆಫ್ ಹೋಟೆಲ್ಸ್ ನ ಸಿಎಂಡಿ ಜಯಂತ್ ಶೆಟ್ಟಿ ಪ್ರಾಯೋಜಿತ ಆರೋಗ್ಯದಾತ, ವಿಂಡ್ಸಾರ್ ರೆಫ್ರಾಕ್ಟೋರಿಸ್ ನ ಎಂ.ಡಿ ದಯಾಶಂಕರ್ ಶೆಟ್ಟಿ ಪ್ರಾಯೋಜಿತ ಅನ್ನದಾತ, ಬಯೋರಾಡ್ ಮೆಡಿಸಿಸ್ ಪ್ರೈ ಲಿಮಿಟೆಡ್ ನ ಎಂಡಿ ಜಿತೇಂದ್ರ ಹೆಗ್ಡೆ ಪ್ರಾಯೋಜಿತ ಆಶ್ರಯದಾತ ಹಾಗೂ ಶಬರಿ ಇಂಡಸ್ತ್ರೀಯಲ್ ಕ್ಯಾಟರಿಂಗ್ ಪ್ರೈ ಲಿಮಿಟೆಡ್ ನ ಸಿಎಂಡಿ ಕೆ.ಕೆ ಶೆಟ್ಟಿ ಪ್ರಾಯೋಜಿತ ಕ್ರೀಡಾದಾತ ಯೋಜನೆಗಳ ಅಡಿಯಲ್ಲಿ ಸುಮಾರು ಒಟ್ಟು 25 ಲಕ್ಷದವರೆಗೆ ಸಮಾಜದ ವಿದ್ಯಾರ್ಥಿಗಳಿಗೆ ಸಹಾಯಧನ, ದತ್ತು ಸ್ವೀಕಾರ, ಅನಾರೋಗ್ಯ ಪೀಡಿತರಿಗೆ ಧನ ಸಹಾಯ, ವಿಧವಾ ಸಹಾಯ ಧನ ಹಾಗೂ ಇನ್ನಿತರ ಕಷ್ಟ ಕಾರ್ಯಗಳಿಗೆ ಸಹಾಯಧನ ವಿತರಿಸಲಾಯಿತು. ಅಲ್ಲದೇ ಶೈಕ್ಷಣಿಕ ವರ್ಷದಲ್ಲಿ 10 ಮತ್ತು12 ನೇ ತರಗತಿಯಲ್ಲಿ ಶೇಕಡಾ 85% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿಧ್ಯಾರ್ಥಿಗಳ ಸತ್ಕಾರ ನಡೆಯಿತು ಹಾಗೂ ವಿದ್ಯಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಸಮಾಜದ ಪ್ರತಿಭೆಗಳಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನ ನಡೆಯಿತು. ಇದರ ವರದಿಯನ್ನು ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಗೀತಾ ಆರ್ ಶೆಟ್ಟಿಯವರು ಓದಿದರು.
ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಬಾಳಿಕೆ ಕುರ್ಕಿಲ್ ಬೆಟ್ಟು ಮಾತನಾಡಿ, ಪುಣೆ ಬಂಟರ ಸಂಘದ ಇತಿಹಾಸದಲ್ಲೇ ಈ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆ ಬಹಳ ಶ್ರೇಷ್ಟ ಕಾರ್ಯಕ್ರಮ. ನನ್ನ ಕಾರ್ಯಾವಧಿಯಲ್ಲಿ ಮೊಳಕೆಯೊಡೆದ ಈ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆ ಹೆಮ್ಮರವಾಗಿ ಬೆಳೆಯುತ್ತಿದೆ. ಕಲ್ಪವೃಕ್ಷದಂತೆ ನಾವು ಏನು ಪ್ರಾರ್ಥನೆ ಮಾಡಿದರೆ ಕೊಡುತ್ತದೆಯೋ ಅದೇ ರೀತಿ ದೂರ ದೃಷ್ಟಿ ಇಟ್ಟು ಕೊಂಡೇ ಯೋಜನೆ ರೂಪಿಸಲಾಗಿದೆ. ಇದರ ಸತ್ಪಲವನ್ನು ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಡೆದು ಕೃತಾರ್ಥರಾಗಿದ್ದಾರೆ. ಹಾಗೆಯೇ ತಾವು ಸಮಾಜದಲ್ಲಿ ಬೆಳೆದು ಸಮಾಜಕ್ಕಾಗಿ ಸೇವೆ ಮಾಡುವ ಸಂಕಲ್ಪವನ್ನು ಮಾಡಬೇಕು. ದಿ. ಜಗನ್ನಾಥ ಶೆಟ್ಟಿಯವರು ನನ್ನ ಗುರು. ಎಂ.ಅರ್.ಜಿ ಪ್ರಕಾಶ್ ಶೆಟ್ಟಿ ಹಾಗೂ ಮಹಾ ದಾನಿಗಳ ದಾನ, ಮಾರ್ಗದರ್ಶನ ಮತ್ತು ಆಶಿರ್ವಾದದಿಂದ ಈ ಯೋಜನೆ ಮಾಡಲು ನನ್ನಿಂದ ಸಾಧ್ಯವಾಯಿತು. ಕಲ್ಪವೃಕ್ಷದಂತಹ ಮಾನವೀಯತೆಯ ಸೇವೆ, ಸಂಸ್ಕತಿ ಮತ್ತು ಶ್ರೇಷ್ಠ ನೀತಿಶಾಸ್ತ್ರದ ಜೊತೆಯಲ್ಲಿ ಸೇವೆ ಮಾಡುವ ದಾನಿಗಳು ನಮ್ಮಲ್ಲಿದ್ದಾರೆ. ಇಂತಹ ಕಾರ್ಯ ಮಾಡಲು ನಾಯಕತ್ವ ಕೂಡಾ ಮುಖ್ಯ. ಒಂದು ನಾಯಕತ್ವದಿಂದ ಮತ್ತೊಂದು ನಾಯಕತ್ವ ಹುಟ್ಟಲು ಸಾದ್ಯ ಎಂಬುದಕ್ಕೆ ನಮ್ಮ ಬಂಟರ ಸಂಘ ಕಾರಣವಾಗುತ್ತದೆ. ನಮ್ಮ ಐಕ್ಯತೆಯ ಶಕ್ತಿ ಇಲ್ಲಿ ಎದ್ದು ತೋರುತ್ತಿದೆ. ಸಾಮಾಜಿಕ ಚಿಂತನೆಯೊಂದಿಗೆ ಪ್ರಕಾಶ ಶೆಟ್ಟಿಯವರು ಮಾಡುವ ಸೇವೆಯಿಂದ ವ್ಯಕ್ತಿ ಎತ್ತರಕ್ಕೆ ಏರಬಹುದು ಎಂಬುದನ್ನು ತಿಳಿದುಕೊಂಡಿದ್ದೇವೆ. ನಿಷ್ಕಳಂಕ ಮನಸ್ಸಿನಿಂದ ಸಮಾಜಕ್ಕಾಗಿ ಉದಾತ್ತ ಕಾರ್ಯ ಮಾಡುವ ಅಜಿತ್ ಹೆಗ್ಡೆಯವರು ಅಧ್ಯಕ್ಷರಾಗಿ ಸಂಘವನ್ನು ಮತ್ತಷ್ಟು ಪ್ರಗತಿ ಮತ್ತು ಸದೃಡಗೊಳಿಸಲಿದ್ದಾರೆ. ಮಹಿಳಾ ಕಾರ್ಯಾಧ್ಯಕ್ಷೆ ಶಮ್ಮಿ ಹೆಗ್ಡೆಯವರು ತನ್ನ ಮಹಿಳಾ ಸಂಘಟನೆಯಲ್ಲಿ ಉತ್ತಮೋತ್ತಮ ಕಾರ್ಯಗಳ ಮೂಲಕ ಮುನ್ನಡೆಯಲಿದ್ದಾರೆ. ಜಿತೇಂದ್ರ ಹೆಗ್ಡೆ, ವಿಜಯಲಕ್ಷ್ಮಿ ರೈ ,ರಾಖಿ ಶೆಟ್ಟಿಯವರು ಉತ್ತಮ ವಿಚಾರಧಾರೆಗಳನ್ನು ಸಮಾಜಕ್ಕೆ ನೀಡಿದ್ದಾರೆ. ಇಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮ ನಡೆದಿದೆ ಎಂದರು.
ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಗೆ ಸಹಕಾರ ನೀಡಿದ ಸಮಾಜದ ದಾನಿಗಳನ್ನು ಸತ್ಕರಿಸಲಾಯಿತು. ಅತಿಥಿ ಗಣ್ಯರು ಸಮಾಜ ಕಲ್ಯಾಣ ಯೋಜನೆ ಮತ್ತು ಆಟಿ ವಿಶೇಷತೆಯ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿನಂದನ್ ಶೆಟ್ಟಿ ನೇತೃತ್ವದಲ್ಲಿ ಬಂಟ್ಸ್ ಸಂಘ ಯೂತ್ ವಿಂಗ್ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಭವನದ ಧರ್ಮ ಚಾವಡಿಯಲ್ಲಿರುವ ದೇವರ ಮಂಟಪದಲ್ಲಿ ಪೂಜೆ, ಪ್ರಾರ್ಥನೆಗೈದು ಕಾರ್ಯಕ್ರಮ ಮೊದಲ್ಗೊಂಡಿತು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ಗಾಯಕ ವಿಜಯ್ ಶೆಟ್ಟಿ ಮೂಡುಬೆಳ್ಳೆ ಮತ್ತು ಪುಣೆಯ ಗಾಯಕರುಗಳಿಂದ ಭಕ್ತಿಗೀತೆ ಹಾಗೂ ಜಾನಪದ ಗಾಯನ ಕಾರ್ಯಕ್ರಮ ನಡೆಯಿತು. ನಂತರ ಅಕ್ಷತಾ ಎಸ್. ಶೆಟ್ಟಿ ಮತ್ತು ಪದ್ಮಾಕ್ಷಿ ಎಸ್. ಶೆಟ್ಟಿ ನಿರ್ದೇಶನದಲ್ಲಿ ಸಮಾಜದ ಭಾಂದವರಿಂದ ಆಟಿ ತಿಂಗಳ ವಿಶೇಷತೆಯನ್ನು ಸಾರುವ ಸಾಂಪ್ರದಾಯಿಕ ಕಿರು ರೂಪಕ, ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು ಹಾಗೂ ಅತಿಥಿ ಗಣ್ಯರಿಗೆ ಆಟಿಯ ವಿಶೇಷತೆಯ ತುಳುನಾಡ ಶೈಲಿಯ ಸುಮಾರು 40ಕ್ಕೂ ಮಿಕ್ಕಿದ ಆಹಾರ ಪದಾರ್ಥಗಳ ಪ್ರದರ್ಶನ ಮಾಡಲಾಯಿತು. ಪುಣೆ ಬಂಟರ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳ ಸಹಕಾರದೊಂದಿಗೆ ನಡೆದ ಈ ಸಮಾರಂಭದಲ್ಲಿ ಬಹು ಹೆಚ್ಚಿನ ಸಂಖ್ಯೆಯ ಸಮಾಜ ಭಾಂದವರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಶೋಭೆ ತಂದರು. ಅಕ್ಷತಾ ಸುಜಿತ್ ಶೆಟ್ಟಿ ಮತ್ತು ತಾರಾನಾಥ್ ಶೆಟ್ಟಿ ಮಡಂತ್ಯಾರ್ ಕಾರ್ಯಕ್ರಮ ನಿರೂಪಿಸಿ, ಪ್ರ. ಕಾರ್ಯದರ್ಶಿ ಸುಧೀರ್ ಶೆಟ್ಟಿ ಧನ್ಯವಾದಗೈದರು. ನಂತರ ತುಳುನಾಡ ಶೈಲಿಯ ಸಾಂಪ್ರದಾಯಿಕ ಊಟೋಪಚಾರ ನಡೆಯಿತು.
ಚಿತ್ರ, ವರದಿ : ಹರೀಶ್ ಮೂಡುಬಿದಿರೆ, ಪುಣೆ