ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ಇದರ ಸಾರ್ವಜನಿಕ ಗಣೇಶೋತ್ಸವ ಸಮಿತಿ ರಚನೆಯು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ. ಜಯರಾಮ ರೈ ಕೆಯ್ಯೂರು ಅವರ ಅಧ್ಯಕ್ಷತೆಯಲ್ಲಿ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಸಮಿತಿಯ ಗೌರವಾಧ್ಯಕ್ಷರಾಗಿ ಡಾ. ಹರ್ಷಕುಮಾರ್ ರೈ ಮಾಡಾವು, ಅಧ್ಯಕ್ಷರಾಗಿ ಹರೀಶ್ ಕಣಿಯಾರು, ಉಪಾಧ್ಯಕ್ಷರಾಗಿ ವಿನಯ ಕೊಡ್ಲೆ, ಕಾರ್ಯದರ್ಶಿಯಾಗಿ ದೀಕ್ಷಿತ್ ಕಣಿಯಾರು ಹಾಗೂ ಕೋಶಾಧಿಕಾರಿಯಾಗಿ ಅಶೋಕ ಇಳಂತಾಜೆ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಶೀನಪ್ಪ ರೈ ದೇವಿನಗರ, ರವೀಂದ್ರ ಕೆ. ಎಸ್. ಕಣಿಯಾರು, ಪ್ರಮೀತ್ ರಾಜ್ ಕಟ್ಟತ್ತಾರು, ಮೋಹನ ಅಜಿಲ ಕಣಿಯಾರು, ಜಯಂತ ಪೂಜಾರಿ ಕೆಂಗುಡೇಲು, ಈಶ್ವರ ಕುಲಾಲ್ ಬೊಳಿಕ್ಕಳ, ರಾಧಾಕೃಷ್ಣ ಗೌಡ ಕೆಯ್ಯೂರು, ರಾಕೇಶ್ ಬಲ್ಲಾಳ್ ಸಣಂಗಳ, ವಿನಯ್ ಕುಮಾರ್ ಸಣಂಗಳ, ಇವರನ್ನು ಆಯ್ಕೆ ಮಾಡಲಾಯಿತು.

ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಅರ್ಚಕ ಶ್ರೀನಿವಾಸ್ ರಾವ್, ಉಮಾಕಾಂತ ಬೈಲಾಡಿ, ಜಲಜಾಕ್ಷಿ ಎ. ರೈ ಸಾಗು, ಸುಜಯ ಕೆಯ್ಯೂರು, ಅಶೋಕ್ ರೈ ದೇರ್ಲ, ಕೆ.ಎಸ್. ಚಂದ್ರಶೇಖರ ಪೂಜಾರಿ ಕಣಿಯಾರು, ದಾಮೋದರ ಪೂಜಾರಿ ಕೆಂಗುಡೇಲು, ಹರಿನಾಥ ನಾಯ್ಕ ಇಳಂತಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಾಲಯದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶಶಿಧರ ರಾವ್ ಬೊಳಿಕಲ, ಎಸ್.ಬಿ ಜಯರಾಮ ರೈ ಬಳಜ್ಜ, ಚೆನ್ನಪ್ಪ ರೈ ದೇರ್ಲ, ಸದಸ್ಯರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತಾದಿಗಳು, ದೇವಾಲಯದ ನೌಕರರು ಸಭೆಯಲ್ಲಿ ಉಪಸ್ಥಿತರಿದ್ದರು.





































































































