ಮುಂಬಯಿ, ಪಾಲ್ಗರ್, ವಸಾಯಿ ಹಾಗೂ ದುಬೈಯಲ್ಲಿ ಬಾರಿ ಜನಪ್ರಿಯತೆ ಗಳಿಸಿರುವ ಹೋಟೆಲ್ “ಫಾರ್ಮ್ ಹೌಸ್” ನ ಆಡಳಿತ ನಿರ್ದೇಶಕ, ಮುಂಬಯಿ ಬಂಟರ ಸಂಘದ ವಸಾಯಿ ದಹಾಣು ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಹರೀಶ್ ಪಾಂಡು ಶೆಟ್ಟಿಯವರ ಧರ್ಮಪತ್ನಿ ಮಧುರಾ ಹರೀಶ್ ಶೆಟ್ಟಿಯವರು ಇತ್ತೀಚಿಗೆ ದಿಲ್ಲಿಯಲ್ಲಿ ನಡೆದ ಮಿಸೆಸ್ ವರ್ಲ್ಡ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಗತ್ತಿನ ವಿವಿಧ ದೇಶಗಳ ಸ್ಪರ್ಧಿಗಳ ಪೈಕಿ ಸ್ಪರ್ಧೆಯಲ್ಲಿ ಮಿಸೆಸ್ ಟ್ಯಾಲೆಂಟೆಡ್ ಮತ್ತು 4 ನೇ ರನ್ನರ್ ಅಪ್ ಆಗಿ ನಾಮ ನಿರ್ದೇಶನಗೊಂಡಿದ್ದಾರೆ.
ಶ್ರೀಮತಿ ಮಧುರಾ ಹರೀಶ್ ಶೆಟ್ಟಿ ಅವರನ್ನು ಪಾಂಡು ಎಲ್ ಶೆಟ್ಟಿ, ಪದ್ಮಾವತಿ ಪಿ ಶೆಟ್ಟಿ, ಹರೀಶ್ ಪಿ ಶೆಟ್ಟಿ, ಭರತ್ ಪಿ ಶೆಟ್ಟಿ, ನವ್ಯ ಬಿ ಶೆಟ್ಟಿ, ಪಳ್ಳಿ ಕರುಣಾಕರ್ ಶೆಟ್ಟಿ, ಸುಧಾಮಣಿ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬಂಟರ ಸಂಘದ ವಸಾಯಿ ದಹಾಣು ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶಶಿಧರ್ ಶೆಟ್ಟಿ ಇನ್ನಂಜೆ, ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಕರ್ನಾಟಕ ಸಂಘ ವಸಾಯಿಯ ಅಧ್ಯಕ್ಷ ದೇವೇಂದ್ರ ಬುನ್ನಾನ್ ರವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
